ನಗ್ನಬೀಜ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
<br>
==ವರ್ಗೀಕರಣ==
ಬೀಜಸಸ್ಯಗಳನ್ನು ಸಾಮಾನ್ಯವಾಗಿ ನಗ್ನಬೀಜಸಸ್ಯಗಳು ಮತ್ತು ಆವೃತಬೀಜಸಸ್ಯಗಳು ಎಂಬ ಎರಡು ಪ್ರಧಾನ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಆವೃತಬೀಜಸಸ್ಯಗಳಲ್ಲಿ ಅಂಡಕಗಳು ಅಂಡಾಶಯದಿಂದ ಆವೃತಗೊಂಡಿರುತ್ತವೆ. ಆದರೆ ನಗ್ನಬೀಜಸಸ್ಯಗಳಲ್ಲಿ ಅಂಡಕಗಳು ಈ ರೀತಿ ಆವೃತವಾಗಿರದೆ ಬಹಿರಂಗವಾಗಿರುತ್ತವೆ.<ref>https://www.ingentaconnect.com/content/iapt/tax/2007/00000056/00000003/art00020</ref> ಮೇಲಿನ ಅಂಶ ಇವೆರಡು ಗುಂಪುಗಳ ನಡುವಣ ಒಂದು ಉತ್ತಮ ವ್ಯತ್ಯಾಸವಾಗಿದೆಯಾದರೂ, ಕೆಲವು ನಗ್ನಬೀಜಸಸ್ಯಗಳ ಶಂಕುಗಳಲ್ಲಿನ ಬೀಜಗಳು ಪಟ್ಟೆಗಳ ನಡುವೆ ಮುಚ್ಚಿಹೋಗಿರುತ್ತವೆ, ಇಲ್ಲವೆ ಆಳವಾಗಿ ಹೂತುಹೋಗಿರುತ್ತವೆ. ಅಂತೆಯೇ ಕೆಲವು ಆವೃತಬೀಜಸಸ್ಯಗಳಲ್ಲಿ ಅಂಡಕಗಳು ತೆರೆದ ಕಾರ್ಪೆಲ್‍ಗಳಲ್ಲಿ ಸ್ಥಿತವಾಗಿದ್ದು ಬಹಿರಂಗ ಸ್ಥಿತಿಯಲ್ಲಿರುತ್ತವೆ. <ref>http://www.theplantlist.org/browse/G/</ref>ಆದರೆ ಪರಾಗ ಮೊಳೆಯುವ ಕ್ರಮದಲ್ಲಿ ಮಾತ್ರ ಎರಡು ಗುಂಪುಗಳ ನಡುವೆ ವ್ಯತ್ಯಾಸವನ್ನು ಕಾಣಬಹುದು. ಆವೃತಬೀಜಸಸ್ಯಗಳಲ್ಲಿ ಪರಾಗನಳಿಕೆ ಶಲಾಕನಳಿಕೆಯ ಮೂಲಕ ಅಂಡಕವನ್ನು ಪ್ರವೇಶಿಸಿದರೆ ನಗ್ನಬೀಜಸಸ್ಯಗಳಲ್ಲಿ ಅದು ನೇರವಾಗಿ ಅಂಡಕವನ್ನು ಪ್ರವೇಶಿಸುತ್ತದೆ.
