ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
prAQA
೧ ನೇ ಸಾಲು:
[[ಚಿತ್ರ:Alooparatha.jpg|thumb|ಆಲೂ ಪರಾಠಾ]]
'''ಪರಾಠಾ''' [[ಭಾರತೀಯ ಉಪಖಂಡ]]ದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ.<ref>{{cite news |title=parantha Photos {{!}} Images of parantha - Times of India |url=https://timesofindia.indiatimes.com/topic/parantha/photos?mobile=no |accessdate=5 January 2020 |work=The Times of India}}</ref> ಇದು ಭಾರತ , [[ಶ್ರೀಲಂಕಾ]] , [[ಪಾಕಿಸ್ತಾನ]] , [[ನೇಪಾಳ]] ಮತ್ತು [[ಬಾಂಗ್ಲಾದೇಶ]]ದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ . ''ಪರಾಠಾ'' ಪದವು ''ಪರಟ್'' ಮತ್ತು ''[[ಹಿಟ್ಟು|ಆಟಾ]]'' ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ [[ಕಣಕ]]ದ ಪದರಗಳು.<ref>{{cite web |title=Paratha, Pāraṭhā, Parathā: 3 definitions |url=https://www.wisdomlib.org/definition/paratha |website=www.wisdomlib.org |accessdate=5 January 2020 |date=15 July 2018}}</ref>
==ಇತಿಹಾಸ==
ಪರಾಠಾ ಎಂಬ ಹಿಂದೂಸ್ಥಾನಿ ಪದವು [[ಸಂಸ್ಕೃತ]]ದಿಂದ ಬಂದಿದೆ . ೧೩ ನೇ ಶತಮಾನದಲ್ಲಿ ಇಂದಿನ [[ಕರ್ನಾಟಕ]]ವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ . ಬ್ಯಾನರ್ಜಿ ರವರ (೨೦೧೦) ಪ್ರಕಾರ , ಪರಾಠಾಗಳು ಪಂಜಾಬಿ ಮತ್ತು [[ಉತ್ತರ ಭಾರತ]]ದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ .‌ ಬ್ಯಾನರ್ಜಿ ಹೇಳುವಂತೆ , ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು , ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು . ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ .
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