"ಕುಷಾಣ ರಾಜವಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು
 
[[ಚಿತ್ರ:Kushanmap.jpg|thumb|ಕುಷಾಣ ಪ್ರಾಂತ್ಯಗಳು ಮತ್ತು [[ಕನಿಷ್ಕ]]ನ ನಿಯಂತ್ರಣದಲ್ಲಿ ಕುಷಾಣ ಅಧಿಪತ್ಯದ ಗರಿಷ್ಠ ವಿಸ್ತಾರ]]
 
'''ಕುಷಾಣ ರಾಜವಂಶ''' ಯೂಶಿಗಳಿಂದ ಬ್ಯಾಕ್ಟ್ರಿಯನ್ ಪ್ರಾಂತ್ಯಗಳಲ್ಲಿ ಆರಂಭಿಕ ೧ನೇ ಶತಮಾನದಲ್ಲಿ ರೂಪಗೊಂಡ ಒಂದು ಸಮನ್ವಯದ ಸಾಮ್ರಾಜ್ಯವಾಗಿತ್ತು. ಇದು ಅಫ಼್ಘಾನಿಸ್ತಾನದ ಬಹುತೇಕ ಭಾಗ<ref>http://www.kushan.org/general/other/part1.htm and Si-Yu-Ki, Buddhist Records of the Western World, (Tr. Samuel Beal: Travels of Fa-Hian, The Mission of Sung-Yun and Hwei-S?ng, Books 1–5), Kegan Paul, Trench, Trubner & Co. Ltd. London. 1906 and Hill (2009), pp. 29, 318–350</ref>, ಮತ್ತು ನಂತರ [[ಭಾರತೀಯ ಉಪಖಂಡ]]ದ ಉತ್ತರ ಭಾಗಗಳನ್ನು (ಕನಿಷ್ಠಪಕ್ಷ ಸಾಕೇತ ಮತ್ತು [[ವಾರಾಣಸಿ]] ಹತ್ತಿರದ [[ಸಾರ್‍ನಾಥ್]]‍ನಷ್ಟು ದೂರದವರೆಗೆ) ಆವರಿಸುವಂತೆ ಹರಡಿತು. ಈ ಸ್ಥಳದಲ್ಲಿ ಕುಷಾಣ ಸಾಮ್ರಾಟ [[ಕನಿಷ್ಕ]]ನ ಕಾಲದ್ದೆಂದು ಶಾಸನಗಳು ಸಿಕ್ಕಿವೆ. ಸಾಮ್ರಾಟ ಕನಿಷ್ಕನು[[ಕನಿಷ್ಕ]]ನು [[ಬೌದ್ಧ ಧರ್ಮ]]ದ ಮಹಾನ್ ಪೋಷಕನಾಗಿದ್ದನು; ಆದರೆ ಕುಷಾಣರು ಭಾರತೀಯ ಉಪಖಂಡದ ಕಡೆಗೆ ದಕ್ಷಿಣ ದಿಕ್ಕಿನಲ್ಲಿ ವಿಸ್ತರಿಸಿದಂತೆ, ಅವರ ನಂತರದ ನಾಣ್ಯಗಳ ದೇವತೆಗಳು ಈ ಸಾಮ್ರಾಜ್ಯದ ಹೊಸ ಹಿಂದೂ ಅಧಿಕಾಂಶವನ್ನು ಪ್ರತಿಬಿಂಬಿಸಿದವು.
 
ಕುಷಾಣರು ಯೂಶಿ ಒಕ್ಕೂಟದ ಐದು ಶಾಖೆಗಳಲ್ಲಿ ಒಬ್ಬರು, ಮತ್ತು ಗಾನ್ಸುದಿಂದ ವಲಸೆಹೋಗಿ ಪ್ರಾಚೀನ ಬ್ಯಾಕ್ಟ್ರಿಯಾದಲ್ಲಿ ನೆಲೆಗೊಂಡ ಅಲೆಮಾರಿ ಜನರಾಗಿದ್ದರು. ಕುಷಾಣರು ಬಹುಶಃ ಆರಂಭದಲ್ಲಿ ಆಡಳಿತದ ಉದ್ದೇಶಗಳಿಗಾಗಿ ಗ್ರೀಕ್ ಭಾಷೆಯನ್ನು ಬಳಸಿದರು, ಆದರೆ ಶೀಘ್ರದಲ್ಲೇ ಬ್ಯಾಕ್ಟ್ರಿಯನ್ ಭಾಷೆಯನ್ನು ಬಳಸಲು ಆರಂಭಿಸಿದರು. ಕನಿಷ್ಕನು ತನ್ನ ಸೇನೆಗಳನ್ನು ಕಾರಾಕೋರಮ್ ಪರ್ವತಗಳ ಉತ್ತರಕ್ಕೆ ಕಳುಹಿಸಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಂಡನು. [[ಗಾಂಧಾರ]]ದಿಂದ ಚೀನಾದವರೆಗೆ ನೇರ ರಸ್ತೆ ಕುಷಾಣರ ಹಿಡಿತದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಉಳಿದಿತ್ತು, ಇದರಿಂದ ಕಾರಾಕೋರಮ್‍ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಕ್ಕೆ ಪ್ರೋತ್ಸಾಹ ಸಿಕ್ಕಿತು ಮತ್ತು ಚೀನಾಕ್ಕೆ ಮಹಾಯಾನ ಬೌದ್ಧ ಧರ್ಮದ ಹರಡಿಕೆಯನ್ನು ಸುಗಮವಾಗಿಸಿತು.
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/959155" ಇಂದ ಪಡೆಯಲ್ಪಟ್ಟಿದೆ