==ಲಿಂಗ ಮತ್ತು ವಿಕಸನ==
ನೀಟಮ್ ಮತ್ತು ವೆಲ್ವಿಶ್ಚಿಯಗಳನ್ನು ಬಿಟ್ಟರೆ, ನಗ್ನಬೀಜ ಸಸ್ಯಗಳ ಗಂಡು ಲಿಂಗಾಣುಜನಕಗಳು, ಆವೃತಬೀಜ ಸಸ್ಯಗಳ ಲಿಂಗಾಣುಜನಕಗಳಿಗಿಂತ ಹೆಚ್ಚು ಬಂಜೆಕೋಶಗಳನ್ನು ಉತ್ಪಾದಿಸುತ್ತದೆ. ಹೆಣ್ಣು ಲಿಂಗಾಣುಜನಕಗಳಿಗೆ ಸಂಬಂಧಪಟ್ಟಂತೆಯೂ ಒಂದು ಮುಖ್ಯ ವ್ಯತ್ಯಾಸವುಂಟು. <ref>https://www.ncbi.nlm.nih.gov/pmc/articles/PMC2944650</ref>ನಗ್ನಬೀಜ ಸಸ್ಯಗಳ ಹೆಣ್ಣು ಲಿಂಗಾಣುಜನಕಗಳು ದೊಡ್ಡ ಗಾತ್ರದವು ಮತ್ತು ನೀಟಮ್ ಹಾಗೂ ವೆಲ್ವಿಶ್ಚಿಯಗಳನ್ನು ಬಿಟ್ಟರೆ ಉಳಿದ ನಗ್ನಬೀಜಸಸ್ಯಗಳಲ್ಲಿ ಆರ್ಕಿಗೋನಿಯಗಳಿವೆ. ಬಹುಭ್ರೂಣತೆಯ (ಪಾಲಿಎಂಬ್ರಿಯಾನಿ) ಲಕ್ಷಣದಲ್ಲೂ ನಗ್ನಬೀಜಸಸ್ಯಗಳು ಆವೃತಬೀಜ ಸಸ್ಯಗಳನ್ನು ಮೀರಿಸಿವೆ. ಒಳರಚನೆಯಲ್ಲೂ ಈ ಎರಡು ಗುಂಪುಗಳ ನಡುವೆ ಕೆಲವು ಮುಖ್ಯ ವ್ಯತ್ಯಾಸಗಳನ್ನು ಕಾಣಬಹುದು. ನಗ್ನಬೀಜಸಸ್ಯಗಳ ಫ್ಲೋಯೆಮಿನ ಜರಡಿಕೋಶಗಳ ಜೊತೆ (ಇವು ಜರಡಿ ನಳಿಕೆಗಳೆಂದು ಕರೆಸಿಕೊಳ್ಳುವಷ್ಟು ವಿಶಿಷ್ಟತೆ ಪಡೆದಿಲ್ಲ) ಸಂಗಾತಿ ಜೀವಕೋಳಗಳಿಲ್ಲ. ಆವೃತಬೀಜಸಸ್ಯಗಳ ವೈಶಿಷ್ಟ್ಯಪೂರ್ಣ ಟ್ರೇಕಿಯಗಳು ನಗ್ನಬೀಜಸಸ್ಯಗಳಲ್ಲಿ (ನೀಟೇಲಿಸ್‍ನಲ್ಲಿ ಕಂಡುಬಂದರೂ ಅವುಗಳ ಉಗಮ ಮತ್ತು ವಿಕಸನಗಳು ಬೇರೆ ಬಗೆಯವು).
