ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಾರ್ಶ್ವ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
೩ ನೇ ಸಾಲು:
'''ಕಾಂಡ'''ವು ಸಾಮಾನ್ಯವಾಗಿ ಮೇಲ್ಮುಖವಾಗಿ ಭೂಮಿಯ ಮೇಲೆ ಬೆಳೆಯುವ ಸಸ್ಯಭಾಗ ಅಥವಾ ಅಕ್ಷ (ಸ್ಟೆಮ್; ಅಸೆಂಡಿಂಗ್ ಆಕ್ಸಿಸ್). ಇದು ಬೀಜದ ಒಳಗಿರುವ ಪ್ರಥಮಾಂಕುರದಿಂದ (ಪ್ಲೂಮ್ಯೂಲ್) ಬೆಳೆಯ ತೊಡಗುತ್ತದೆ. ನೀರು ಮತ್ತು ಗುರುತ್ವಗಳಿಗೆ ವಿಮುಖವಾಗಿಯೂ ಬೆಳಕಿಗೆ ಅಭಿಮುಖವಾಗಿಯೂ ಬೆಳೆಯುವ ಗುಣ ಇದಕ್ಕೆ ಉಂಟು. ಕಾಂಡದಲ್ಲಿ ಸಾಮಾನ್ಯವಾಗಿ ಒಂದು ಪ್ರಮುಖ ಕಾಂಡ ಅಥವಾ ಅಕ್ಷ ಎಂಬ ಭಾಗವೂ ಅದರ ಮೇಲೆ ಹಲವಾರು ಪಾರ್ಶ್ವ ಶಾಖೆ ಅಥವಾ ಕೊಂಬೆಗಳೂ ಇವೆ. ಈ ಕೊಂಬೆಗಳ ಮೇಲೆ ಅಲ್ಲಲ್ಲೇ ಅಸಂಖ್ಯ ಎಲೆಗಳು, ಗಾಳಿ ಮತ್ತು ಬೆಳಕನ್ನು ಸಮರ್ಪಕವಾಗಿ ಸ್ವೀಕರಿಸುವಂತೆ ಜೋಡಣೆಯಾಗಿವೆ. ಎಲೆಗಳ ಜೊತೆಗೆ ಹೂ, ಮೊಗ್ಗು, ಕಾಯಿಗಳೂ ಇವೆ. ಎಲೆಗಳು ಪೋಷಕಾಂಗಗಳಾಗಿಯೂ ಹೂಗಳು ಸಂತಾನವೃದ್ಧಿಯ ಅಂಗಗಳಾಗಿಯೂ ಕಾಯಿಗಳು ಪ್ರಸಾರಸಾಧನಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ ಸಾಮಾನ್ಯವಾಗಿ ಎಳೆಯ ಕಾಂಡ ಮತ್ತು ಕೊಂಬೆಗಳು ಹಸಿರಾಗಿಯೂ ವಯಸ್ಸಾದ ಕಾಂಡ ಮತ್ತು ಕೊಂಬೆಗಳು ಕಂದುಬಣ್ಣವುಳ್ಳವೂ ಆಗಿರುತ್ತವೆ. ಮುಖ್ಯಕಾಂಡ, ಅದರ ಶಾಖೋಪಶಾಖೆಗಳು, ಅವುಗಳ ಮೇಲಿರುವ ಎಲೆ, ಹೂ, ಕಾಯಿ, ಬೀಜಗಳೆಲ್ಲ ಕೂಡಿರುವುದಕ್ಕೆ ಪ್ರಕಾಂಡಕ್ರಮ (ಶೂಟ್ ಸಿಸ್ಟಮ್) ಎನ್ನಲಾಗುತ್ತದೆ.
 
