ಬಿ.ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬಿ. ಸುರೇಶ'''[[೧೯೬೨]]ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. [[ದಾವಣಗೆರೆ]] ಇವರ ಹುಟ್ಟೂರು. [[೧೯೭೩]]ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ [[ಷಾಪುರದ ಸೀನಿಂಗಿ-ಸತ್ಯ]] ನಾಟಕವು [[೧೯೯೭]]ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
'''ಬಿ. ಸುರೇಶ''' ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. [[ದೂರದರ್ಶನ (ಬೆಂಗಳೂರು)|ಬೆಂಗಳೂರು ದೂರದರ್ಶನದಲ್ಲಿ ]] [[ಕನ್ನಡ-ಕನ್ನಡಿ]], [[ಸಾಧನೆ]] ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಪ್ರಸ್ತುತ[[ಉದಯ ಟಿವಿ| ಉದಯ ವಾಹಿನಿಯಲ್ಲಿ ]]ಇವರ [[ನಾಕುತಂತಿ (ಕಿರುತೆರೆ ಧಾರಾವಾಹಿ)|ನಾಕುತಂತಿ]], [[ತಕಧಿಮಿತಾ]] ಎಂಬ ಧಾರಾವಾಹಿಗಳು ಪ್ರಸಾರವಾಗುತ್ತಿವೆ.
[[Image:Bsuresh.jpg|frame|ಬಿ.ಸುರೇಶ]]
 
== ನಿರ್ದೇಶಕರಾಗಿ ಬಿ. ಸುರೇಶ್ ==
 
[[೧೯೭೬]]ರಲ್ಲಿ [[ಗಿರೀಶ್ ಕಾಸರವಳ್ಳಿ]] ನಿರ್ದೇಶಿಸಿದ [[ಘಟಶ್ರಾದ್ಧ]] ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಬದುಕು ಪ್ರಾರಂಭವಾಯಿತು. [[೧೯೮೮]]ರಲ್ಲಿ [[ಮಿಥಿಲೆಯ ಸೀತೆಯರು]] [ನಿರ್ದೇಶನ: [[ಕೆ.ಎಸ್.ಎಲ್. ಸ್ವಾಮಿ (ರವೀ)]] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ.ಸುರೇಶ ಅಲ್ಲಿಂದಾಚೆಗೆ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ.
 
[[೨೦೦೨ರ]]ಲ್ಲಿ `ಠಪೋರಿ’ ಮತ್ತು `ಅರ್ಥ’ ಎಂಬ ಎರಡು ಚಿತ್ರಗಳನ್ನು ಸ್ವತಃ ನಿರ್ದೇಶಿಸಿದ್ದಾರೆ. `ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ.
 
==[[ಕಿರುತೆರೆ ನಿರ್ದೇಶಕರಾಗಿ ಸುರೇಶ್ ಸಾಧನೆ==
 
೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. [[೨೦೦೧]]ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಪಡೆದುಕೊಂಡಿತ್ತು.
 
[[೨೦೦೪]]ರಿಂದ ಇವರು ಬರೆದು ನಿರ್ದೇಶಿಸುತ್ತಾ ಇರುವ `ನಾಕುತಂತಿ’ ಧಾರಾವಾಹಿ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಈಗಾಗಲೇ ೧೨೫೦ ಕಂತುಗಳನ್ನು ದಾಟಿ ಮುನ್ನಡೆದಿದೆ. ಇದೇ ಉದಯವಾಹಿನಿಗಾಗಿ ಬಿ.ಸುರೇಶ ಅವರ ಸಾರಥ್ಯದಲ್ಲಿ ತಯಾರಾಗುತ್ತಿರುವ ಮತ್ತೊಂದು ಧಾರಾವಾಹಿ `ತಕಧಿಮಿತಾ’. ಇದು ಸಹ ಈಗ ೧೦೦೦ ಕಂತುಗಳನ್ನು ಸಮೀಪಿಸುತ್ತಿದೆ.
 
==ಲೇಖಕ ಮತ್ತು ಪ್ರಕಾಶಕರಾಗಿ==
 
`ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಬಿ.ಸುರೇಶ ಅವರು ಬರೆದಿರುವ ದೃಶ್ಯಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ [[ಬೆಳ್ಳಿಅಂಕ]] ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಬುಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ [[ಗುಲ್ಬರ್ಗ]], [[ಮೈಸೂರು]], [[ಮಂಡ್ಯ]], [[ಶಿವಮೊಗ್ಗ]] ಮುಂತಾದ ಸ್ಥಳಗಳಲ್ಲಿಯೂ ಚಲನಚಿತ್ರ ಕ್ಲಬ್ಬುಗಳು ಆರಂಭವಾಗಿವೆ.
 
