ಕಾಮನಬಿಲ್ಲು (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಯಾವ ಊರಿನಲ್ಲಿ ಶೂಟಿಂಗ್ ಆಗಿರೋದು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೬ ನೇ ಸಾಲು:
[[Category:ವರ್ಷ-೧೯೮೩ ಕನ್ನಡಚಿತ್ರಗಳು]]
[[Category: ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
 
==ಕಥೆ==
ಅರ್ಚಕರ ಮಗ ಸೂರ್ಯನಾರಾಯಣ, ಊರಿನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಹೆಗಲೆಣೆಯಾಗಿ ನಿಂತು, ಹಿರಿಗೌಡನ ಪ್ರೀತಿಗೆ ಪಾತ್ರನಾಗಿ ಸೂರಿ ಎಂದೇ ಜನಪ್ರಿಯನಾದವ,ಹಿರಿಗೌಡನ ತಮ್ಮ ಕಿರಿಗೌಡನ ಕೋಪಕ್ಕೆ ತುತ್ತಾಗುತ್ತ್ತಾನೆ. ಪಕ್ಕದ ಊರಿನಲ್ಲಿನ ತನ್ನ ಮಿತ್ರ ಚಂದ್ರನ ಮಗುವಿನ ಮೇಲೆ ಸೂರಿಗೆ ಅಪಾರ ಮಮತೆ. ಮದುವೆಯಾಗುವಂತೆ ಚಂದ್ರನಿಗೆ ಎಷ್ಟೇ ಒತ್ತಾಯ ಮಾಡಿದರೂ ಆತ ಒಪ್ಪುವುದಿಲ್ಲ.ಚಂದ್ರನಿಗೆ ಒಳ್ಳೆಯ ಹೆಣ್ಣುಹುಡುಕುವುದಾಗಿ, ಚಂದ್ರನ ತಾಯಿಗೆ ಸುರಿ ವಚನ ನೀಡುತ್ತಾನೆ. ತನ್ನ ತಾಯಿಯ ಅಣತಿಯಂತೆ, ತನಗೆ ಬರುವ ಪೌರೋಹಿತ್ಯ ಮತ್ತು ಪಶುವೈದ್ಯವನ್ನು ಬಿಟ್ಟು, ತನ್ನ ಗೆಳೆಯ ಚಂದ್ರನ ಒತ್ತಾಸೆಯಿಂದ ಕೃಷಿಕನಾಗಿ ನೆಲೆನಿಲ್ಲುತ್ತಾನೆ. ನದಿಗೆ ಬಿದ್ದು ಜೀವ ಕಳೆದುಕೊಳ್ಳುತ್ತಿದ್ದ ಗಂಗೆಯನ್ನು ರಕ್ಷಿಸಿದ ಸೂರಿ, ತನ್ನ ಗದ್ದೆಗೆ ಬೆಂಕಿ ಇಡುತ್ತಿದ್ದ ಗಂಗೆಯ ತಂದೆಯನ್ನು ಕಂಡುಹಿಡಿಯುತ್ತಾನೆ. ಕಿರಿಗೌಡನ ಮಗ ಆಕೆಯನ್ನು ಬಸುರಿ ಮಾಡಿದುದಾಗಿಯೂ, ಆಕೆಯ ಬಾಳನ್ನು ಉಳಿಸಲು, ಕಿರಿಗೌಡನ ಆಙ್ನೆಯಂತೆ ಸೂರಿಯ ಗದ್ದೆಯನ್ನು ಸುಡಲು ಬಂದುದಾಗಿಯೂ ತಪ್ಪು ಒಪ್ಪಿಕೊಂಡ ಆತನನ್ನು ರಕ್ಷಿಸುವ ಹೊಣೆ ಹೊತ್ತು, ಆಕೆಯನ್ನು ರಕ್ಷಿಸುವ ಸಲುವಾಗಿ, ಗೌಡನ ಗದ್ದೆಗೆ ಬೆಂಕಿ ಹಚ್ಚಿದ ಆರೋಪವನ್ನು ತನ್ನ ಮೇಲೆ ಹೊತ್ತುಕೊಳ್ಳುತ್ತಾನೆ. ಗಂಗೆಯ ತಾಯಿ ಪಂಚಾಯಿತಿ ಕಟ್ಟೆಯಲ್ಲಿ ನಿಜ ಹೇಳಿದಾಗ, ಸೂರಿ ಊರಿಗೆ ಕಾಮನಬಿಲ್ಲಾಗುತ್ತಾನೆ. ಗೆಳೆಯನಿಗೆ ಊರಿನಿಂದ ಬಹಿಷ್ಕಾರ ಹಾಕಿಸಲು ಈ ರೀತಿ ಸಂಚು ಮಾಡಿದ ಕಿರಿಗೌಡನನ್ನು ಕೊಲ್ಲಲು ಚಂದ್ರ ರಾತ್ರಿಯಲ್ಲಿ ಕಿರಿಗೌಡನ ಮನೆಗೆ ನುಗ್ಗುತ್ತಾನೆ.ಮೋಟಾರ್ ಬೈಕ್ ಸದ್ದು ಕೇಳಿ ಸೂರಿ, ಓಡಿ ಬಂದು ಕಿರಿಗೌಡನನ್ನು ಉಳಿಸುತ್ತಾನೆ.<br>