ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
೨.ನೆಲದಮೇಲೆ ಹಬ್ಬಿಯೊ ಅಥವಾ ಆಶ್ರಯಗಳ ಮೇಲೇರಿಕೊಂಡೊ ಬೆಳೆಯುವ ದುರ್ಬಲ ಕಾಂಡಗಳು. ಈ ಎರಡು ಬಗೆಯ ಕಾಂಡಗಳಲ್ಲೂ ಮತ್ತೆ ಹಲವಾರು ವಿಧಗಳಿವೆ.
 
=== ಸಬಲ ಕಾಂಡಗಳು===,
===(ಎ) ಪರ್ಣಾಕ್ಷ (ಕಾಡೆಕ್ಸ್)===
ದಪ್ಪ ಕೊಳವೆಯಂತೆ ಎತ್ತರವಾದ ಮತ್ತು ಟಿಸಿಲೊಡೆಯದೆ ಬೆಳೆಯುವ ಕಾಂಡ ಇದು. ಇದರ ಮೇಲೆಲ್ಲ ಉದುರಿಬಿದ್ದ ಎಲೆಗಳ ಕಲೆ ಇರುತ್ತದೆ. ಉದಾಹರಣೆ-ತೆಂಗು, ಅಡಿಕೆ ಇತ್ಯಾದಿ.
 
===(ಬಿ) ಗಿಣ್ಣುಕಾಂಡ (ಕಲ್ಮ್)===
ಕಾಂಡ ಅನೇಕ ಉಂಗುರಗಳಂಥ ಗಿಣ್ಣುಗಳಿಂದ ಜೋಡಿಸಲ್ಪಟ್ಟಂತಿದ್ದು ಗಿಣ್ಣಿನ ಒಳಭಾಗ ಕೋಶಮಯವಾಗಿಯೂ ಅಂತರಗಿಣ್ಣಿನ ಭಾಗ ಪೊಳ್ಳಾಗಿಯೂ ಇವೆ. ಉದಾಹರಣೆ-ಬಿದಿರು.
 
===(ಸಿ) ಪುಷ್ಪದಂಡ (ಸ್ಕೇಪ್)===
ಕೆಲವು ಐಕದಳ ಬೀಜ ಸಸ್ಯಗಳಲ್ಲಿ ಮುಖ್ಯ ಕಾಂಡ ನೆಲದೊಳಗೇ ಹುದುಗಿರುತ್ತದೆ. ಎಲೆಗಳು ನೆಲದಿಂದಲೇ ಹುಟ್ಟುವಂತೆ ಕಾಣುತ್ತವೆ. ಹೂ ಬಿಡುವಾಗ ಒಮ್ಮೊಮ್ಮೆ ಭೂಮಿಯೊಳಗಿನಿಂದ ಒಂದು ದಪ್ಪ ದಂಟು ಹೊರಬಂದು, ಅದರ ತುದಿಯಲ್ಲಿ ಹೂವೋ ಹೂಗೊಂಚಲೋ ಕಾಣಿಸಿಕೊಂಡು, ಕೆಲಕಾಲದ ಅನಂತರ ಬಿದ್ದು ಹೋಗುತ್ತದೆ. ಇಂಥ ಕಾಂಡಕ್ಕೆ ಪುಷ್ಪದಂಡ ಎಂದು ಹೆಸರು. ಉದಾಹರಣೆ-ಈರುಳ್ಳಿ, ಕಿತ್ತಳೆ ಇತ್ಯಾದಿ.
 
==ದುರ್ಬಲ ಕಾಂಡಗಳು.==
===(ಎ) ಭೂಶಾಯಿ ಕಾಂಡ (ಪ್ರಾಸ್ಟ್ರೇಟ್)=== 
ಕಾಂಡ ನೆಲದ ಮೇಲೆ ಚಪ್ಪಟೆಯಾಗಿ ಹರಡಿಕೊಂಡಿರುತ್ತದೆ. ಉದಾಹರಣೆ-ಒಂದೆಲಗ (ಹೈಡ್ರೋಕಾಟೈಲ್ ಏಷ್ಯಾಟಿಕ), ಪುಲ್ಲಂಪಚ್ಚಿ (ಆಕ್ಸಾಲಿಸ್) ಇತ್ಯಾದಿ.
 