 
==ಆಯಸ್ಸು ಮತ್ತು ಆಕಾರ==
ಜೀವಂತ ನಗ್ನಬೀಜಸಸ್ಯಗಳು ದಾರುಮಯ ಬಹುವಾರ್ಷಿಕ ಸಸ್ಯಗಳಾಗಿವೆ. ಬಹುಪಾಲು ಸಸ್ಯಗಳು ನಿತ್ಯಹರಿದ್ವರ್ಣವೃಕ್ಷಗಳಾಗಿದ್ದು ಕೆಲವು ಮಾತ್ರ ಪೊದೆಗಳ ರೂಪದಲ್ಲಿ ಬೆಳೆಯುವುವು. ಶಂಕುವೃಕ್ಷಗಳ ಪ್ರಭೇದವೊಂದಾದ ಪೋಡೋಕಾರ್ಪಸ್ ಉಸ್ಟಸ್ [[en:Podocarpaceae]] ಎಂಬುದು ಪರಾವಲಂಬಿಯೆಂದು ಹೇಳಲಾಗಿದೆ. ಇವುಗಳ ಬಾಹ್ಯ ಸ್ವರೂಪವೂ ಕೂಡ ವೈವಿಧ್ಯಮಯವಾದುದೇ. ತಾಳಕಲ್ಪಗಳು ತೆಂಗಿನ ಇಲ್ಲವೇ ವೃಕ್ಷಫರ್ನ್‍ಗಳ ಸ್ವರೂಪ ಪಡೆದಿದ್ದರೆ ಶಂಕುವೃಕ್ಷಗಳು ಶಂಕುವಿನಾಕಾರಕ್ಕೆ ಬೆಳೆಯುತ್ತವೆ. ನೀಟಮಿನ ಕೆಲವು ಪ್ರಭೇದಗಳು ಉಷ್ಣವಲಯದ ಮಳೆ ಕಾಡುಗಳಲ್ಲಿ ದೈತ್ಯಾಕಾರದ ಅಡರುಬಳ್ಳಿಗಳಾಗಿ ಬೆಳೆಯುವುವು. ಕೆಲವು ಪೊದೆಗಳಂತಿದ್ದರೆ ಮತ್ತೆ ಕೆಲವು ಚಿಕ್ಕವಯಸ್ಸಿನಲ್ಲಿ ಶಂಕುವಿನಾಕಾರಕ್ಕಿದ್ದು ವಯಸ್ಸಾದಂತೆ ವಿಪರೀತ ಕವಲೊಡೆಯುವಿಕೆಯಿಂದಾಗಿ ಅನಿಯತ ಆಕಾರ ಪಡೆಯುತ್ತವೆ. ಕೆಲವು ಸಸ್ಯಗಳು ಕೇವಲ ೫ ಸೆಂ ಮೀ.ಗಳಷ್ಟು ಚಿಕ್ಕವಾಗಿದ್ದರೆ (ಉದಾ: eóÉೀಮೀಯ ಪಿಗ್ಮೀಯ) ಅನೇಕ ಶಂಕುವೃಕ್ಷಗಳು ಬೃಹದ್ಗಾತ್ರದ ಗಗನಚುಂಬಿಗಳೂ (ಉದಾ.೧೧೨ ಮೀಟರುಗಳಷ್ಟು ಎತ್ತರ ಬೆಳೆಯುವ ಸಿಕೋಯ ಸೆಂಪರ್‍ವಿರೆನ್ಸ್). <ref>http://biotaxa.org/Phytotaxa/article/download/phytotaxa.261.3.1/20598</ref>ಕೆಲವು ಸಸ್ಯಗಳು ಅಲ್ಪಾಯುಗಳಾದರೆ ಮತ್ತೆ ಕೆಲವು ದೀರ್ಘಜೀವಿಗಳು (ಅಮೆರಿಕದ ಕ್ಯಾಲಿಫೋರ್ನಿಯದ ಬೆಟ್ಟಗಳಲ್ಲಿರುವ ಪೈನಸ್ ಅರಿಸ್ಟೇಟ ಸಸ್ಯಕ್ಕೆ ೪೦೦೦ ವರ್ಷ ವಯಸ್ಸಾಗಿದೆ ಎನ್ನಲಾಗಿದೆ). ಹೀಗೆ ದೀರ್ಘಾಯುಗಳೂ ಪ್ರಪಂಚದ ಸಸ್ಯಗಳಲ್ಲೆಲ್ಲ ಅತಿ ಎತ್ತರಕ್ಕೆ ಬೆಳೆಯುವ ಸಸ್ಯಗಳೂ ಈ ಗುಂಪಿನಲ್ಲಿರುವುದರಿಂದ ಇವುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ಕಳೆದ ಶತಮಾನದಿಂದ ಬಿರುಸಾಗಿ ಸಾಗಿವೆ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ನಗ್ನಬೀಜ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