ನೊಳಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ
ನೊಳಂಬ ಪದದ ಮೂಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
==ಇತಿಹಾಸ==
 
ನೊಳಂಬರು ತಮ್ಮನ್ನು ಪಲ್ಲವ ಮೂಲದವರು ಎಂದು ಗುರುತಿಸಿಕೊಂಡ ಶಾಸನಗಳಿವೆ.ಪಲ್ಲವರು ಮೂಲತಃ ಕರ್ಣಾಟಾಂದ್ರ ಸೀಮೆಯವರು , ಶಾತವಾಹನರ ಸಾಮಂತರಾಗಿ ವೆಂಗಿಮಂಡಳದ ಬಾಗಗಳಲ್ಲಿ ಅಧಿಪತ್ಯ ಹೊಂದಿದ್ದದವರು. ಯಾವಾಗ ಪಲ್ಲವರು ಚಾಳುಕ್ಯರಿಂದ ಸೋಲುಂಡು ತಮಿಳುನಾಡಿನ ದಕ್ಷಿಣಕ್ಕೆ ತಳ್ಳಲ್ಪಟ್ಟರೋ ಆಗ ವೆಂಗಿಮಂಡಳ ಹಾಗು ಇಂದಿನ ಹೈದ್ರಾಬಾದ್ ಕರ್ಣಾಟಕದ ಭೂಬಾಗಗಳಲ್ಲಿ ಉಳಿದುಕೊಂಡ ಕೆಲ ಸಾಮಂತರು ಕಾಳಾಮುಖ ಯತಿಗಳ ಆಶೀರ್ವಾದದಿಂದ ಪುನಃ ರಾಜ್ಯಕಟ್ಟುವ ಕಾರ್ಯವನ್ನು ಮುಂದುವರಿಸಿದರು ಆ ಪಲ್ಲವ ಮೂಲದವರೇ ನೊಳಂಬರು. ನೊಳಂಬ ಎಂಬಪದಕ್ಕೆ ಶ್ರೇಷ್ಠ ,ಅಗ್ರಮಾನ್ಯ , ಮುನ್ನುಗ್ಗುವ ವೀರ ಎಂದೆಲ್ಲಾ ಅರ್ಥೈಸಬಹುದು. ನೊಳಂಬರು ಮೂಲತಃ ಕುಱುಂಬರು ಅಂದರೆ ಬೆಟ್ಟಗುಡ್ಡದಲ್ಲಿ ಪಶುಪಾಲನೆ ಮಾಡಿಕೊಂಡಿದ್ದ ಆದಿ ಪಶುಪಾಲಕರಾದ ಇವರು ನಂತರ ಬೆಟ್ಟದ ತಪ್ಪಲಿನಲ್ಲಿ ವ್ಯವಸಾಯ ಆರಂಬಿಸಿದ ಕುಡು ಒಕ್ಕಲಿಗರು.ನೊಳಂಬರ ಶಿವಯೋಗಿ ಸಿದ್ಧರಾಮೇಶ್ವರರು ಸಹ ಕುಡುಒಕ್ಕಲಿಗ ಮುದ್ದೇಗೌಡನ ಮನೆತನದವರು. ಹೀಗೆ ಕುಡುಒಕ್ಕಲಿಗರಾದ ಕುಱುಂಬ ಗೌಡರೇ ನೊೞಂಬರು.ಪಲ್ಲವ ಸಾಮ್ರಾಜ್ಯವನ್ನು ಕಟ್ಟಿದವರು ಕುಱುಂಬ ಹೆಸರುಗೌಡರು ಹೇಗೆಎಂದು ಬಂತೆಂಬುದುಹಲವೆಡೆ ಸ್ಪಷ್ಟವಾಗಿಲ್ಲಉಲ್ಲೇಖಗಳಿವೆ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂದ ಸ್ತುತ್ಯನಾದವನೀತ. ಇವನ ಅನಂತರ ಪಟ್ಟಕ್ಕೆ ಬಂದವನು ಇವನ ಮಗ ಸಿಂಹಪೋತ (ಸು. 775-ಸು. 805). ಕಲಿ ನೊಳಂಬಾಧಿ ರಾಜನೆನಿಸಿಕೊಂಡಿದ್ದ ಈತ ಶ್ರೀಪುರುಷನ ಮಗನೂ ಶಿವಮಾರನ ಸಹೋದರನೂ ಆದ ದುಗ್ಗಮಾರನ ಮೇಲೆ ದಂಡೆತ್ತಿಹೋದ. ಶ್ರೀಪುರಷನ ಅನಂತರ ಗಂಗ ಸಿಂಹಾಸನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಇವನು ಶಿವಮಾರನ ಪರವಾಗಿ ದುಗ್ಗಮಾರನ ಮೇಲೆ ದಂಡೆತ್ತಿಹೋಗಿರಬಹುದೆಂದು ಊಹಿಸಬಹುದು. ಎರಡನೆಯ ಶಿವಮಾರನನ್ನು ರಾಷ್ಟ್ರಕೂಟ ಧ್ರುವ ಸೋಲಿಸಿದಾಗ ನೊಳಂಬರು ಗಂಗರ ಆಶ್ರಯವನ್ನು ಬಿಟ್ಟು ರಾಷ್ಟ್ರಕೂಟರ ಸಾಮಂತರಾದರು. ಸಿಂಹಪೋತನ ಮಗ ಚಾರುಪೊನ್ನೇರ ಪರಮೇಶ್ವರ ಪಲ್ಲವಾಧಿರಾಜ (ಸು. 