ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೪ ನೇ ಸಾಲು:
ಕಾಂಡದ ಮೇಲೆ ಶಾಖೋಪಶಾಖೆಗಳು ಹರಡಿಕೊಳ್ಳುವ ಬಗೆಗೆ ಕವಲೊಡೆಯುವಿಕೆಯೆಂದು ಹೆಸರು. ಇದರಲ್ಲಿ ಎರಡು ಮುಖ್ಯ ವಿಧಾನಗಳು.
 
===೧.ಪಾಶ್ರ್ವ ಕವಲುಗಳು (ಲ್ಯಾಟರಲ್ ಬ್ರ್ಯಾಂಚಸ್)===  
ಮುಖ್ಯಕಾಂಡದ ಮಗ್ಗುಲಿನಿಂದ ಹೊರಡುವ ಶಾಖೆಗಳಿಗೆ ಪಾರ್ಶ್ವ ಕವಲುಗಳೆಂದು ಹೆಸರು. ಈ ಪಾರ್ಶ್ವ ಕವಲು ಅನಿರ್ಬಂಧಿತ ಬೆಳೆವಣಿಗೆ ಹೊಂದಿ ಕೇಂದ್ರಾಭಿಗಾಮಿಯಾಗಿ (ಸೆಂಟ್ರಿಪೀಟಲ್) ಇರಬಹುದು. ಅಂದರೆ ಮುಖ್ಯಕಾಂಡದ ತುದಿ ನಿರಂತರವಾಗಿ ಎತ್ತರ ಬೆಳೆಯುತ್ತಿದ್ದಂತೆ ವಿವಿಧ ಹಂತಗಳಲ್ಲಿ ಕೆಳಗಿನ ಪಾರ್ಶ್ವಶಾಖೆಗಳೂ ಅಡ್ಡಡ್ಡಲಾಗಿ ಬೆಳೆಯುತ್ತ ಹೋಗುತ್ತವೆ. ಅತ್ಯಂತ ಕೆಳಗಿನ ಶಾಖೆಗಳು ಹಳೆಯವೂ ಉದ್ದವೂ ಆಗಿದ್ದು ಮೇಲಿನ ಶಾಖೆಗಳು ಹೊಸವೂ ಕಿರಿಯವೂ ಆಗಿರುತ್ತವೆ. ಉದಾಹರಣೆ-ಸರ್ವೆಗಿಡ, ಅಶೋಕ ಅಥವಾ ಕಂಬದಮರ ಇತ್ಯಾದಿ. ಇದರಿಂದ ಮರದ ಮೇಲ್ಭಾಗ ತ್ರಿಕೋನ ಇಲ್ಲವೆ ಪಿರಮಿಡ್ಡಿನ ಆಕೃತಿ ತಾಳುತ್ತದೆ. ಅಥವಾ ನಿರ್ಬಂಧಿತ ಬೆಳೆವಣಿಗೆ ಹೊಂದಿ ಕೇಂದ್ರಾಪಗಾಮಿಯಾಗಿ (ಸೆಂಟ್ರಿಫ್ಯೂಗಲ್) ಇರಬಹುದು; ಅಂದರೆ ಮುಖ್ಯ ಕಾಂಡ ಕೆಲಕಾಲ ತುದಿಮೊಗ್ಗಿನ ಸಹಾಯದಿಂದ ಬೆಳೆದ ಮೇಲೆ ಅದರ ಬೆಳೆವಣಿಗೆ ನಿಂತುಹೋಗುತ್ತದೆ. ಆಗ ಕಾಂಡದ ಕೆಳಭಾಗದಿಂದ ಹಲವಾರು ದಪ್ಪಶಾಖೆಗಳು ಹೊರಚಾಚಿ ಬೆಳೆಯುತ್ತ ಸಾಗುವುದುಂಟು. ಇದರಿಂದ ಮರದ ಮೇಲ್ಭಾಗ ಅರ್ಧಗೋಳಾಕೃತಿ ತಾಳುತ್ತದೆ. ಉದಾಹರಣೆ-ಮಾವು, ಬೇವು, ಹುಣಸೆ ಇತ್ಯಾದಿ. ಅದರಲ್ಲಿ ಮತ್ತೆ ತುದಿಮೊಗ್ಗು ಬೆಳೆಯುವ ಕ್ರಮಕ್ಕೆ ಅನುಗುಣವಾಗಿ ಏಕಶಾಖೀ (ಯೂನಿಪೇರಡ್) ದ್ವಿಶಾಖೀ (ಬೈಪೇರಸ್) ಎಂದೂ ಏಕಶಾಖಿಯಲ್ಲಿ ಸರ್ಪಿಲ (ಹೆಲಿಕಾಯಿಡ್) ವೃಶ್ಚಿಲ (ಸ್ಕಾರ್ಪಿಯಾಯಿಡ್) ಶಾಖೆಗಳೆಂದೂ ಹಲವಾರು ಬಗೆಯ ಮಾರ್ಪಾಡುಗಳು ಉಂಟು.
 
