ಒಡೆಯರ ಕಾಲದ ಕನ್ನಡ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
 
==ಮುಮ್ಮಡಿ ಕೃಷ್ಣರಾಜ ಒಡೆಯರ್==
ಮುಮ್ಮಡಿ ಕೃಷ್ಣರಾಜ ಒಡೆಯ ಪ್ರಭುತ್ವವನ್ನು ಪಡೆದಮೇಲೆ ಕನ್ನಡಕ್ಕೆ ಹೆಚ್ಚಿನ ಪೋಷಣೆ ಲಭಿಸಿತು.<ref>http://ksu.ac.in/en/mummadi-krishnaraja-wodeyar/</ref> ರಾಜಾಶ್ರಯದಲ್ಲಿ ಅನೇಕ ವಿದ್ವಜ್ಜನ ಕೃತಿರಚನೆ ಮಾಡಿದರು. ಆಡಳಿತ ಕೈತಪ್ಪಿದಾಗಲೂ ಕವಿ, ವಿದ್ವಾಂಸರನ್ನು ರಾಜ ಅನಾದರಣೆ ಮಾಡಲಿಲ್ಲ. ಕೃಷ್ಣರಾಜ ಒಡೆಯನೇ ಸ್ವಯಂ ಪಂಡಿತನೂ ಗ್ರಂಥಕರ್ತನೂ ಆಗಿದ್ದ. ಅವನ ಹೆಸರಿನಲ್ಲಿ ಸುಮಾರು ಐವತ್ತು ಗ್ರಂಥಗಳು ಪ್ರಸಿದ್ದವಾಗಿವೆ. ಸಂಸ್ಕೃತದಲ್ಲಿನ ಪುರಾಣೇತಿಹಾಸ ನಾಟಕಾದಿಗಳನ್ನು ಕನ್ನಡದಲ್ಲಿ ಬರೆಯಿಸಿದ ಯಶಸ್ಸು ಮುಮ್ಮಡಿ ಕೃಷ್ಣರಾಜನದು. ಶ್ರೀ ಕೃಷ್ಣರಾಜ ವಾಣಿವಿಲಾಸ ಎಂಬ ಹೆಸರಿನಿಂದ ಪ್ರಸಿದ್ದವಾಗಿರುವ ಭಾರತ ಟೀಕೆಯನ್ನು ಈತ ಬರೆಯಿಸಿದುದಲ್ಲದೆ ಸೌಗಂಧಿಕಾಪರಿಣಯ ಎಂಬ ವಿಸ್ತಾರವಾದ ಕಾವ್ಯವನ್ನು ಗದ್ಯಪದ್ಯಾತ್ಮಕವಾಗಿ ತಾನೇ ರಚಿಸಿದ್ದಾನೆ. ದೂರ್ವಾಸಮುನಿಯ ಶಾಪದ ದೆಸೆಯಿಂದ ತನ್ನ ಪದವಿಯನ್ನು ಕಳೆದುಕೊಂಡ ದೇವೇಂದ್ರ ಸುಗಂಧರಾಯನೆಂಬ ಹೆಸರಿನಿಂದ ಹುಟ್ಟಿ ಸೌಗಂಧಿಕೆ ಎಂಬ ಹೆಸರಿನಿಂದ ಭೂಲೋಕದಲ್ಲಿ ಅವತರಿಸಿದ ಶಚೀದೇವಿಯನ್ನು ಮದುವೆಯಾದನೆಂಬುದೇ ಈ ಗ್ರಂಥದ ಕಥಾಸಾರ. ಇದನ್ನೇ ಕವಿ ಮೂವತ್ತಾರು ಆಶ್ವಾಸಗಳಾಗಿ ಬೆಳೆಸಿ ಆರು ಸಾವಿರಕ್ಕೂ ಹೆಚ್ಚಿನ ಪದ್ಯಗಳಿಂದ ಕೂಡಿದ ಮಹಾಕಾವ್ಯವನ್ನಾಗಿ ಮಾಡಿದ್ದಾನೆ.
