"ನಗ್ನಬೀಜ ಸಸ್ಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[File:Gymnospermae.jpg|thumb|Gymnospermae]]
'''ನಗ್ನಬೀಜ ಸಸ್ಯಗಳು''' - ಬೀಜಸಸ್ಯಗಳ ಒಂದು ಪ್ರಮುಖ ಗುಂಪು (ಜಿಮ್ನೋಸ್ಪರ್ಮ್, [[en:Gymnosperm]]). ಇವು ಕಾಗದ, ಅಂಟು ಮತ್ತು ದಿಮ್ಮಿಗಳಾಗಿ ಬಹು ಉಪಕಾರಿಯಾಗಿವೆ.
<br>
ನಗ್ನಬೀಜಸಸ್ಯಗಳ ಪ್ರಾಚೀನ ಇತಿಹಾಸವನ್ನು ಪೇಲಿಯೊಜೋಯಿಕ್ ಕಾಲದವರೆಗೂ ಗುರುತಿಸಲಾಗಿದೆ. ಇವುಗಳ ಪ್ರಧಾನ ಶಾಖೆಗಳ ಇತಿಹಾಸವನ್ನು ಮತ್ತು ಇವುಗಳ ಸಂಭವನೀಯ ಉಗಮ ಹಾಗೂ ವಿಕಾಸಗಳನ್ನು ನಾವು ಕೂಲಂಕಷವಾಗಿ ಗಮನಿಸಿದರೆ, ಅವು ಮೀಸೋಜೋಯಿಕ್ ಯುಗದಲ್ಲಿ ಪ್ರಧಾನ ಸಸ್ಯಗಳಾಗಿರುವುದು ಎದ್ದು ಕಾಣುತ್ತದೆ.
==ಆಯಸ್ಸು ಮತ್ತು ಆಕಾರ==
ಜೀವಂತ ನಗ್ನಬೀಜಸಸ್ಯಗಳು ದಾರುಮಯ ಬಹುವಾರ್ಷಿಕ ಸಸ್ಯಗಳಾಗಿವೆ. ಬಹುಪಾಲು ಸಸ್ಯಗಳು ನಿತ್ಯಹರಿದ್ವರ್ಣವೃಕ್ಷಗಳಾಗಿದ್ದು ಕೆಲವು ಮಾತ್ರ ಪೊದೆಗಳ ರೂಪದಲ್ಲಿ ಬೆಳೆಯುವುವು. ಶಂಕುವೃಕ್ಷಗಳ ಪ್ರಭೇದವೊಂದಾದ ಪೋಡೋಕಾರ್ಪಸ್ ಉಸ್ಟಸ್ [[en:Podocarpaceae]] ಎಂಬುದು ಪರಾವಲಂಬಿಯೆಂದು ಹೇಳಲಾಗಿದೆ. ಇವುಗಳ ಬಾಹ್ಯ ಸ್ವರೂಪವೂ ಕೂಡ ವೈವಿಧ್ಯಮಯವಾದುದೇ. ತಾಳಕಲ್ಪಗಳು ತೆಂಗಿನ ಇಲ್ಲವೇ ವೃಕ್ಷಫರ್ನ್‍ಗಳ ಸ್ವರೂಪ ಪಡೆದಿದ್ದರೆ ಶಂಕುವೃಕ್ಷಗಳು ಶಂಕುವಿನಾಕಾರಕ್ಕೆ ಬೆಳೆಯುತ್ತವೆ. ನೀಟಮಿನ ಕೆಲವು ಪ್ರಭೇದಗಳು ಉಷ್ಣವಲಯದ ಮಳೆ ಕಾಡುಗಳಲ್ಲಿ ದೈತ್ಯಾಕಾರದ ಅಡರುಬಳ್ಳಿಗಳಾಗಿ ಬೆಳೆಯುವುವು. ಕೆಲವು ಪೊದೆಗಳಂತಿದ್ದರೆ ಮತ್ತೆ ಕೆಲವು ಚಿಕ್ಕವಯಸ್ಸಿನಲ್ಲಿ ಶಂಕುವಿನಾಕಾರಕ್ಕಿದ್ದು ವಯಸ್ಸಾದಂತೆ ವಿಪರೀತ ಕವಲೊಡೆಯುವಿಕೆಯಿಂದಾಗಿ ಅನಿಯತ ಆಕಾರ ಪಡೆಯುತ್ತವೆ. ಕೆಲವು ಸಸ್ಯಗಳು ಕೇವಲ ೫ ಸೆಂ ಮೀ.