"ಕುಮಾರದೇವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (Mithun Mijar ಸದಸ್ಯ:Mithun Mijar/ನನ್ನ ಪ್ರಯೋಗಪುಟ ಪುಟವನ್ನು ಕುಮಾರದೇವ ಕ್ಕೆ ಸರಿಸಿದ್ದಾರೆ)
 
 
ಕುಮಾರದೇವನ ಗ್ರಂಥಗಳ ವಿವರ ಹೀಗಿದೆ; ಮಹಾರಾಜ ತುರವು, ಶುದ್ದ ಶತಕಮ್, ವಿಜ್ಞಾನಸಾರಂ, ಅದ್ವೈತ ಉನ್ಮೈ, ಬ್ರಹ್ಮಾನುಭೂತಿ ವಿಲಕ್ಕಂ, ಜ್ಞಾನ ಅಮ್ಮಗೈ, ದಶಾವಸ್ಥೈ ಕಟ್ಟಳೈ, ದಶಾಕಾರ್ಯೈ ಕಟ್ಟಳೈ, ಸಿದ್ಧಾಂತ ಕಟ್ಟಳೈ, ಸಹಜನಿಷ್ಠೈ, ಬ್ರಹ್ಮಸಿದ್ಧಿ ಆಹವಳ್, ಶಿವದರ್ಶನ ಆಹವಳ್, ಆಗಮನೇರಿ ಆಹವಳ್, ವೇದನೇರಿ ಆಹವಳ್, ಬ್ರಹ್ಮಾನುಭವ ಆಹವಳ್, ಶಿವಸಮರಸವಾದ ಆಹವಳ್-ಮುಂತಾದವು ಮುಖ್ಯವಾದುವು. ಇವುಗಳಲ್ಲಿ ಮೊದಲನೆಯದು ಶ್ರೀ ಕುಮಾರದೇವನ ಆತ್ಮಕಥನ. ಮಹಾರಾಜನಾಗಿದ್ದವ ಇಹಜೀವನವನ್ನು ತೊರೆದು ಪಾರಮಾರ್ಥಿಕ ಸತ್ಯವನ್ನು ಅರಸುತ್ತ ಸಾರ್ಥಕ್ಯವನ್ನುಗಳಿಸಿ ಲೋಕಕ್ಕೆ ಆಧ್ಯಾತ್ಮ ಮಾರ್ಗದರ್ಶನ ನೀಡಿದ ಕುಮಾರದೇವನ ಕಥೆ ಇಲ್ಲಿದೆ. ಮಿಕ್ಕಿದ್ದೆಲ್ಲವೂ ಶೈವಮತಕ್ಕೆ ಸಂಬಂಧಪಟ್ಟಂತೆ ವೃದ್ಧಾಚಲದೇವಿಯ ಕೃಪೆಯಿಂದ ಬಂದ ಗ್ರಂಥಗಳು. ಕುಮಾರದೇವನಿಂದ ರಚಿತವಾದ ಆರು ಆಹವಳ್ ಗ್ರಂಥಗಳು ವೀರಶೈವ ಮತದ ವಿವಿಧ ಅಂಶಗಳನ್ನು ವಿವರಿಸುತ್ತವೆ. ಪಂಡಿತರ ಅಭಿಪ್ರಾಯದಲ್ಲಿ ಎಲ್ಲ ಗ್ರಂಥಗಳಿಗೂ ಮಕುಟಪ್ರಾಯವಾಗಿರುವುದೆಂದರೆ ಶುದ್ಧ ಶತಕ. ತತ್ತ್ವಜ್ಞಾನಿಯಾದ ಕುಮಾರದೇವ ಭಕ್ತಾಗ್ರೇಸರನೂ ಆಗಿದ್ದ. ಇದಕ್ಕೆ ನಿದರ್ಶನ ಪೆರಿಯ ನಾಯಕಿ ಆಮ್ಮನ್ ಪಾದುಕಂ ಎನ್ನುವ, ಭಕ್ತಿ ರಸಪೂರ್ಣ ಮತ್ತು ತಾತ್ತ್ವಿಕದರ್ಶನವನ್ನು ಒಳಗೊಂಡ, ದಶಶ್ಲೋಕಗಳು.
 
 
==ಉಲ್ಲೇಖಗಳು==
{{reflist}}
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/965891" ಇಂದ ಪಡೆಯಲ್ಪಟ್ಟಿದೆ