 
ಅಧ್ಯಾತ್ಮ ರಾಮಾಯಣದ ಕನ್ನಡ ಟೀಕೆಯಲ್ಲಿ ಮೊದಲಿಗೆ ಮೈಸೂರು ಅರಸರ ಚರಿತ್ರೆಯನ್ನು ಸಂಗ್ರಹವಾಗಿ ಹೇಳಿದೆ. ಇದಲ್ಲದೆ ನಂಜುಂಡ ಶತಕ, ದೇವೀ ಮಹಾತ್ಮ್ಯ, ಶಂಕರಸಂಹಿತೆ, ಸಂಖ್ಯಾರತ್ನ ಮಾಲಾಟೀಕೆ ಎಂಬ ಗ್ರಂಥಗಳು ಜನಪ್ರಿಯವಾಗಿವೆ. ಶ್ರೀಧರೀಯ ವ್ಯಾಖ್ಯಾನವನ್ನು ಅನುಸರಿಸಿ ಭಾಗವತಕ್ಕೆ ಯಥಾತಥದಿಂದ ಕನ್ನಡ ಟೀಕೆಯನ್ನು ಕೃಷ್ಣದೇವರಾಯ ಬರೆದಿದ್ದಾನೆ. ಶಾಕುಂತಲ ನಾಟಕನವೀನಟೀಕೆ ಈತನ ಕೃತಿಗಳಲ್ಲಿ ಮುಖ್ಯವಾದದ್ದು. ಪುರಾಣ ಪುಣ್ಯಕಥೆಗಳಷ್ಟಕ್ಕೇ ಗಮನವನ್ನು ಮೀಸಲಾಗಿಡದೆ ನಾಟಕಗಳನ್ನೂ ಓದಿ ಸ್ವಾರಸ್ಯಾನುಭವ ಮಾಡಿ ಅವುಗಳ ಸಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.
 
ಈ ರಾಜನ ಕಾಲದಲ್ಲಿನ ಇಬ್ಬರು ಗದ್ಯಕವಿಗಳು ಬಹಳ ಮುಖ್ಯರಾದವರು; ಒಬ್ಬ ರಾಜಾವಳೀ ಕಥೆಯನ್ನು ರಚಿಸಿದ ದೇವಚಂದ್ರ. ಇನ್ನೊಬ್ಬ ಮುದ್ರಾಮಂಜೂಷವನ್ನು ರಚಿಸಿದ ಕೆಂಪುನಾರಾಯಣ. <ref>https://www.rarebooksocietyofindia.org/postDetail.php?id=196174216674_10152089340101675</ref><ref>http://shodhganga.inflibnet.ac.in/bitstream/10603/95127/7/07_chapter%201.pdf</ref>ದೇವಚಂದ್ರ ಜೈನಕವಿ; ರಾಮ ಕಥಾವತಾರ ಮತ್ತು ರಾಜಾವಳೀ ಕಥೆ ಎಂಬ ಎರಡು ಗ್ರಂಥಗಳನ್ನು ಬರೆದಿದ್ದಾನೆ. ರಾಮಕಥಾವತಾರ ಜೈನ ಸಂಪ್ರದಾಯಾನುಸಾರವಾದ ರಾಮಾಯಣ. ವಿಶೇಷವಾಗಿ ನಾಗಚಂದ್ರ ವಿರಚಿತವಾದ ರಾಮಚಂದ್ರ ಚರಿತ ಪುರಾಣದ ಅನುಸರಣೆಯಾಗಿದೆ. ಅದರಲ್ಲಿನ ಹಲವು ಪದ್ಯಗಳನ್ನು ದೇವಚಂದ್ರ ಅನುವಾದ ಮಾಡಿದ್ದಾನೆ. ಇದಕ್ಕಿಂತ ಇವನ ರಾಜಾವಳೀ ಕಥೆ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗಿದೆ. ಇದು ಬಹಳ ಮಟ್ಟಿಗೆ ಗದ್ಯದಲ್ಲಿದೆ.