ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೪ ನೇ ಸಾಲು:
ಸಾಮಾನ್ಯವಾಗಿ ಶಾಖೆ, ಉಪಶಾಖೆ, ಎಲೆ, ಹೂ, ಕಾಯಿ ಇತ್ಯಾದಿಗಳನ್ನು ಹೊತ್ತು ಅವುಗಳ ಕಾರ್ಯಗಳಿಗೆ ನೆರವಾಗುವುದು. ಇದರಿಂದ ಎಲೆಗಳು ಎಲ್ಲ ಕಡೆಗೆ ಹರಡಿ, ಗಾಳಿ ಬೆಳಕು ಸ್ವೀಕರಿಸಿ, ಆಹಾರ ತಯಾರಿಕೆ, ಅನಿಲ ವಿನಿಮಯ, ಬಾಷ್ಪವಿಸರ್ಜನೆ ಇತ್ಯಾದಿ ಕಾರ್ಯಗಳಲ್ಲಿ ಪಾಲುಗೊಳ್ಳುವುದು ಸಾಧ್ಯವಾಗುತ್ತದೆ. ಹೂಗಳು ಕೀಟ ಗಾಳಿ ಇತ್ಯಾದಿಗಳಿಂದ ಪರಾಗಸಂಪರ್ಕ ಹೊಂದಬಲ್ಲವು. ಕಾಯಿಫಲಗಳು ಪ್ರಸಾರ ಹೊಂದಬಲ್ಲವು. ಎರಡನೆಯದಾಗಿ ಬೇರುಗಳಿಂದ ಹೀರಲಾಗುವ ನೀರು ಮತ್ತು ಲವಣಗಳನ್ನು ದ್ರಾವಣರೂಪದಲ್ಲಿ ಎಲೆಗಳಿಗೆ ತಲುಪಿಸುವುದು; ಎಲೆಗಳಲ್ಲಿ ಸಿದ್ಧವಾದ ಆಹಾರವನ್ನು ಅವಶ್ಯ ಬೀಳುವ ಬೆಳೆವಣಿಗೆಯ ಕೇಂದ್ರಗಳಿಗೋ ಇಲ್ಲವೆ ಕಾಂಡ, ಬೇರು ಇತ್ಯಾದಿ ಭಾಗಗಳಲ್ಲಿರುವ ಆಹಾರ ಸಂಗ್ರಹಾಂಗಗಳಿಗೋ ತಲುಪಿಸುವುದು-ಮುಂತಾದ ಕಾರ್ಯಗಳನ್ನು ಕಾಂಡ ನಿರ್ವಹಿಸುತ್ತದೆ.
 
ಮೇಲೆ ತಿಳಿಸಿದ ಕಾರ್ಯಗಳಲ್ಲದೆ ಕಾಂಡ ಅನೇಕ ವಿಶೇಷ ಕಾರ್ಯಗಳನ್ನೂ ನಡೆಸುತ್ತದೆ.
ಮೇಲೆ ತಿಳಿಸಿದ ಕಾರ್ಯಗಳಲ್ಲದೆ ಕಾಂಡ ಅನೇಕ ವಿಶೇಷ ಕಾರ್ಯಗಳನ್ನೂ ನಡೆಸುತ್ತದೆ. 1 ಆಹಾರ ಸಂಗ್ರಹಣೆ: ಇದು ಹೆಚ್ಚಾಗಿ ರೂಪಾಂತರ ಹೊಂದಿದ ಹಾಗೂ ಭೂಮಿಯೊಳಗಿರುವ ಕಂದಗೆಡ್ಡೆಗಳಲ್ಲಿ (ಗುಪ್ತಕಾಂಡ) ಸಾಮಾನ್ಯ. ಉದಾಹರಣೆ: ಶುಂಠಿ, ಈರುಳ್ಳಿ, ಆಲೂಗೆಡ್ಡೆ, ಸುರ್ವಣಗೆಡ್ಡೆ ಇತ್ಯಾದಿ. 2 ಆಹಾರ ತಯಾರಿಕೆ: ಸಾಮಾನ್ಯವಾಗಿ ಎಳೆಯ ಹಾಗೂ ಹಸಿರು ಕಾಂಡಗಳು ಎಲೆಗಳಂತೆಯೇ ಕೆಲಕಾಲ ಆಹಾರ ತಯಾರಿಸಿಕೊಳ್ಳಬಲ್ಲವು. ಇದರ ಜೊತೆಗೆ ಕೆಲವು ರೂಪಾಂತರಗೊಂಡ ಕಾಂಡಗಳು (ಉದಾಹರಣೆ-ಕಳ್ಳಿ, ಪಾಪಾಸ್ ಕಳ್ಳಿ ಇತ್ಯಾದಿ) ಎಲೆಗಳಂತೆಯೇ ಆಹಾರ ತಯಾರಿಸಬಲ್ಲವು. 