ಇಸ್ರೇಲಿನ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮ ನೇ ಸಾಲು:
 
==ಅರಬ್ಬರ ಮತ್ತು ಯೆಹೂದ್ಯರ ಹಕ್ಕುಬಾಧ್ಯತೆ==
[[File:UN Partition Plan For Palestine 1947.png|thumb|370px|ಪ್ಯಾಲೆಸ್ಟೈನ್ಗಾಗಿ ವಿಶ್ವಸಂಸ್ಥೆಯ ವಿಭಜನಾ ಯೋಜನೆ, 1947]]
ಅರಬ್ಬರ ಮತ್ತು ಯೆಹ್ಯೂದರ ಹಕ್ಕುಬಾಧ್ಯತೆಗಳನ್ನು ಪರಿಗಣಿಸಿ ಅವುಗಳಿಗೆ ಅನುಸಾರವಾದ ರೀತಿಯಲ್ಲಿ ಇಬ್ಬರಿಗೂ ಸ್ವಾತಂತ್ರ್ಯ ಕೊಡುವ ವಿಷಯದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಬ್ರಿಟಿಷ್ ಸರ್ಕಾರ ಹುಡುಕುತ್ತಿತ್ತು. ಅರಬ್ ಪ್ಯಾಲಿಸ್ಟೈನ್, ಯೆಹೂದ್ಯ ಪ್ಯಾಲಿಸ್ಟೈನ್ ಎಂಬುದಾಗಿ ಆ ಸಣ್ಣ ರಾಜ್ಯವನ್ನು ಇಬ್ಭಾಗ ಮಾಡುವ ಯೋಚನೆಯೂ ಇತ್ತು. ಆದರೆ ಇದಕ್ಕೆ ತೊಡಕುಗಳಿದ್ದುವು. ಅರಬ್ಬರ ಹಾಗೂ ಯೆಹೂದ್ಯರ ಎರಡು ಪ್ರಬಲ ಗುಂಪುಗಳು ಮೊದಲೇ ಯೋಚಿಸಿದಂತೆ ಸ್ಪಷ್ಟವಾಗಿ ಬೇರ್ಪಟ್ಟಿರಲಿಲ್ಲ. ಯೆಹೂದ್ಯರಿಗೆ ಅತ್ಯಂತ ಪವಿತ್ರಕ್ಷೇತ್ರವಾದ ಜೆರೂಸಲೆಂನಲ್ಲೇ ಬಹುಸಂಖ್ಯಾತ ಅರಬ್ಬರಿದ್ದರು. ಇದು ತಮ್ಮ ರಾಜ್ಯದಲ್ಲಿ ಸೇರಲೇಬೇಕೆಂದು ಯೆಹೂದ್ಯರ ಆಗ್ರಹ. ಅರಬ್ಬರು ಮಂಡಿಸಿದ ವಾದವೂ ನ್ಯಾಯವಾಗಿತ್ತು. ಪ್ರತ್ಯೇಕ [[ಇಸ್ರೇಲ್]] ರಾಜ್ಯ ರಚನೆಗೆ ಅವರು ಅನೇಕ ಆಕ್ಷೇಪಣೆಗಳನ್ನೆತ್ತಿದರು. ಹೊಸ ರಾಜ್ಯ ರಚನೆಯ ಹಂಚಿಕೆಯಾದದ್ದು ರಾಜಕೀಯ ಒತ್ತಾಯದಿಂದ. ಅದು ಅರಬ್ ರಾಜ್ಯಗಳ ಕ್ಷೇಮ ಮುನ್ನಡೆಗಳನ್ನು ತಡೆಗಟ್ಟುವ ಕುಟಿಲ ಪ್ರಯತ್ನ. ಪ್ಯಾಲೆಸ್ಟೈನಿನ ಜನಸಂಖ್ಯೆಯಲ್ಲಿ ಶೇ. 90ರಷ್ಟು (ಹೊರದೇಶಗಳಿಂದ ಯೆಹೂದ್ಯರು ವಲಸೆ ಬರುವ ಮುನ್ನ) ಜನ ಅರಬ್ಬರೇ ಇದ್ದರು. ಏಳನೆಯ ಶತಮಾನದಲ್ಲಿ ಅದನ್ನು ರೋಮನ್ನರಿಂದ ವಶಪಡಿಸಿಕೊಂಡಾಗಿನಿಂದಲೂ ಅಲ್ಲಿ ಅರಬ್ಬರೇ ವಾಸಿಸುತ್ತಿದ್ದರು: ಈ ಅಸ್ವಾಭಾವಿಕ ಹಂಚಿಕೆಯಿಂದ ಅರಬ್ ಜನಾಂಗವನ್ನು ಇಬ್ಭಾಗಮಾಡಿದಂತಾಗುತ್ತದೆ; ಭಿನ್ನ ಭಿನ್ನ ರಾಷ್ಟ್ರಗಳಲ್ಲಿದ್ದ ಲಕ್ಷಾಂತರ ಯೆಹೂದ್ಯರು ವಲಸೆ ಬಂದದ್ದರಿಂದ ಈಗಾಗಲೇ ಎಷ್ಟೋ ಅರಬ್ಬರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ; ಮಧ್ಯ ಏಷ್ಯಕ್ಕೇ ಯೆಹೂದ್ಯರು ಅನ್ಯಜನರು. ಇದು ಅರಬ್ಬರ ವಾದ.
 
"https://kn.wikipedia.org/wiki/ಇಸ್ರೇಲಿನ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