ನರಗಳ ಉರಿಯೂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q2307256
೨ ನೇ ಸಾಲು:
 
==ತೊಂದರೆ==
ನರದ ಉರಿಯೂತವು ಬಲು ನೋವು ನೀಡುವ ರೋಗ. ಇದರಿಂದ ಒಳಗಿನ ನರತಂತುಗಳು ಹಿಚುಕಲ್ಪಟ್ಟಂತಾಗಿ ಅವುಗಳ ಕ್ರಿಯೆಗೆ ಧಕ್ಕೆ ಒದಗಿ ರೋಗ ಉಂಟಾಗುತ್ತದೆ. ರೋಗ ಸಾಧಾರಣವಾಗಿ ಮಧ್ಯವಯಸ್ಸಿನ ವ್ಯಕ್ತಿಯಲ್ಲಿ ಕಂಡುಬರುತ್ತದೆ. ರೋಗದ ಅತ್ಯಂತ ಪ್ರಮುಖಲಕ್ಷಣ ನೋವು. ರೋಗಗ್ರಸ್ತ ನರ ಪಸರಿಸಿರುವ ಎಲ್ಲ ಕಡೆಯಲ್ಲೂ ನೋವು ಇರುತ್ತದೆ. ನಿರಂತರವಾಗಿ ತಗ್ಗಿನ ಮಟ್ಟದಲ್ಲಿ ಇರುವ ನೋವು ಆಗಿಂದಾಗ ತೀವ್ರವಾಗಿ ಕೆರಳುತ್ತದೆ. ಅದು ದೀರ್ಘಕಾಲಿಕವಾಗಿಯೂ ಇರಬಹುದು. <ref>http://emedicine.medscape.com/article/819426-overview</ref>ರೋಗಪರಿಸ್ಥಿತಿಯಿಂದ ಒಳಗಿನ ನರ ಒತ್ತಡ ಮುಂತಾದ ಅನುಭವಗಳಾಗುತ್ತವೆ. ರೋಗಗ್ರಸ್ತ ನರಗಳಿಂದ ಪೂರೈಕೆ ಆಗುವ ಸ್ನಾಯುಗಳಲ್ಲಿ ಸ್ಪಷ್ಟವಾಗಿ ನಿಶ್ಶಕ್ತಿ ಕಂಡುಬರುತ್ತದೆ. ಸಂಧಿವಾತರೋಗಗಳಲ್ಲಿ ಸ್ನಾಯುಗಳು ನಶಿಸುವಷ್ಟೇ ಈ ರೋಗದಲ್ಲೂ ನಶಿಸುತ್ತವೆ. ಸ್ನಾಯುಗಳು ತಂತುಗಳಾಗಿ ಸೀಳಿ ಸೆಡೆತುಕೊಳ್ಳುವುದು ಬಲು ಸಾಮಾನ್ಯ.[[en:Neuritis]]
 
ಹೊರಚಾಚಿಕೊಂಡ ಕಶೇರುಕ ನಡುವಣ ಬಿಲ್ಲೆ (ಇಂಟರ್‍ವರ್ಟಿಬ್ರಲ್ ಡಿಸ್ಕ್), ಗಂತಿ ಮುಂತಾದವುಗಳಿಂದ ನರದ ಮೂಲ ಅಥವಾ ನರದಮೇಲೆ ಒತ್ತಡ ಉಂಟಾಗಿ ಪರಿಣಮಿಸುವ ಸ್ಥಿತಿಯ ಮೊದಲ ಹಂತದ ಚಿತ್ರವನ್ನು ನರದ ಉರಿಊತ ಬಲುವಾಗಿ ಹೋಲುತ್ತದೆ. ಆದರೂ ಆ ಸ್ಥಿತಿಗಳಲ್ಲಿ ಕಂಡುಬರುವಷ್ಟು ಶೀಘ್ರವಾಗಿ ಸ್ನಾಯು ಕ್ರಿಯಾನಾಶವಾಗಲಿ ಸಂವೇದನಾನಾಶವಾಗಲಿ ಕಂಡುಬರುವುದಿಲ್ಲ.
"https://kn.wikipedia.org/wiki/ನರಗಳ_ಉರಿಯೂತ" ಇಂದ ಪಡೆಯಲ್ಪಟ್ಟಿದೆ