ಬಿ.ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಬಿ. ಸುರೇಶ''' ([[ಜನನ :೧೯೬೨]]) ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. [[ದಾವಣಗೆರೆ]] ಇವರ ಹುಟ್ಟೂರು. [[೧೯೭೩]]ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ [[ಷಾಪುರದ ಸೀನಿಂಗಿ-ಸತ್ಯ]] ನಾಟಕವು [[೧೯೯೭]]ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
 
ಈಗಲೂ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬಿ.ಸುರೇಶ ಸಕ್ರಿಯರಾಗಿರುವ ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ|ವಿಜಯಮ್ಮನವರ]] ಪುತ್ರರು.
[[Image:Bsuresh.jpg|frame|ಬಿ.ಸುರೇಶ]]
 
Line ೧೮ ⟶ ೨೦:
`ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಬಿ.ಸುರೇಶ ಅವರು ಬರೆದಿರುವ ದೃಶ್ಯಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ [[ಬೆಳ್ಳಿಅಂಕ]] ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಬುಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ [[ಗುಲ್ಬರ್ಗ]], [[ಮೈಸೂರು]], [[ಮಂಡ್ಯ]], [[ಶಿವಮೊಗ್ಗ]] ಮುಂತಾದ ಸ್ಥಳಗಳಲ್ಲಿಯೂ ಚಲನಚಿತ್ರ ಕ್ಲಬ್ಬುಗಳು ಆರಂಭವಾಗಿವೆ.
 
ಈಚೆಗೆ ಬಿ. ಸುರೇಶ್ ಅವರು ಬರೆದ ‘ಗಿರಿಜಾಕಲ್ಯಾಣ’ ನಾಟಕ ರೈತರ ಆತ್ಮಹತ್ಯೆ ಕುರಿತಾಗಿದ್ದು ಅದನ್ನು ಕನ್ನಡದಲ್ಲಿ [[ಬಿ.ಜಯಶ್ರೀ]] ಅವರು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. [[ಹಿಂದಿ|ಹಿಂದಿಯಲ್ಲಿ]] ಇಪ್ಟಾ, [[ಮುಂಬಯಿ|ಮುಂಬಯಿಯಲ್ಲಿ]] ಎಂಎಸ್ ಸತ್ಯು ಅವರು '''ಗಿರಿಜಾ ಕಿ ಸಪ್ನೆ '''ಎಂಬ ಹೆಸರಿನಲ್ಲಿ ರಂಗಭೂಮಿಯ ಮೇಲೆ ತಂದಿದ್ದಾರೆ. [[ಮರಾಠಿ| ಮರಾಠಿಯಲ್ಲಿ]] [[ ಅಮೋಲ್ ಪಾಲೇಕರ್]] ಅವರ ತಂಡದವರು ಗಿರಿಜಾಕಲ್ಯಾಣ್ ಎಂದುಎಂಬ ಹೆಸರಿನಲ್ಲಿ ಅನುವಾದಿಸಿಕೊಂಡು ಅಭಿನಯಿಸಲಿದ್ದಾರೆ.
 
==ನಿರ್ಮಾಪಕರಾಗಿ==
Line ೨೪ ⟶ ೨೬:
ಇದೀಗ ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮ ಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕು ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಳ್ಳುತ್ತಿದೆ. [[೨೦೦೮]] ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ.
 
 
ಈಗಲೂ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬಿ.ಸುರೇಶ ಸಕ್ರಿಯರಾಗಿರುವ ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ|ವಿಜಯಮ್ಮನವರ]] ಪುತ್ರರು.
 
 
"https://kn.wikipedia.org/wiki/ಬಿ.ಸುರೇಶ" ಇಂದ ಪಡೆಯಲ್ಪಟ್ಟಿದೆ