ಪರಾಠಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಪರಾಠಾ ಎಂಬ ಹಿಂದೂಸ್ಥಾನಿ ಪದವು [[ಸಂಸ್ಕೃತ]]ದಿಂದ ಬಂದಿದೆ . ೧೩ ನೇ ಶತಮಾನದಲ್ಲಿ ಇಂದಿನ [[ಕರ್ನಾಟಕ]]ವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ . ಬ್ಯಾನರ್ಜಿ ರವರ (೨೦೧೦) ಪ್ರಕಾರ , ಪರಾಠಾಗಳು ಪಂಜಾಬಿ ಮತ್ತು [[ಉತ್ತರ ಭಾರತ]]ದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ .‌ ಬ್ಯಾನರ್ಜಿ ಹೇಳುವಂತೆ , ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು , ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು . ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ .
 
==ಸೇವನೆ==
ಪರಾಠಾ [[ಭಾರತೀಯ]] ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು ತುಪ್ಪ ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ.
==ಪರಾಠಾಕ್ಕಿರುವ ಇತರ ಹೆಸರುಗಳು==
ಪಾರಂಥ , ಪರೌನ್ಥಾ, ಪ್ರೋನ್ಥಾ, ಪಾರೊಂಟೆ([[ಪಂಜಾಬಿ]]ಯಲ್ಲಿ), ಪೊರೋಟಾ([[ಬಂಗಾಳಿ]] ಮತ್ತು [[ಮಲೆಯಾಳಂ]]), ಪಲಾಟಾ ([[ಬರ್ಮಾ]]ದಲ್ಲಿ), ಪೊರೋಥಾ([[ಅಸ್ಸಾಮಿ]]ಯಲ್ಲಿ), ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್‌ ನಲ್ಲಿ, [[ಶ್ರೀಲಂಕಾ]] ಮತ್ತು [[ಮಾಲ್ಡೀವ್ಸ್]]).
"https://kn.wikipedia.org/wiki/ಪರಾಠಾ" ಇಂದ ಪಡೆಯಲ್ಪಟ್ಟಿದೆ