<ref>https://commons.wikimedia.org/wiki/File:%E0%B2%AE%E0%B3%81%E0%B2%A6%E0%B3%8D%E0%B2%B0%E0%B2%BE%E0%B2%AE%E0%B2%BE%E0%B2%82%E0%B2%9C%E0%B3%82%E0%B2%B7-Mudramanjusha.jpg</ref> ಕೆಲವು ಶ್ಲೋಕಗಳೂ ಪದ್ಯಗಳೂ ಮಧ್ಯೆ ಮಧ್ಯೆ ಬಂದಿವೆ. ಇದರಲ್ಲಿ ದೇವಚಂದ್ರ ಜೈನಮತಕ್ಕೆ ಸಂಬಂಧಿಸಿದ ಹಲವು ಕಥೆಗಳನ್ನೂ ಅನೇಕ ರಾಜರ ಚರಿತ್ರೆಯನ್ನೂ ಹೇಳಿದ್ದಾನೆ. ಮೈಸೂರು ಒಡೆಯರ ವಂಶಾವಳಿಯ ಕಥೆಯೂ ಇದರಲ್ಲಿ ಸಂಕ್ಷೇಪವಾಗಿ ಬಂದಿದೆ. ಈ ಕವಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಿತನಾದ ವೈದ್ಯಸೂರಿಪಂಡಿತನ ಪ್ರೋತ್ಸಾಹದಿಂದ ಸು. 1838ರಲ್ಲಿ ಗ್ರಂಥರಚನೆ ಮಾಡಿದಂತೆ ತಿಳಿಸಿದ್ದಾನೆ.
 
ಕೆಂಪುನಾರಾಯಣ ಹೊಯಿಸಣೆಗ ಕುಲದ ಬ್ರಾಹ್ಮಣ ಕವಿ (1823). ಇವನ ಗ್ರಂಥ ಮುದ್ರಾಮಂಜೂಷ. ಈ ಗದ್ಯಗ್ರಂಥ ಹಲವು ದೃಷ್ಟಿಗಳಿಂದ ಮುಖ್ಯವಾಗಿದೆ. ಆಧುನಿಕ ಗದ್ಯಶೈಲಿ ಈ ಗ್ರಂಥದಿಂದ ಆರಂಭವಾಯಿತೆಂದು ಹೇಳಿದರೆ ತಪ್ಪಲ್ಲ. ಸುಲಲಿತವಾದ ಸರಳಗನ್ನಡದ ವಚನರಚನೆಯನ್ನು ಇಲ್ಲಿ ಕಾಣಬಹುದು. ಚಾಣಕ್ಯ ಚಂದ್ರಗುಪ್ತರು ನಂದರ ವಿನಾಶವನ್ನು ಸಾಧಿಸಿ ಪಾಟಲೀಪುರದ ಸಿಂಹಾಸನವನ್ನು ವಶಪಡಿಸಿಕೊಂಡ ಕಥೆ ಈ ಗ್ರಂಥದ ಕಥಾವಸ್ತು. ಇದರ ಉತ್ತರಾರ್ಧಕ್ಕೆ ಸಂಸ್ಕೃತದ ಮುದ್ರಾರಾಕ್ಷಸವೆಂಬ ವಿಶಾಖದತ್ತನ ನಾಟಕ ಸ್ಫೂರ್ತಿಯನ್ನು ಒದಗಿಸಿದೆ. ಪುರ್ವಾರ್ಧದ ಕಥೆಯನ್ನು ಕವಿ ಬೇರೆ ಆಧಾರಗಳಿಂದ ಪಡೆದುಕೊಂಡಿದ್ದಾನೆ. ಈ ಕೃತಿ ಓದುಗರ ಮನಸ್ಸನ್ನು ಒಲಿಸಿ ನಲಿಸುವಂಥ ಕಥಾಸ್ವಾರಸ್ಯ, ಸನ್ನಿವೇಶ ರಚನಚಾತುರ್ಯ ಮತ್ತು ಪದಲಾಲಿತ್ಯಗಳಿಂದ ಕೂಡಿ ಅತ್ಯಂತ ಜನಪ್ರಿಯವಾಗಿದೆ.<ref>https://enacademic.com/dic.nsf/enwiki/7121506</ref>