==ವಿವಿಧ ಭಾಗಗಳು==
ವಿವಿಧ ಭಾಗಗಳು: ಯಾವುದೇ ಒಂದು ಗಿಡದ (ಉದಾ: ದಾಸವಾಳ, ಸೂರ್ಯಕಾಂತಿ, ಆಲ ಇತ್ಯಾದಿ) ಎಳೆಯಕಾಂಡ ಅಥವಾ ಕೊಂಬೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರ ಮೇಲೆ ಅಲ್ಲಲ್ಲೇ ಎಲೆ, ಮೊಗ್ಗುಗಳಿರುವುದು ಕಂಡುಬರುತ್ತದೆ. ಎಲೆಗಳು ಕಾಂಡದಮೇಲೆ ಹುಟ್ಟುವ ಒಂದೊಂದು ನಿರ್ದಿಷ್ಟ ಜಾಗಕ್ಕೆ ಗಿಣ್ಣು (ನೋಡ್) ಎಂದು ಹೆಸರು. ಎರಡು ಗಿಣ್ಣುಗಳ ನಡುವಿನ ಭಾಗಕ್ಕೆ ಅಂತರಗಿಣ್ಣು (ಇಂಟರ್ ನೋಡ್) ಎಂದು ಹೇಳುವುದುಂಟು. ಸಾಮಾನ್ಯವಾಗಿ ಒಂದೊಂದು ಗಿಣ್ಣಿನಿಂದ ಒಂದು, ಎರಡು ಅಥವಾ ಹಲವಾರು ಎಲೆಗಳು ಹುಟ್ಟಬಹುದು. ಕಾಂಡ ಮತ್ತು ಎಲೆಯ ನಡುವೆ ಉಂಟಾಗುವ ಕೋನಕ್ಕೆ ಪತ್ರಕಕ್ಷ ಅಥವಾ ಎಲೆಯ ಕಂಕುಳು (ಆಕ್ಸಿಲ್) ಎನ್ನಲಾಗುತ್ತದೆ. ಸಾಧಾರಣವಾಗಿ ಪ್ರತಿ ಎಲೆಯ ಕಂಕುಳಲ್ಲಿ ಒಂದು ಮೊಗ್ಗು ಮತ್ತು ಕಾಂಡದ ಅಥವಾ ರೆಂಬೆಯ ತುದಿಯಲ್ಲಿ ಒಂದು ಮೊಗ್ಗು ಇರುತ್ತವೆ. ಎಲೆಯ ಕಂಕುಳಲ್ಲಿನ ಮೊಗ್ಗಿಗೆ ಕಕ್ಷ ಅಥವಾ ಕಂಕುಳು ಮೊಗ್ಗು (ಆಕ್ಸಿಲರಿ ಬಡ್) ಎಂದೂ ಕಾಂಡದ ತುದಿಯಲ್ಲಿನ ಮೊಗ್ಗಿಗೆ ತುದಿಮೊಗ್ಗು (ಟರ್ಮಿನಲ್ ಅಥವಾ ಏಪಿಕಲ್ ಬಡ್) ಎಂದೂ ಹೆಸರು. ಈ ಮೊಗ್ಗುಗಳ ಅಗ್ರಭಾಗದ ಸುತ್ತ ಯಾವ ಬಗೆಯ ರಕ್ಷಣಾಕವಚವೂ ಇಲ್ಲ. ಆದರೆ ಅದರಿಂದಲೇ ಹುಟ್ಟುವ ಸಣ್ಣ ಎಲೆಗಳೇ ಅದನ್ನು ಸುತ್ತುವರಿದು ಮೊಗ್ಗಿಗೆ ರಕ್ಷಣೆಯನ್ನು ನೀಡುತ್ತವೆ.  ಸಾಮಾನ್ಯವಾಗಿ ಕಾಂಡದ ಹೊರಮೈ ಹಲವು ಬಗೆಯ ರೋಮಗಳಿಂದ ಆವೃತವಾಗಿದೆ. ಇವೆಲ್ಲವೂ ಬಹುಕೋಶಮಯ ರೋಮಗಳು. ಕಾಂಡದಿಂದ ಬೆಳೆಯುವ ರೆಂಬೆಗಳು ಕಾಂಡದ ಹೊರಮೈಯಿಂದಲೇ ಉದ್ಭವಿಸುತ್ತವೆ (ಎಕ್ಸೊಜೀನಸ್).
 
==ನಮೂನೆಗಳು:== ಕಾಂಡ ಮೃದು ಅಥವಾ ಮಾಂಸಲವಾಗಿಯೋ ದುಂಡು ಅಥವಾ ಚಚ್ಚೌಕಾರವಾಗಿಯೋ ನುಣುಪು ಅಥವಾ ರೋಮಮಯವಾಗಿಯೋ ಇರಬಹುದು. ಭೂಮಿಯೊಳಗಿನ ಪರಿಸ್ಥಿತಿಗಿಂತ ಭೂಮಿಯ ಮೇಲಿನ ಸನ್ನಿವೇಶಗಳು ಹೆಚ್ಚು ವೈಪರೀತ್ಯಗಳಿಗೆ ಒಳಗಾಗುವುದರಿಂದ ಭೂಮಿಯ ಮೇಲೆ ಬೆಳೆಯುವ ಕಾಂಡ ಆಕಾರ, ರಚನೆ, ಗಾತ್ರ ಇತ್ಯಾದಿಗಳ ವಿಷಯದಲ್ಲಿ ಅನೇಕ ಭಿನ್ನತೆ, ಬದಲಾವಣೆಗಳನ್ನು ಹೊಂದುವುದು ಸಹಜ.  ಸ್ವಭಾವ ಅಥವಾ ಬೆಳೆವಣಿಗೆಗೆ ಅನುಗುಣವಾಗಿ ಕಾಂಡವನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು: 1 ನೇರವಾಗಿ ಎತ್ತರ ಬೆಳೆಯುವ ಸಬಲ ಕಾಂಡಗಳು; 2 ನೆಲದಮೇಲೆ ಹಬ್ಬಿಯೊ ಅಥವಾ ಆಶ್ರಯಗಳ ಮೇಲೇರಿಕೊಂಡೊ ಬೆಳೆಯುವ ದುರ್ಬಲಕಾಂಡಗಳು. ಈ ಎರಡು ಬಗೆಯ ಕಾಂಡಗಳಲ್ಲೂ ಮತ್ತೆ ಹಲವಾರು ವಿಧಗಳುಂಟು.
 