 
==೨.ಯುಗ್ಮಶಾಖೆ(ಡೈಕಾಟಮಸ್ ಬ್ರ್ಯಾಂಚಸ್)== 
ಇಲ್ಲಿ ತುದಿಮೊಗ್ಗು ಇಬ್ಭಾಗವಾಗಿ ಎರಡೂ ಕಡೆ ಏಕಪ್ರಕಾರವಾಗಿ ಬೆಳೆಯುತ್ತದೆ. ಕ್ರಮೇಣ ಆ ಶಾಖೆಗಳ ತುದಿಮೊಗ್ಗು ಇದೇ ಕ್ರಮವನ್ನು ಅನುಸರಿಸುತ್ತದೆ. ಇದಕ್ಕೆ ಯುಗ್ಮಶಾಖೆ ಎಂದು ಹೆಸರು. ಇದು ಕೇದಿಗೆ (ಪಾಂಡಾನಸ್) ಮತ್ತು ತೆಂಗಿನ ಗಿಡದಂತಿರುವ ಹೈಫಿನೇ ಎಂಬ ಜಾತಿಗಳಲ್ಲಿ ಅಪೂರ್ವವಾಗಿ ಕಂಡು ಬರುತ್ತದೆ.
 
==ಕಾಂಡದ ಕಾರ್ಯಗಳು== 
ಸಾಮಾನ್ಯವಾಗಿ ಶಾಖೆ, ಉಪಶಾಖೆ, ಎಲೆ, ಹೂ, ಕಾಯಿ ಇತ್ಯಾದಿಗಳನ್ನು ಹೊತ್ತು ಅವುಗಳ ಕಾರ್ಯಗಳಿಗೆ ನೆರವಾಗುವುದು. ಇದರಿಂದ ಎಲೆಗಳು ಎಲ್ಲ ಕಡೆಗೆ ಹರಡಿ, ಗಾಳಿ ಬೆಳಕು ಸ್ವೀಕರಿಸಿ, ಆಹಾರ ತಯಾರಿಕೆ, ಅನಿಲ ವಿನಿಮಯ, ಬಾಷ್ಪವಿಸರ್ಜನೆ ಇತ್ಯಾದಿ ಕಾರ್ಯಗಳಲ್ಲಿ ಪಾಲುಗೊಳ್ಳುವುದು ಸಾಧ್ಯವಾಗುತ್ತದೆ. ಹೂಗಳು ಕೀಟ ಗಾಳಿ ಇತ್ಯಾದಿಗಳಿಂದ ಪರಾಗಸಂಪರ್ಕ ಹೊಂದಬಲ್ಲವು. ಕಾಯಿಫಲಗಳು ಪ್ರಸಾರ ಹೊಂದಬಲ್ಲವು. ಎರಡನೆಯದಾಗಿ ಬೇರುಗಳಿಂದ ಹೀರಲಾಗುವ ನೀರು ಮತ್ತು ಲವಣಗಳನ್ನು ದ್ರಾವಣರೂಪದಲ್ಲಿ ಎಲೆಗಳಿಗೆ ತಲುಪಿಸುವುದು; ಎಲೆಗಳಲ್ಲಿ ಸಿದ್ಧವಾದ ಆಹಾರವನ್ನು ಅವಶ್ಯ ಬೀಳುವ ಬೆಳೆವಣಿಗೆಯ ಕೇಂದ್ರಗಳಿಗೋ ಇಲ್ಲವೆ ಕಾಂಡ, ಬೇರು ಇತ್ಯಾದಿ ಭಾಗಗಳಲ್ಲಿರುವ ಆಹಾರ ಸಂಗ್ರಹಾಂಗಗಳಿಗೋ ತಲುಪಿಸುವುದು-ಮುಂತಾದ ಕಾರ್ಯಗಳನ್ನು ಕಾಂಡ ನಿರ್ವಹಿಸುತ್ತದೆ.
 
ಮೇಲೆ ತಿಳಿಸಿದ ಕಾರ್ಯಗಳಲ್ಲದೆ ಕಾಂಡ ಅನೇಕ ವಿಶೇಷ ಕಾರ್ಯಗಳನ್ನೂ ನಡೆಸುತ್ತದೆ.
 
==೧.ಆಹಾರ ಸಂಗ್ರಹಣೆ==
ಇದು ಹೆಚ್ಚಾಗಿ ರೂಪಾಂತರ ಹೊಂದಿದ ಹಾಗೂ ಭೂಮಿಯೊಳಗಿರುವ ಕಂದಗೆಡ್ಡೆಗಳಲ್ಲಿ (ಗುಪ್ತಕಾಂಡ) ಸಾಮಾನ್ಯ. ಉದಾಹರಣೆ: ಶುಂಠಿ, ಈರುಳ್ಳಿ, ಆಲೂಗೆಡ್ಡೆ, ಸುರ್ವಣಗೆಡ್ಡೆ ಇತ್ಯಾದಿ.
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