"ಕ್ರಿಯಾವಾದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
==ವಿಲಿಯಮ್ ಜೇಮ್ಸ್‍ನ ಫಲವಾದ==
ಜೀವಶಾಸ್ತ್ರದಲ್ಲಿ ಡಾರ್ವಿನ್ನನ ವಿಕಾಸವಾದ ಹುಟ್ಟಿದ ಮೇಲೆ ಕ್ರಿಯಾವಾದ ಇನ್ನೊಂದು ರೂಪ ತಾಳಿತು. ಸನ್ನಿವೇಶಕ್ಕೆ ಹೊಂದಿಕೊಳ್ಳುವುದೇ ಒಂದು ಪ್ರಾಣಿಯ ಅಥವಾ ಸಸ್ಯದ ಉಳಿವಿಗೂ ಬೆಳೆವಿಗೂ ಕಾರಣ. ಸರಿಯಾಗಿ ಹೊಂದಿಕೊಂಡದ್ದು ಉಳಿಯುತ್ತದೆ. ಹೊಂದಿಕೊಳ್ಳದ್ದು ಅಳಿಯುತ್ತದೆ. ಒಂದು ಪ್ರಾಣಿಯ ಅಂಗರಚನೆ ಈ ಹೊಂದಿಕೆಗೆ ಅನುಸಾರವಾಗಿ ಬದಲಾಯಿಸುತ್ತದೆ. ಈಗಿನ ಕುದುರೆಯ ವಂಶಕ್ಕೆ ಮೂಲವಾದ ಪ್ರಾಣಿಯ ಕಾಲಿನಲ್ಲಿ ಒಂದು ದೊಡ್ಡ ಮುಂಗೊರಸಿಗೆ ಸೇರಿದಂತೆ ಅದರ ಹಿಂದೆ ಅದಕ್ಕಿಂತ ಸಣ್ಣದಾದ ಹಿಂಗೊರಸುಗಳಿದ್ದುವು. ಈ ಹಿಂಗೊರಸುಗಳಿಂದ ಅದರ ಓಟಕ್ಕೆ ಯಾವ ರೀತಿಯ ಅನುಕೂಲವೂ ಇರಲಿಲ್ಲ. ಕೆಲಸವಿಲ್ಲದ್ದರಿಂದ ಅವು ಕ್ರಮಕ್ರಮವಾಗಿ ಸಣ್ಣವಾಗಿ ಹಿಂದಕ್ಕೆ ಸರಿದು ಈಗ ಕೇವಲ ಅವಶೇಷಗಳಾಗಿ ಉಳಿದಿವೆ. ಹೀಗೆಯೇ ತೀರ ಸರಳವಾದ ಜೀವಿಯಿಂದ ಹಿಡಿದು ಸಂಕೀರ್ಣ ದೇಹಪಡೆದ ಮಾನವನವರೆಗೆ, ಕಾರ್ಯಪ್ರವೃತ್ತಿಗೆ ಅನುಗುಣವಾಗಿ ಅಂಗಗಳ ಮತ್ತು ಇಡೀ ದೇಹದ ರಚನೆ ಮಾರ್ಪಡುತ್ತಿರುವುದನ್ನು ಕಾಣಬಹುದು. ಡಾರ್ವಿನ್ನನ ವಿಕಾಸವಾದದಿಂದ ಪ್ರೇರಿತವಾಗಿ ತತ್ತ್ವಶಾಸ್ತ್ರದಲ್ಲಿ ಹೊಸಬಗೆಯ ಕ್ರಿಯಾವಾದಗಳು ಹುಟ್ಟಿಕೊಂಡವು. ಫ್ರಾನ್ಸ್ ದೇಶದ ಪ್ರಸಿದ್ದ ತಾತ್ತ್ತ್ತ್ವಿಕನಾದ ಬರ್ಗ್‍ಸನ್ನನ ಸೃಷ್ಟ್ಯಾತಂಕ ಕ್ರಿಯಾವಾದ ಅವುಗಳಲ್ಲಿ ಒಂದು. ಇನ್ನೊಂದು ಬಗೆಯ ಕ್ರಿಯಾವಾದವನ್ನು ರೂಪಿಸಿದವ ಅಮೇರಿಕದ ತಾತ್ತ್ವಿಕ ಜಾನ್ ಡ್ಯೂಯಿ. <ref>https://www.betterhelp.com/advice/psychologists/pragmatism-functionalism-and-william-james-psychology/</ref>ಸತ್ತಿನಲ್ಲಾಗಲಿ ಜ್ಞಾನದಲ್ಲಾಗಲಿ ಸತ್ತ್ವವಿರುವುದು ಅದರ ಕ್ರಿಯಾಕಾರಿತ್ವದಲ್ಲೇ-ಎಂಬುದು ಇವರ ವಾದ. ಯಾವುದಾದರೂ ಇದೆ ಎಂದು ನಾವು ಬಗೆಯಬೇಕಾದರೆ ಅದು ಪರಿಣಾಮಕಾರಿಯಾಗಿರಬೇಕು. ಯಾವ ಭಾವನೆಯನ್ನೇ ಆಗಲಿ ಅದು ಸತ್ಯ ಎಂದು ನಾವು ಸ್ಥಿರಪಡಿಸಬೇಕಾದೆ ಅದರಿಂದ ನಾವು ನಿರೀಕ್ಷಿಸಬಹುದಾದ ಫಲ ದೊರೆಯಬೇಕು. ಜೀವನದಲ್ಲಿ ಪರಿಣಾಮಕಾರಿಯಾಗುವುದೇ ಸತ್ಯದ ಹೆಗ್ಗುರುತು. ಜ್ಞಾನ ಕೇವಲ ಬೆಳಕಲ್ಲ, ಅದು ಒಂದು ಶಕ್ತಿ, ಕ್ರಿಯಾಕಾರಕ ಸಾಧನ ಅಥವಾ ಕರಣ. ಆದ್ದರಿಂದ ಡ್ಯೂಯಿ ತನ್ನ ಜ್ಞಾನತತ್ತ್ವವನ್ನು ಕರಣತತ್ತ್ವವೆಂದು ಕರೆದಿದ್ದಾನೆ.<ref>https://www.ncbi.nlm.nih.gov/pubmed/11763887</ref> ಡ್ಯೂಯಿಗೆ ಪ್ರೇರಕವಾದದ್ದು ವಿಲಿಯಮ್ ಜೇಮ್ಸ್‍ನ ಫಲವಾದವೆಂಬ ಕ್ರಿಯಾವಾದ.<ref>https://psychology.fas.harvard.edu/people/william-james</ref>
==ನೋಡಿ==
 
*[https://kn.wikisource.org/s/2rn ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಯಾವಾದ]
 
==ಉಲ್ಲೇಖಗಳು==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/965210" ಇಂದ ಪಡೆಯಲ್ಪಟ್ಟಿದೆ