1== ಸಬಲ ಕಾಂಡಗಳು, (ಎ) ಪರ್ಣಾಕ್ಷ (ಕಾಡೆಕ್ಸ್):== ದಪ್ಪ ಕೊಳವೆಯಂತೆ ಎತ್ತರವಾದ ಮತ್ತು ಟಿಸಿಲೊಡೆಯದೆ ಬೆಳೆಯುವ ಕಾಂಡ ಇದು. ಇದರ ಮೇಲೆಲ್ಲ ಉದುರಿಬಿದ್ದ ಎಲೆಗಳ ಕಲೆ ಇರುತ್ತದೆ. ಉದಾಹರಣೆ-ತೆಂಗು, ಅಡಿಕೆ ಇತ್ಯಾದಿ.
 
==(ಬಿ) ಗಿಣ್ಣುಕಾಂಡ (ಕಲ್ಮ್):== ಕಾಂಡ ಅನೇಕ ಉಂಗುರಗಳಂಥ ಗಿಣ್ಣುಗಳಿಂದ ಜೋಡಿಸಲ್ಪಟ್ಟಂತಿದ್ದು ಗಿಣ್ಣಿನ ಒಳಭಾಗ ಕೋಶಮಯವಾಗಿಯೂ ಅಂತರಗಿಣ್ಣಿನ ಭಾಗ ಪೊಳ್ಳಾಗಿಯೂ ಇವೆ. ಉದಾಹರಣೆ-ಬಿದಿರು.
 
==(ಸಿ) ಪುಷ್ಪದಂಡ (ಸ್ಕೇಪ್):== ಕೆಲವು ಐಕದಳ ಬೀಜ ಸಸ್ಯಗಳಲ್ಲಿ ಮುಖ್ಯ ಕಾಂಡ ನೆಲದೊಳಗೇ ಹುದುಗಿರುತ್ತದೆ. ಎಲೆಗಳು ನೆಲದಿಂದಲೇ ಹುಟ್ಟುವಂತೆ ಕಾಣುತ್ತವೆ. ಹೂ ಬಿಡುವಾಗ ಒಮ್ಮೊಮ್ಮೆ ಭೂಮಿಯೊಳಗಿನಿಂದ ಒಂದು ದಪ್ಪ ದಂಟು ಹೊರಬಂದು, ಅದರ ತುದಿಯಲ್ಲಿ ಹೂವೋ ಹೂಗೊಂಚಲೋ ಕಾಣಿಸಿಕೊಂಡು, ಕೆಲಕಾಲದ ಅನಂತರ ಬಿದ್ದು ಹೋಗುತ್ತದೆ. ಇಂಥ ಕಾಂಡಕ್ಕೆ ಪುಷ್ಪದಂಡ ಎಂದು ಹೆಸರು. ಉದಾಹರಣೆ-ಈರುಳ್ಳಿ, ಕಿತ್ತಳೆ ಇತ್ಯಾದಿ.
 
2 ==ದುರ್ಬಲ ಕಾಂಡಗಳು. (ಎ) ಭೂಶಾಯಿ ಕಾಂಡ (ಪ್ರಾಸ್ಟ್ರೇಟ್):== ಕಾಂಡ ನೆಲದ ಮೇಲೆ ಚಪ್ಪಟೆಯಾಗಿ ಹರಡಿಕೊಂಡಿರುತ್ತದೆ. ಉದಾಹರಣೆ-ಒಂದೆಲಗ (ಹೈಡ್ರೋಕಾಟೈಲ್ ಏಷ್ಯಾಟಿಕ), ಪುಲ್ಲಂಪಚ್ಚಿ (ಆಕ್ಸಾಲಿಸ್) ಇತ್ಯಾದಿ.
 
==(ಬಿ) ಅವರೋಹೀ ಕಾಂಡ (ಡಿಕಂಬೆಂಟ್): ==ಕಾಂಡ ಕೆಲಮಟ್ಟಿಗೆ ಹರಡಿಕೊಂಡಿದ್ದರೂ ಅದರ ತುದಿ ಮಾತ್ರ ತಲೆಯೆತ್ತಿ ನಿಲ್ಲುತ್ತದೆ. ಉದಾಹರಣೆ-ಟ್ರೈಡ್ಯಾಕ್ಸ್.
 
(ಸಿ) ಹರಡಿದ ಕಾಂಡ (ಡಿಫ್ಯೂಸ್): ಕಾಂಡ ಬಹುಮಟ್ಟಿಗೆ ಟಿಸಿಲಾಗಿದ್ದು ಶಾಖೆಗಳು ಸುತ್ತಲೂ ನೆಲದ ಮೇಲೆಲ್ಲ ಹರಡಿಕೊಂಡಿರುತ್ತವೆ. ಉದಾಹರಣೆ-ಪುನರ್ನವ (ಬೋಯರ್ ಹೇವಿಯ).
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