"ಗಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(/ ಗಯಾ /)
 
ಚುNo edit summary
'''ಗಯಾ''' ( ಕನ್ನಡದಲ್ಲಿ '''''ಗಯೆ''''' ) [[ಬಿಹಾರ]]ದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು [[ರಾಮಾಯಣ]]ದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು [[ಹಿಂದೂ]] ಮತ್ತು [[ಬೌದ್ಧಧರ್ಮ]]ಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿಂದ ಮತ್ತು ನಾಲ್ಕನೆಯ ದಿಕ್ಕಿನಲ್ಲಿ ಫಲ್ಗೂ ನದಿಯಿಂದ ಸುತ್ತುವರಿಯಲ್ಪಟ್ಟಿದೆ.
 
ಹಿಂದೂ [[ಪುರಾಣ]]ಗಳ ಪ್ರಕಾರ ಈ ಸ್ಥಳದಲ್ಲಿ [[ವಿಷ್ಣು|ಮಹಾವಿಷ್ಣು]]ವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ [[ಶ್ರಾದ್ಧ]]ಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ [[ಮುಕ್ತಿ]] ಸಿಗುವುದೆಂಬ ನಂಬಿಕೆ ಇದೆ.
 
==ಗಯೆಯ ಪವಿತ್ರ ಸ್ಥಾನಗಳು==
೧,೨೯೩

edits

"https://kn.wikipedia.org/wiki/ವಿಶೇಷ:MobileDiff/96074" ಇಂದ ಪಡೆಯಲ್ಪಟ್ಟಿದೆ