ಕಾಮನ್ವೆಲ್ತಿನ ಆರ್ಥಿಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಕಾಮನ್ವೆಲ್ತಿನ ಆರ್ಥಿಕತೆ''' ಎಂಬ ಪರಿಕಲ್ಪನೆ, [[ಕಾಮನ್‌ವೆಲ್ತ್‌_ರಾಷ್ಟ್ರಗಳು]] ಜೊತೆಗೂಡಿದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದು ಸುಲಭ ಎಂಬ ದೃಷ್ಟಿಯಿಂದ ಆರಂಭವಾಯಿತು.<ref>https://www.tendringdc.gov.uk/council/elections-voting/list-commonwealth-countries-voting-rights</ref>[[ಐರೋಪ್ಯ_ಆರ್ಥಿಕ_ಸಮುದಾಯ]], ಸಾರ್ಕ್, ಸ್ಕೋ, ಜಿ-೭, ಜಿ-೭ ಮತ್ತು ಜಿ-೮೦ ಇವೆಲ್ಲವೂ [[ಕಾಮನ್‌ವೆಲ್ತ್‌_ರಾಷ್ಟ್ರಗಳು|ಕಾಮನ್‌ವೆಲ್ತ್‌_ರಾಷ್ಟ್ರಗಳ]] ಯಶಸ್ಸಿನಿಂದ ಉತ್ತೇಜನ ಪಡೆದು ಆರಂಭಗೊಂಡ ಸಮುದಾಯಗಳು.
{{Ref improve}}
==ಸಂರಚನೆ==
ಈ ರಾಷ್ಟ್ರಸಮುದಾಯವು ವಿಶ್ವದ ಕಾಲು ಭಾಗದಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯುಳ್ಳದ್ದಾದರೂ ಆರ್ಥಿಕ ದೃಷ್ಟಿಯಿಂದ ವಿಶ್ವದಲ್ಲಿ ಈ ಕ್ಷೇತ್ರದ ಪಾತ್ರ ಅಷ್ಟು ಗಮನಾರ್ಹವಾದ್ದಲ್ಲ. ಬ್ರಿಟನ್, ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಜ಼ಿಲ್ಯಾಂಡ್ ಬಿಟ್ಟರೆ ಏಷ್ಯ ಮತ್ತು ಆಫ್ರಿಕದಲ್ಲಿರುವ ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳೆಲ್ಲವೂ ಆರ್ಥಿಕ ದೃಷ್ಟಿಯಿಂದ ದಾಪುಗಾಲು ಹಾಕುತ್ತಿರುವ ರಾಷ್ಟ್ರಗಳು. ಈ ಅಂಶ ಅವುಗಳ ತಲಾದಾಯದ ಮಟ್ಟ ಹಾಗೂ ಉತ್ಪಾದನೆಯ ಮಾದರಿಯಿಂದ ವಿದಿತವಾಗುತ್ತದೆ. ಭಾರತದ ತಲಾವಾರು ಆದಾಯ ವಾರ್ಷಿಕ ೧೯೦೦ ಅಮೇರಿಕನ್ ಡಾಲರ್ ಆಗಿದೆ<ref>https://www.news18.com/news/india/indias-per-capita-income-rises-6-8-to-rs-11254-a-month-during-2019-20-2450053.html</ref> ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ 500 ಡಾಲರುಗಳಿಗಿಂತ ಕಡಿಮೆ ತಲಾದಾಯವಿರುವ ರಾಷ್ಟ್ರಗಳೆಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ಹಿಂದುಳಿದ ರಾಷ್ಟ್ರಗಳೆಂದು ಪರಿಗಣಿಸಲಾಗುವುದು. ಈ ರಾಷ್ಟ್ರಗಳಲ್ಲಿ ಸೇವಾ ವಲಯ, ಕೈಗಾರಿಕೆ ಮತ್ತು ಕೃಷಿ ಮುಖ್ಯ ಕಸುಬುಗಳು. ಇವುಗಳ ರಾಷ್ಟ್ರೀಯ ವರಮಾನದ ಸೇ. ೩೦ ರಷ್ಟು ಕೃಷಿಯಿಂದಲೇ ಬರುತ್ತದೆ. ಕೃಷಿಯ ಉತ್ಪಾದನ ಸಾಮರ್ಥ್ಯ ಕೈಗಾರಿಕೆಯದಕ್ಕಿಂತ ಬಹಳ ಕಡಿಮೆ.