ಕಾಮನ್ವೆಲ್ತಿನ ಆರ್ಥಿಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
ಕೈಗಾರಿಕೋತ್ಪನ್ನದ ಜೊತೆಗೆ ವಿಶ್ವದಲ್ಲಿ ಖನಿಜೋತ್ಪನ್ನದ ರಂಗದಲ್ಲಿ ಕಾಮನ್‍ವೆಲ್ತ್ ರಾಷ್ಟ್ರಗಳು ಒಳ್ಳೆಯ ಸ್ಥಾನ ಪಡೆದಿವೆ. ಆಫ್ರಿಕಾ ಖಂಡ ಖನಿಜಗಳ ಆಗರವೇ ಆಗಿದೆ. ಕೆನಡ ಮತ್ತು ದಕ್ಷಿಣ ಆಫ್ರಿಕ- ವಿಶ್ವದ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಿನ್ನವನ್ನೂ ಮಲಯ ಮತ್ತು ನೈಜೀರಿಯಗಳು ಅರ್ಧದಷ್ಟು ತವರನ್ನೂ ಕೆನಡ ಮೂರನೆಯ ಎರಡರಷ್ಟು ನಿಕಲನ್ನೂ ಉತ್ಪಾದಿಸುತ್ತವೆ. ಹಾಗೂ ಈ ಸಮುದಾಯ ವಿಶ್ವದ ಮೂರನೆಯ ಒಂದರಷ್ಟು ಕಲ್ಲಿದ್ದಲು, ತಾಮ್ರ ಮತ್ತು ಸೀಸಗಳನ್ನು ಉತ್ಪಾದಿಸುತ್ತದೆ.
 
ಈ ರಾಷ್ಟ್ರಸಮುದಾಯದಲ್ಲಿ ಕೃಷಿ ಉದ್ಯಮ ಪ್ರಮುಖವಾದುದರಿಂದ ವಿಶ್ವದ ಉತ್ಪನ್ನದ ಬಹುಪಾಲು ಕೃಷಿ ಉತ್ಪನ್ನ ಇಲ್ಲಿಂದಲೇ ಬರುತ್ತದೆ. ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳು ಅರ್ಧಕ್ಕೂ ಮೀರಿದ ಉಣ್ಣೆಯನ್ನು. ಭಾರತ ಮತ್ತು ಸಿಂಹಳ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಹವನ್ನು, ಘಾನ ಮತ್ತು ನೈಜೀರಿಯ ಅರ್ಧಕ್ಕೂ ಮೀರಿದಷ್ಟು ಕೋಕೋವನ್ನು,<ref>http://www.fao.org/3/y5143e/y5143e0x.htm</ref> ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮುಕ್ಕಾಲು ಭಾಗಕ್ಕೂ ಹೆಚ್ಚು ಸೆಣಬನ್ನು<ref>https://www.indiaagristat.com/table/agriculture-data/2/global-comparison-with-india-of-jute/330931/898811/data.aspx</ref>, ಮಲಯ ಮತ್ತು ಸಿಂಹಳ ಅರ್ಧದಷ್ಟು ರಬ್ಬರನ್ನು ಸರಬರಾಜು ಮಾಡುತ್ತವೆ. ಈ ರಾಷ್ಟ್ರಸಮುದಾಯ ಗೋದಿಯ ಬಗ್ಗೆ ವಿಶ್ವದ ಸರಾಸರಿ ಮಟ್ಟವನ್ನು ಮುಟ್ಟದಿದ್ದರೂ ಭತ್ತದ ವಿಷಯದಲ್ಲಿ ವಿಶ್ವದ ಸರಾಸರಿ ಮಟ್ಟವನ್ನು ಮೀರುತ್ತದೆ.
 
ಆರ್ಥಿಕ ಸಹಾಕಾರ: ಕಾಮನ್‍ವೆಲ್ತಿನ ಅನೇಕ ರಾಷ್ಟ್ರಗಳು ಬ್ರಿಟನ್ನಿನ ವಸಾಹತು ಮತ್ತು ಆಶ್ರಿತರಾಷ್ಟ್ರಗಳಾಗಿದ್ದುವು. ಅವು ಸ್ವಾಭಾವಿಕವಾಗಿಯೇ ಬ್ರಿಟನಿನ ನೇತೃತ್ವದಲ್ಲಿ ಒಟ್ಟುಗೂಡಿದುವು. ಈ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದು ರಾಜಕೀಯ ಅಂಶ. ಆದರೆ ಎರಡನೆಯ ಮಹಾಯುದ್ಧಾನಂತರ ಅನೇಕ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಸಿಕ್ಕಿತು. ಆದರೂ ಇವು ಸಾಮಾನ್ಯವಾಗಿ ಬ್ರಿಟನಿನ ನೇತೃತ್ವದಲ್ಲಿ ಕಾಮನ್‍ವೆಲ್ತ್ ಸಮುದಾಯದಲ್ಲಿ ಉಳಿದುಕೊಂಡಿರುವುದಕ್ಕೆ ಮುಖ್ಯವಾಗಿ ಆರ್ಥಿಕ ಅಂಶ ಕಾರಣವಾಗಿದೆ. ಈ ರಾಷ್ಟ್ರಸಮುದಾಯದಲ್ಲಿ ಪ್ರಾರಂಭದಿಂದಲೂ ಉಳಿದುಕೊಂಡು ಬಂದಿರುವ ಪರಸ್ಪರ ಸಹಕಾರ ಆರ್ಥಿಕ ಸ್ವರೂಪದ್ದು. ಪರಸ್ಪರ ಸಹಕಾರದ ಕ್ಷೇತ್ರಗಳೆಂದರೆ ಸ್ಟರ್ಲಿಂಗ್ ವಲಯ, ಅಂತರರಾಷ್ಟ್ರೀಯ ವ್ಯಾಪಾರ, ಹಣದ ವಿನಿಯೋಜನೆ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾರಿಕೆ ಸಂಪರ್ಕ.
==ಉಲ್ಲೇಖಗಳು==