ಗಳಷ್ಟು ಚಿಕ್ಕವಾಗಿದ್ದರೆ (ಉದಾ: eóÉೀಮೀಯ ಪಿಗ್ಮೀಯ) ಅನೇಕ ಶಂಕುವೃಕ್ಷಗಳು ಬೃಹದ್ಗಾತ್ರದ ಗಗನಚುಂಬಿಗಳೂ (ಉದಾ.೧೧೨ ಮೀಟರುಗಳಷ್ಟು ಎತ್ತರ ಬೆಳೆಯುವ ಸಿಕೋಯ ಸೆಂಪರ್‍ವಿರೆನ್ಸ್). <ref>http://biotaxa.org/Phytotaxa/article/download/phytotaxa.261.3.1/20598</ref>ಕೆಲವು ಸಸ್ಯಗಳು ಅಲ್ಪಾಯುಗಳಾದರೆ ಮತ್ತೆ ಕೆಲವು ದೀರ್ಘಜೀವಿಗಳು (ಅಮೆರಿಕದ ಕ್ಯಾಲಿಫೋರ್ನಿಯದ ಬೆಟ್ಟಗಳಲ್ಲಿರುವ ಪೈನಸ್ ಅರಿಸ್ಟೇಟ ಸಸ್ಯಕ್ಕೆ ೪೦೦೦ ವರ್ಷ ವಯಸ್ಸಾಗಿದೆ ಎನ್ನಲಾಗಿದೆ). ಹೀಗೆ ದೀರ್ಘಾಯುಗಳೂ ಪ್ರಪಂಚದ ಸಸ್ಯಗಳಲ್ಲೆಲ್ಲ ಅತಿ ಎತ್ತರಕ್ಕೆ ಬೆಳೆಯುವ ಸಸ್ಯಗಳೂ ಈ ಗುಂಪಿನಲ್ಲಿರುವುದರಿಂದ ಇವುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ಕಳೆದ ಶತಮಾನದಿಂದ ಬಿರುಸಾಗಿ ಸಾಗಿವೆ.<br>
==ಆರ್ಥಿಕ ಪ್ರಾಮುಖ್ಯ==ಎಫಿಡ್ರದ ಕೆಲವು ಪ್ರಭೇದಗಳಿಂದ ಎಫಿಡ್ರಿನ್ ಅನ್ನು ಪಡೆಯಲಾಗುತ್ತಿದೆ. ಇದು ಗೂರಲಿಗೆ ಸಿದ್ಧೌಷದ. ಆರ್ಯರು ಸೋಮರಸವನ್ನು ಎಫಿಡ್ರದ ಪ್ರಭೇದವೊಂದರಿಂದ ತಯಾರಿಸುತ್ತಿದ್ದರೆಂದು ಹೇಳಲಾಗಿದೆ. ಇದಕ್ಕೆ ಸಾಕಷ್ಟು ಆಧಾರಗಳಿಲ್ಲ. ಕಾಡುಗಳಲ್ಲಿ ಬೆಳೆಯುವ ನೀಟಮ್ ಪ್ರಭೇದಗಳನ್ನು ಉರುವಲು ಮತ್ತು ಸೌದೆಗಾಗಿ ಬಳಸಿಕೊಳ್ಳಲಾಗುತ್ತಿದೆ. <br>
ಅಂಟು, ಕಾಗದ ತಯಾರಿಕೆಯ ಕಚ್ಚಾ ವಸ್ತುವಾಗಿಯೂ ಇವನ್ನು ಬಳಸಲಾಗುತ್ತದೆ.
==ಉಲ್ಲೇಖಗಳು==
{{reflist}}
೧,೭೩೪

edits

"https://kn.wikipedia.org/wiki/ವಿಶೇಷ:MobileDiff/959275" ಇಂದ ಪಡೆಯಲ್ಪಟ್ಟಿದೆ