"ಒಡೆಯರ ಕಾಲದ ಕನ್ನಡ ಸಾಹಿತ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
ಹಲವು ಕವಿಗಳ ಕಾವ್ಯಗಳೇ ರಾಜರುಗಳ ಐತಿಹ್ಯಕ್ಕೆ ಸಾಕ್ಷಿಯನ್ನು ಒದಗಿಸಿರುವುದು, ಒಡೆಯರ ಕಾಲದ ಕನ್ನಡ ಸಾಹಿತ್ಯ ವೈಶಿಷ್ಟ್ಯ.
==ಚಿಕ್ಕದೇವರಾಯ==
ಚಿಕ್ಕದೇವರಾಯನ ವಂಶಾವಳಿ ರಾಜನೃಪಚರಿತ್ರೆಯಿಂದಲೇ ಆರಂಭವಾಗಿದೆ. ಈ ದೊರೆ ಶ್ರೀವೈಷ್ಣವ ಧರ್ಮವನ್ನು ಸ್ವೀಕರಿಸಿದ. ಈತನ ಪ್ರಧಾನಮಂತ್ರಿ ಯಾಗಿದ್ದ 'ತಿರುಮಲಾರ್ಯ'ನೆಂಬ ಶ್ರೀವೈಷ್ಣವ ಕವಿ "ಕರ್ಣವೃತ್ತಾಂತಕಥೆ "ಎಂಬ ಸಾಂಗತ್ಯಕಾವ್ಯವನ್ನು ರಚಿಸಿದ್ದಾನೆ. ಇದು ಅಪೂರ್ವವಾದ ಕಾವ್ಯ. ಈಗ ದೊರೆತಿರುವ ಗ್ರಂಥದಲ್ಲಿ ಹನ್ನೊಂದು ಸಂಧಿಗಳೂ ಹನ್ನೆರಡನೆಯದರಲ್ಲಿ ಕೆಲವು ಪದ್ಯಗಳೂ ಇವೆ. ಮಹಾಭಾರತದ ಶಾಂತಿಪರ್ವದಲ್ಲಿ ಬಂದಿರುವ ಕರ್ಣನ ಚರಿತ್ರೆಯೇ ಈ ಗ್ರಂಥದ ವಸ್ತು.{{ref improve}}
 
==ಆರನೆ ಚಾಮರಾಜ ಒಡೆಯರ್==
ರಾಜ ಒಡೆಯನ ತರುವಾಯ ಪಟ್ಟಕ್ಕೆ ಬಂದ ಆರನೆ ಚಾಮರಾಜ ಒಡೆಯ ಚಾಮರಾಜೋಕ್ತಿವಿಲಾಸ" ಎಂಬ ಹೆಸರಿನಲ್ಲಿ ವಾಲ್ಮೀಕಿ ರಾಮಾಯಣವನ್ನು ಸರಳಗನ್ನಡ ಗದ್ಯಕಾವ್ಯವಾಗಿ ಬರೆದಿದ್ದಾನೆ. ಇದು ಮೂಲ ಗ್ರಂಥಕ್ಕೆ ಅನುಸಾರವಾದ ಗದ್ಯಾನುವಾದ. ಈ ಗ್ರಂಥವನ್ನು ಲೋಕೋಪಕಾರಕ್ಕಾಗಿ ಧೀಮಂತ ವಿದ್ವಾಂಸನಾದ ವಿರೂಪಾಕ್ಷನಿಂದ ಅರಸ ಬರೆಯಿಸಿದನೆಂಬ ಅರ್ಥಬರುವ ಒಂದು ಸಂಸ್ಕೃತ ಶ್ಲೋಕ ಗ್ರಂಥದ ಆರಂಭದಲ್ಲಿಯೇ ಬಂದಿದೆ. ಆದ್ದರಿಂದ ಇದು ಅರಸನ ಹೆಸರಿನಲ್ಲಿ ಅವನ ಆಶ್ರಿತನಾದ ವಿದ್ವಾಂಸನೊಬ್ಬ ಬರೆದದ್ದಾಗಿರಬಹುದೆಂದು ತೋರುತ್ತದೆ. ಚಾಮರಾಜ ಮಗೆಪ್ರಕಾಶವೆಂಬ ಇನ್ನೊಂದು ಗ್ರಂಥವನ್ನೂ ರಚಿಸಿರುವನೆಂಬ ಪ್ರತೀತಿ ಇದೆ. ಆದರೆ ಅದು ಬ್ರಹ್ಮೋತ್ತರಖಂಡದ ಕನ್ನಡ ಟೀಕೆಯೇ ಹೊರತು ಕಾವ್ಯವಲ್ಲ. ಈ ಎರಡು ಕೃತಿಗಳೂ ಆ ಕಾಲಕ್ಕೆ ರಾಜ ಮತ್ತು ಪ್ರಜೆಗಳಿಬ್ಬರಿಗೂ ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಬರೆಯುವ, ಬರೆಯಿಸುವ ಶ್ರದ್ದೆ ಹೆಚ್ಚಿದ್ದಿತೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ರಾಜನ ಆಶ್ರಯದಲ್ಲಿದ್ದ ರಾಮಚಂದ್ರನೆಂಬ ವಿದ್ವಾಂಸ ಒಂದು "ಅಶ್ವಶಾಸ್ತ್ರ"ವನ್ನು ರಚಿಸಿದ್ದಾನೆ. ಶಾಲಿಹೋತ್ರಕೃತವಾದ ಸಂಸ್ಕೃತ ಗ್ರಂಥವನ್ನು ಬಾಲಕರಿರುವಂತೆ ಸಾಮಗೋಪಾಂಗವಾಗಿ ಕನ್ನಡಿಸಿ ಬರೆದ ಅನುವಾದವಿದು. ಪದ್ಮಣಪಂಡಿತ ಈ ರಾಜನ ಆಣತಿಯಂತೆ "ಹಯಸಾರಸಮುಚ್ಚಯ" ಎಂಬ ಪದ್ಯಗ್ರಂಥವನ್ನು ರಚಿಸಿದ್ದಾನೆ. ತಾನು ವಿದ್ವಜ್ಜನಮಂಡನನೆಂದೂ ವೈದ್ಯಸುವಂಶಾಂಬರ ಸೂರ್ಯನೆಂದೂ ಕವಿ ಹೊಗಳಿಕೊಂಡಿದ್ದಾನೆ.<ref>https://www.karnataka.gov.in/Gazetteer/Publications/Special%20Publications/A%20Hand%20Book%20of%20Karnataka%202015/Chapter%2013%20Literature%20and%20Culture.pdf</ref>
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/965960" ಇಂದ ಪಡೆಯಲ್ಪಟ್ಟಿದೆ