805-ಸು. 830). ಇವನು ರಾಷ್ಟ್ರಕೂಟ 3ನೆಯ ಗೋವಿಂದನ ಸಾಮಂತನಾಗಿದ್ದ. ನೊಳಂಬಳಿಗೆ ಸಾಸಿರ ಮುಂತಾದ ಪ್ರಾಂತ್ಯಗಳು ಇವನ ಅಧೀನದಲ್ಲಿದ್ದುವು.<ref>{{Cite book|url=https://books.google.co.in/books?id=C9W1AAAAIAAJ&q=Nolamba&dq=Nolamba&hl=en&sa=X&ved=0ahUKEwiV-7C_l5TPAhVN4WMKHSyWBiQQ6AEINjAE|title=The Chālukyas of Kalyāṇ̄a: seminar papers|last=M. S.|first=Nagaraja Rao|publisher=Mythic Society|year=1983|isbn=|location=|pages=39–41|via=}}</ref>
 
ಸುಮಾರು 820ರಲ್ಲಿ ನೊಳಂಬರು ಪಶ್ಚಿಮದ ಗಂಗರ ಸಾಮಂತರಾದರೆಂದು ಕಾಣುತ್ತದೆ. ಚಾರುಪೊನ್ನೇರನ ಮಗ ಪೊಳಲ್ಚೋರನಿಗೆ ಗಂಗರಾಜ 1ನೆಯ ರಾಚಮಲ್ಲನ ಮಗಳು, ನೀತಿಮಾರ್ಗನ ತಂಗಿ, ಚಾಯಬ್ಬೆಯನ್ನು ಕೊಟ್ಟು ವಿವಾಹವಾಯಿತು. 1ನೆಯ ಪೊಳಲ್ಚೋರ ಕೋಲಾರ, ಬೆಂಗಳೂರು ಮತ್ತು ಚಿತ್ತೂರು ಜಿಲ್ಲೆಯ ಭಾಗಗಳನ್ನೊಳಗೊಂಡ ಗಂಗರು ಸಾಸಿರ ಪ್ರಾಂತ್ಯವನ್ನು ಸು. 830-ಸು. 875ರಲ್ಲಿ ಗಂಗನೀತಿಮಾರ್ಗನ ಅಧೀನದಲ್ಲಿ ಆಳುತ್ತಿದ್ದನೆಂಬುದಾಗಿ ಶಾಸನವೊಂದರಿಂದ ತಿಳಿಯುತ್ತದೆ. 810ರಲ್ಲಿ ಮಹಾಬಲಿ ಬಾಣರ ವಶದಲ್ಲಿದ್ದ ಈ ಪ್ರಾಂತ್ಯ 1ನೆಯ ರಾಚಮಲ್ಲನ ಕಾಲದಲ್ಲಿನೊಳಂಬರಿಗೆ ಸೇರಿತು. ಪೊಳೆಲ್ಚೋರನ ಕಾಲದಲ್ಲಿ ನೊಳಂಬರ ರಾಜ್ಯ ನೊಳಂಬಳಿಗೆ ಸಾಸಿರ, ಗಂಗರು ಸಾಸಿರ ಇವುಗಳೇ ಅಲ್ಲದೆ ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಿತು. 1ನೆಯ ನೀತಿಮಾರ್ಗನ ಹಿಂದೂಪುರ ಶಾಸನದಲ್ಲಿ (853) ಉಲ್ಲೇಖಿತನಾಗಿರುವ ನೊಳಂಬ ರಾಜ ಪೊಳೆಲ್ಚೋರನೇ ಇರಬಹುದೆಂದು ಊಹಿಸಲಾಗಿದೆ. ಈ ನೊಳಂಬ ರಾಜನ ರಾಜ್ಯ ಕಂಚಿಯವರೆಗೂ ವಿಸ್ತರಿಸಿತ್ತೆಂದು ಆ ಶಾಸನದಲ್ಲಿ ಹೇಳಿದೆ. ನಂದಿಯ ಭೋಗನಂದೀಶ್ವರ ದೇವಾಲಯದ ಗೋಪುರದ ಜೀರ್ಣೋದ್ಧಾರವಾದ್ದೂ ಅನಂತಪುರ ಜಿಲ್ಲೆಯ ಕಂಬದೂರಿನ ಬೆಳ್ದುಗೊಂಡೆಯ ಕೆರೆಯ ನಿರ್ಮಾಣವಾದ್ದೂ ಈತನ ಕಾಲದಲ್ಲಿ.
"https://kn.wikipedia.org/wiki/ನೊಳಂಬ" ಇಂದ ಪಡೆಯಲ್ಪಟ್ಟಿದೆ