===(ಬಿ) ಅವರೋಹೀ ಕಾಂಡ (ಡಿಕಂಬೆಂಟ್)===
ಕಾಂಡ ಕೆಲಮಟ್ಟಿಗೆ ಹರಡಿಕೊಂಡಿದ್ದರೂ ಅದರ ತುದಿ ಮಾತ್ರ ತಲೆಯೆತ್ತಿ ನಿಲ್ಲುತ್ತದೆ. ಉದಾಹರಣೆ-ಟ್ರೈಡ್ಯಾಕ್ಸ್.
 
===(ಸಿ) ಹರಡಿದ ಕಾಂಡ (ಡಿಫ್ಯೂಸ್): ===
ಕಾಂಡ ಬಹುಮಟ್ಟಿಗೆ ಟಿಸಿಲಾಗಿದ್ದು ಶಾಖೆಗಳು ಸುತ್ತಲೂ ನೆಲದ ಮೇಲೆಲ್ಲ ಹರಡಿಕೊಂಡಿರುತ್ತವೆ. ಉದಾಹರಣೆ-ಪುನರ್ನವ (ಬೋಯರ್ ಹೇವಿಯ).
 
===(ಡಿ) ನೆಲಬಳ್ಳಿ (ಕ್ರೀಪಿಂಗ್):===
ಕಾಂಡ ದುರ್ಬಲವಾಗಿದ್ದು ನೆಲದಮೇಲೆ ಅಡ್ಡಡ್ಡಲಾಗಿ ಹರಡಿಕೊಂಡು ಅಲ್ಲಲ್ಲೇ ಗಿಣ್ಣಿನ ಬಳಿ ಬೇರುಬಿಡುತ್ತದೆ. ಉದಾಹರಣೆ-ಗೆಣಸು.
 
===(ಇ) ಸುತ್ತುಬಳ್ಳಿ (ಟ್ವೈನರ್): ===
ಇಡೀ ಕಾಂಡವೇ ಒಂದು ಆಶ್ರಯಕ್ಕೆ ಬಳ್ಳಿಯಂತೆ ಸುತ್ತಿಕೊಂಡು ಬೆಳೆಯುತ್ತದೆ. ಅದರಲ್ಲಿ ಹಿಡಿತ ಅಥವಾ ಆಧಾರಕ್ಕೆ ಯಾವುದೇ ಬಗೆಯ ಉಪಾಂಗಗಳಿಲ್ಲ. ಉದಾಹರಣೆ-ಶಂಖಪುಷ್ಪ (ಕ್ಲೈಟೋರಿಯ), ಗುಲಗಂಜಿ ಅವರೆ ಇತ್ಯಾದಿ.
 
===(ಫ್) ಏರು ಬಳ್ಳಿ (ಕ್ಲೈಂಬರ್): ===
ಕಾಂಡ ಕೊಕ್ಕೆ, ನುಲಿಕುಡಿ (ಟೆಂಡ್ರಿಲ್) ಮುಂತಾದ ವಿಶಿಷ್ಟ ಉಪಾಂಗಗಳ ಸಹಾಯದಿಂದ ಸಮೀಪದ ಆಶ್ರಯಗಳ ಮೇಲೇರಿ ಬೆಳೆಯುವುದು. ಉದಾಹರಣೆ-ವೀಳೆಯದೆಲೆಬಳ್ಳಿ, ಮೆಣಸಿನಬಳ್ಳಿ, ಕುಂಬಳ ಬಳ್ಳಿ, ಬೆತ್ತ ಇತ್ಯಾದಿ.
 
==ಕವಲೊಡೆಯುವಿಕೆ==
ಕಾಂಡದ ಮೇಲೆ ಶಾಖೋಪಶಾಖೆಗಳು ಹರಡಿಕೊಳ್ಳುವ ಬಗೆಗೆ ಕವಲೊಡೆಯುವಿಕೆಯೆಂದು ಹೆಸರು. ಇದರಲ್ಲಿ ಎರಡು ಮುಖ್ಯ ವಿಧಾನಗಳು.
 
1 ಪಾಶ್ರ್ವ ಕವಲುಗಳು (ಲ್ಯಾಟರಲ್ ಬ್ರ್ಯಾಂಚಸ್);   ಎರಡು ಯುಗ್ಮಶಾಖೆಗಳು (ಡೈಕಾಟಮಸ್ ಬ್ರ್ಯಾಂಚಸ್).
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