3 ಏರುಬಳ್ಳಿಗಳು: ಕೆಲವು ದುರ್ಬಲ ಕಾಂಡಗಳಲ್ಲಿ ಕೆಲವು ವಿಶಿಷ್ಟ ಅಂಗಗಳು (ತುದಿಮೊಗ್ಗು, ಕಕ್ಷಮೊಗ್ಗು ಇತ್ಯಾದಿ) ಮಾರ್ಪಾಡಾಗಿ ಕಾಂಡ ಇತರ ಆಶ್ರಯಗಳ ಮೇಲೆ ಏರಿ ಬೆಳೆಯುವಂತೆ ಸಹಕರಿಸುವುದು. 4 ರಕ್ಷಣೆ: ಕೆಲವು ಸಂದರ್ಭಗಳಲ್ಲಿ ತುದಿಮೊಗ್ಗು, ಕಕ್ಷಮೊಗ್ಗು ಮುಂತಾದುವು ಮುಳ್ಳುಗಳಂತೆ ಮಾರ್ಪಾಡಾಗಿ ಸ್ಯಸಗಳಿಗೆ ಮನುಷ್ಯ ಮತ್ತು ಇತರ ಪ್ರಾಣಿಗಳ ವಿರುದ್ಧ ರಕ್ಷಣೆಯೊದಗಿಸುತ್ತವೆ.
==೧.ಆಹಾರ ಸಂಗ್ರಹಣೆ==
ಇದು ಹೆಚ್ಚಾಗಿ ರೂಪಾಂತರ ಹೊಂದಿದ ಹಾಗೂ ಭೂಮಿಯೊಳಗಿರುವ ಕಂದಗೆಡ್ಡೆಗಳಲ್ಲಿ (ಗುಪ್ತಕಾಂಡ) ಸಾಮಾನ್ಯ. ಉದಾಹರಣೆ: ಶುಂಠಿ, ಈರುಳ್ಳಿ, ಆಲೂಗೆಡ್ಡೆ, ಸುರ್ವಣಗೆಡ್ಡೆ ಇತ್ಯಾದಿ.
==೨.ಆಹಾರ ತಯಾರಿಕೆ==
ಸಾಮಾನ್ಯವಾಗಿ ಎಳೆಯ ಹಾಗೂ ಹಸಿರು ಕಾಂಡಗಳು ಎಲೆಗಳಂತೆಯೇ ಕೆಲಕಾಲ ಆಹಾರ ತಯಾರಿಸಿಕೊಳ್ಳಬಲ್ಲವು. ಇದರ ಜೊತೆಗೆ ಕೆಲವು ರೂಪಾಂತರಗೊಂಡ ಕಾಂಡಗಳು (ಉದಾಹರಣೆ-ಕಳ್ಳಿ, ಪಾಪಾಸ್ ಕಳ್ಳಿ ಇತ್ಯಾದಿ) ಎಲೆಗಳಂತೆಯೇ ಆಹಾರ ತಯಾರಿಸಬಲ್ಲವು.
==೩. ಏರುಬಳ್ಳಿಗಳು==
ಕೆಲವು ದುರ್ಬಲ ಕಾಂಡಗಳಲ್ಲಿ ಕೆಲವು ವಿಶಿಷ್ಟ ಅಂಗಗಳು (ತುದಿಮೊಗ್ಗು, ಕಕ್ಷಮೊಗ್ಗು ಇತ್ಯಾದಿ) ಮಾರ್ಪಾಡಾಗಿ ಕಾಂಡ ಇತರ ಆಶ್ರಯಗಳ ಮೇಲೆ ಏರಿ ಬೆಳೆಯುವಂತೆ ಸಹಕರಿಸುವುದು.
==೪. ರಕ್ಷಣೆ==
ಕೆಲವು ಸಂದರ್ಭಗಳಲ್ಲಿ ತುದಿಮೊಗ್ಗು, ಕಕ್ಷಮೊಗ್ಗು ಮುಂತಾದುವು ಮುಳ್ಳುಗಳಂತೆ ಮಾರ್ಪಾಡಾಗಿ ಸ್ಯಸಗಳಿಗೆ ಮನುಷ್ಯ ಮತ್ತು ಇತರ ಪ್ರಾಣಿಗಳ ವಿರುದ್ಧ ರಕ್ಷಣೆಯೊದಗಿಸುತ್ತವೆ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಡ}}
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