ಇಸ್ರೇಲಿನ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
 
==ಈಚಿನ ಚರಿತ್ರೆ==
[[File:Jerusalem-2013(2)-Aerial-Temple Mount-(south exposure).jpg|thumb|360px|ಜೆರುಸಲೆಮ್ -2013 (2) -ಏರಿಯಲ್-ಟೆಂಪಲ್ ಮೌಂಟ್- (ದಕ್ಷಿಣ ದೃಶ್ಯ)]]
ಈಗ [[ಇಸ್ರೇಲ್]] ಇರುವ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ಕೇನನ್ ಎಂಬ ಹೆಸರಿತ್ತು; ಅನಂತರ ಇದು ಪ್ಯಾಲಿಸ್ಟೈನ್ ಆಯಿತು. ಯೆಹೂದ್ಯರು [[ಈಜಿಪ್ಟನ್ನು]] ಬಿಟ್ಟು, ಸಿನಾಯ್ ಮರಳುಗಾಡುಗಳಲ್ಲಿ ಅಲೆದು, ಪ್ಯಾಲಿಸ್ಟೈನಿಗೆ ಬಂದು, ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಜನಾಂಗವಾಗಿ ಬಾಳಿದರು; ವಿಶ್ವದಲ್ಲೆ ಹೆಸರಾದ ಸಂಸ್ಕøತಿ ಬೆಳೆಸಿದರು. ಯೆಹೂದ್ಯ ಪ್ರವಾದಿಗಳು, ಪುರೋಹಿತರು, ಕವಿಗಳು, ದಾರ್ಶನಿಕರು ಬದುಕಿ ಗ್ರಂಥರಚನೆ ಮಾಡಿದ್ದು ಇಲ್ಲಿ.(ನೋಡಿಪ್ಯಾಲಸ್ತೀನ್)ಪ್ರಾಚೀನ ಇಸ್ರೇಲಿನಲ್ಲಿ ಮೊದಲು ರಾಜ್ಯ ಸ್ಥಾಪಿಸಿದವನು ಸಾಲ್. ಅವನ ತರುವಾಯ ರಾಜ್ಯವಾಳಿದ ಡೇವಿಡ್ ಈ ರಾಷ್ಟ್ರವನ್ನು ಬಲಪಡಿಸಿದ; [[ಜೆರೂಸಲೆಂ]] ನಗರವನ್ನು [[ರಾಜಧಾನಿ]]ಯನ್ನಾಗಿ ಮಾಡಿಕೊಂಡ. ಮುಂದೆ ರಾಜ್ಯವಾಳಿದ ಸಾಲಮನ್ ತಾಮ್ರದ ಸ್ತಂಭಗಳಿದ್ದ ದೇವಸ್ಥಾನವನ್ನು ರಾಜಧಾನಿಯಲ್ಲಿ ಕಟ್ಟಿಸಿದ. ಆದರೆ ಮೇಲಿಂದ ಮೇಲೆ ನುಗ್ಗಿ ಬರುತ್ತಿದ್ದ ದಾಳಿಕಾರರು ಅನೇಕ ಸಲ ಈ ದೇಶವನ್ನು ಗೆದ್ದು ಆಳಿದರು. ಇಸ್ರೇಲ್ ಪಶ್ಚಿಮದ ಫಲವತ್ತಾದ [[ನೈಲ್]] ನದೀ ಬಯಲಿನಲ್ಲೂ ಪೂರ್ವದಲ್ಲಿನ ಅಷ್ಟೇ ಫಲವತ್ತಾದ [[ಯೂಫ್ರೆಟೀಸ್]] ನದೀ ಪ್ರದೇಶದಲ್ಲೂ ಇದ್ದ ಬಲಿಷ್ಠ ರಾಜ್ಯಗಳ ನಡುವಣ ಕಾಲ್ಚೆಂಡಾಯಿತು. ಅಸ್ಸೀರಿಯನ್ನರು, ಬ್ಯಾಬಿಲೋನಿಯನ್ನರು ಪರ್ಷಿಯನ್ನರು, ಗ್ರೀಕರು, ರೋಮನರು-ಹೀಗೆ ಒಬ್ಬರಾದ ಮೇಲೊಬ್ಬರು ಇಸ್ರೇಲನ್ನು ಗೆದ್ದು ಆಕ್ರಮಿಸಿದರು. ಮುಂದೆ ಇದು ಆಟೋಮನ್ ಸಾಮ್ರಾಜ್ಯದ ಭಾಗವಾಗಿದ್ದು, ಕೊನೆಗೆ ತುರ್ಕಿ ರಾಜ್ಯಕ್ಕೆ ಸೇರಿಹೋಯಿತು. ಈ ಆಕ್ರಮಣಗಳ ನಡುವೆ ಇಸ್ರೇಲ್ ಕೊಂಚ ಕಾಲ ಮಾತ್ರ ಸ್ವಾತಂತ್ರ್ಯ ಪಡೆದಿತ್ತು; ಉಳಿದ ಕಾಲಗಳಲ್ಲಿ, ಶತ್ರುಗಳು ದೇಶವನ್ನು ನಾಶಗೊಳಿಸುತ್ತಿದ್ದಾಗಲೂ ಯೆಹೂದ್ಯರ ತಾಯ್ನಾಡಿನ ಮಮತೆ ಕುಗ್ಗಲಿಲ್ಲ; ಗೋಳುಗೋಡೆಯ (ವೇಲಿಂಗ್ ವಾಲ್) ಎದುರು ನಿಂತು ಪರದಾಸ್ಯಕ್ಕಾಗಿ ಪ್ರಲಾಪಿಸಿ, ವಿಮೋಚನೆಗಾಗಿ ದೇವರಿಗೆ ಮೊರೆಯಿಡುತ್ತಿದ್ದರು.
 
==ಚಾರಿತ್ರಿಕ ಚರಿತ್ರೆ==
ಈ ಚಾರಿತ್ರಿಕ ಪರಿಸ್ಥಿತಿಗಳಿಂದಾಗಿ [[ಯೆಹೂದ್ಯ]]ರು ತಮ್ಮ ತಾಯ್ನಾಡನ್ನು ತೊರೆದು, ತಮ್ಮದೆಂದು ಹೇಳಿಕೊಳ್ಳುವ ದೇಶವಿಲ್ಲದೆ, ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಹರಡಿ ಹೋಗಬೇಕಾಯಿತು. ಶತಮಾನಗಳ ಕಾಲ ಅವರ ಈ ಸ್ಥಿತಿ ಮುಂದುವರೆಯಿತು. ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಯೆಹೂದ್ಯರು ತಮ್ಮದೇ ಆದ ಸ್ವಾಸ್ಥ್ಯವೊಂದರ ರಚನೆಗಾಗಿ ಚಳವಳಿ ಹೂಡಿದರು. ಆ ಚಳವಳಿಯ ಪ್ರವರ್ತಕ ಟೆಯೋಡೋರ್ ಹೆಟ್ರ್ಸಲ್. ಕ್ರೌರ್ಯಕ್ಕೆ ಗುರಿಯಾಗಿ ಹರಡಿ ಹಂಚಿಹೋಗಿದ್ದ ಯೆಹೂದ್ಯರಿಗೆ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಯ ನಿರ್ಮಾಣವೇ ಈ ಚಳವಳಿಯ ಗುರಿ. ಸ್ವಪ್ರೇರಣೆಯಿಂದ ಹಿತೈಷಿಗಳು ಕೊಟ್ಟ ಹಣ, ರಾತ್‍ಚೈಲ್ಡ್ ನೀಡಿದ ಉದಾರ ಧನಸಹಾಯ ಇವುಗಳಿಂದ [[ಯೆಹೂದ್ಯ]] ರಾಷ್ಟ್ರೀಯ ಸಹಾಯನಿಧಿಯೊಂದು ನಿರ್ಮಿತವಾಯಿತು. ಇದರಿಂದ ಪ್ಯಾಲಿಸ್ಟೈನಿನಲ್ಲಿ ನೆಲೆಸಬಯಸಲು ಇಚ್ಛಿಸಿದವರಿಗೋಸ್ಕರ ಭೂಮಿಯನ್ನು ಕೊಳ್ಳಲನುಕೂಲವಾಯಿತು. ಈ ಅನುಕೂಲವನ್ನೊದಗಿಸುವುದಕ್ಕಾಗಿ 1908ರಲ್ಲಿ ಜಾಫದಲ್ಲಿ ಒಂದು ಯೆಹೂದ್ಯ ಸ್ವಾಸ್ಥ್ಯವಾದಿ ನಿಯೋಗ ರಚಿಸಲಾಯಿತು.
"https://kn.wikipedia.org/wiki/ಇಸ್ರೇಲಿನ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