ನೊಣವಿನಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ನೊಣವಿನಕೆರೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ದೊಡ್ಡ ಗ್ರಾಮ, ಹೋಬಳಿ ಕೇಂದ್ರ. ತಿಪಟೂರಿನ ಆಗ್ನೇಯಕ್ಕೆ ಸುಮಾರು 13 ಕಿಮೀ. ದೂರದಲ್ಲಿದೆ. ಜನಸಂಖ್ಯೆ 3,208 (1971).
 
ನೊಣವಿನಕೆರೆ ಎಂದು ಹೆಸರು ಬರಲು ಕಾರಣ ಇಲ್ಲಿನ ಕೆರೆಯನ್ನು ನೊಳಂಬ ರಾಜರು ಕಟ್ಟಿಸಿದ್ದು. ನೊಳಂಬಕೆರೆ ಎಂಬುವುದು ನಂತರ ಅಪ್ರಬಾಂಶವಾಗಿ ನೊಣವಿನಕೆರೆ ಎಂದು ಹೆಸರಾಗಿದೆ. ನೊಣವಿನಕೆರೆ ಒಂದು ಕಾಲದಲ್ಲಿ ಪಾಶುಪತ ಕಾಳಾಮುಖ ಶೈವಶಾಖೆಗಳ ಪ್ರಭಲ ಕೇಂದ್ರವಾಗಿತ್ತು , ಇರಿವನೊಳಂಬ ಎಂಬ ರಾಜನು ಅನೇಕ ಪಾಶುಪತ ಮಠಗಳಿಗೆ ದತ್ತಿಗೆ ಕೊಟ್ಟಿದ್ದನು. ನೊಳಂಬ ರಾಜರಿಂದ ಸ್ಥಾಪಿಸಲ್ಪಟ್ಟ ಪಾಶುಪತ ಸಂಪ್ರದಾಯದ ಮಠದಲ್ಲಿ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠವೂ ಒಂದಾಗಿದೆ. ಇಲ್ಲಿನ ಕಲ್ಲೇಶ್ವರ ದೇಗುಲದಲ್ಲಿ ನೊಳಂಬ ವಂಶದ ಮೂವರು ರಾಜರಿಗೆ ಪಟ್ಟಕಟ್ಟಿದ್ದರು ಇಲ್ಲಿನ ಸಮೀಪವಿರುವ ತಿಪಟೂರಿಗೆ ಹೆಸರು ಬರಲಿಕ್ಕೂ ಕಾರಣ ನೊಳಂಬರ ಮೂರು ರಾಜರ ಪಟ್ಟದ ತ್ರಿಪಟ್ಟದೂರು ಎಂಬುದೇ ಆಗಿದೆ.
 
ನೊಣವಿನಕೆರೆ ಹಿಂದೆ ಹೆಬ್ಬಾರ್ ಶ್ರೀ ವೈಷ್ಣವರ ಪಂಚಗ್ರಾಮಗಳಲ್ಲೊಂದಾಗಿತ್ತು. ಉಳಿದ ನಾಲ್ಕು ಗ್ರಾಮಗಳು ಕಡಬ, ಮಾಯಸಂದ್ರ, ನುಗ್ಗೆಹಳ್ಳಿ ಮತ್ತು ಬಿಂಡಿಗನವಿಲೆ.
 
ಈ ಊರಿನ ದೊಡ್ಡ ಕೆರೆಗೆ ನೊಣಬನಕೆರೆ ಎಂಬ ಹೆಸರಿತ್ತು. ಅದರಿಂದ ಈ ಊರಿಗೂ ನೊಣಬನಕೆರೆ ಎಂಬ ಹೆಸರು ಬಂದು ಅನಂತರ ಇದು ನೊಣವಿನಕೆರೆ ಎಂದಾಯಿತು. 1162ರ ಶಾಸನವೊಂದರಲ್ಲಿ ನೊಣಬನಕೆರೆಯ ಉಲ್ಲೇಖವಿದೆ.
Line ೧೦ ⟶ ೯:
ನೊಣವಿನಕೆರೆ ಹೋಬಳಿಯ ಜನರ ಮುಖ್ಯ ಕಸುಬು ವ್ಯವಸಾಯ. ಜೊತೆಗೆ ಕುರಿ ಸಾಕುವುದು. ಪಶುಪಾಲನೆ, ನೇಯ್ಗೆ, ನಾರಿನ ಕೈಗಾರಿಕೆ ಇವೆ. ಇಲ್ಲಿಯ ವಾಣಿಜ್ಯ ಬೆಳೆ ತೆಂಗು; ಇತರ ಬೆಳೆಗಳು ರಾಗಿ, ಬತ್ತ, ಜೋಳ, ಅವರೆ ಮತ್ತು ಹುರುಳಿ.
 
ನೊಣವಿನಕೆರೆ ಹೋಬಳಿಯ ಗ್ರಾಮಗಳ ಪೈಕಿ ವಿಘ್ನಸಂತೆ ಮುಖ್ಯವಾದದ್ದು. ಇಲ್ಲಿ ಹೊಯ್ಸಳರ ಕಾಲದ ಸುಂದರವಾದ ಲಕ್ಷ್ಮೀನರಸಿಂಹ ದೇವಾಲಯವಿದೆ.ನೊಣವಿನಕೆರೆ ಹಿಂದೆ ಹೆಬ್ಬಾರ್ ಶ್ರೀ ವೈಷ್ಣವರ ಪಂಚಗ್ರಾಮಗಳಲ್ಲೊಂದಾಗಿತ್ತು. ಉಳಿದ ನಾಲ್ಕು ಗ್ರಾಮಗಳು ಕಡಬ, ಮಾಯಸಂದ್ರ, ನುಗ್ಗೆಹಳ್ಳಿ ಮತ್ತು ಬಿಂಡಿಗನವಿಲೆ.
 
== ದೇವಾಲಯಗಳು==
"https://kn.wikipedia.org/wiki/ನೊಣವಿನಕೆರೆ" ಇಂದ ಪಡೆಯಲ್ಪಟ್ಟಿದೆ