==ನಿರ್ಮಾಪಕರಾಗಿ==
 
ಇದೀಗ ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮ ಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕು ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಳ್ಳುತ್ತಿದೆ. [[೨೦೦೮]] ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ.
 
ಈಗಲೂ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬಿ.ಸುರೇಶ ಆವರುಸಕ್ರಿಯರಾಗಿರುವ ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ|ವಿಜಯಮ್ಮನವರ]]ನವರ ಪುತ್ರರು.
 
 
==ಬಿ.ಸುರೇಶ ಅವರ ಚಿತ್ರಕಥೆ/ ಸಂಭಾಷಣೆಯಿರುವ ಚಿತ್ರಗಳು==
 
[[ಮಿಥಿಲೆಯ ಸೀತೆಯರು]] [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)]
[[ಜಂಬೂಸವಾರಿ [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)
ಮನೆ [ನಿ: ಗಿರೀಶ್ ಕಾಸರವಳ್ಳಿ]
ಹರಕೆಯಕುರಿ [ನಿ: ಕೆ.ಎಸ್.ಎಲ್.ಸ್ವಾಮಿ(ರವೀ)]
ಹಸಿರು ಕೈ ಬೀಸಿ ಕರೆದಾವೋ [ನಿ: ಚಂದ್ರಶೇಖರ ಕಂಬಾರ]
ಸ್ವಾಮಿ ವಿವೇಕಾನಂದ [ನಿ: ಜಿ.ವಿ.ಅಯ್ಯರ್]
ರಸಿಕ [ನಿ: ವಿ.ರವಿಚಂದ್ರನ್]
ಜಾಣ [ನಿ: ವಿ.ರವಿಚಂದ್ರನ್]
ಪುಟ್ನಂಜ [ನಿ: ವಿ.ರವಿಚಂದ್ರನ್]
ಸಿಪಾಯಿ [ನಿ: ವಿ.ರವಿಚಂದ್ರನ್]
ಕಲಾವಿದ [ನಿ: ವಿ.ರವಿಚಂದ್ರನ್]
ಮೊಮ್ಮಗ [ನಿ: ವಿ.ರವಿಚಂದ್ರನ್]
ಚೆಲುವ [ನಿ: ವಿ.ರವಿಚಂದ್ರನ್]
ಕರುಳಿನ ಕುಡಿ [ನಿ: ಸಾರಥಿ]
ತಾಯವ್ವ [ನಿ: ಉಮಾಕಾಂತ್]
ಠಪೋರಿ [ನಿ: ಬಿ.ಸುರೇಶ]
ಅರ್ಥ [ನಿ: ಬಿ.ಸುರೇಶ]
ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು
 
ಕಂದನಕಾವ್ಯ
ಹೊಸಹೆಜ್ಜೆ
ಕನಸುಗಿತ್ತಿ
ಅನ್ನಪೂರ್ಣ
ಮುಸ್ಸಂಜೆ
ಚಿಗುರು
ಸಾಧನೆ
ಕನ್ನಡ-ಕನ್ನಡಿ
ಅಕ್ಷರದೀಪ
ಹತ್ತುಹೆಜ್ಜೆಗಳು
ಮಗು ನೀ ನಗು
ನಾಕುತಂತಿ
ತಕಧಿಮಿತಾ
ರಚಿಸಿರುವ ನಾಟಕಗಳು
 
ಕೋತಿಕತೆ
ವರದಿಯಾಗದ ಕಥೆ
ಅಪ್ಪಾಲೆತಿಪ್ಪಾಲೆ
ಅಹಲ್ಯೆ ನನ್ನ ತಾಯಿ
ಅಯ್ಯೋ ಅಪ್ಪಾ!
ಕಾಡುಮಲ್ಲಿಗೆ
ಕುಣಿಯೋಣು ಬಾರಾ
ಯವನ ಯಾಮಿನಿ ಕಥಾ ಚರಿತ್ರವು
ಅರ್ಥ
ಹಜಾಮ ಹೆಂಡತಿಯನ್ನು ಕೊಂದದ್ದು
ಕತೆ ಕಟ್ಟೋ ಆಟ
ಷಾಪುರದ ಸೀನಿಂಗಿ ಸತ್ಯ
ರೆಕ್ಕೆ ಕಟ್ಟುವಿರಾ?
ಕುರುಡಜ್ಜನ ಪೂರ್ಣಚಂದ್ರ
ನಿರ್ದೇಶಿಸಿದ ಸಿನಿಮಾಗಳು
 
ಠಪೋರಿ
ಅರ್ಥ
ನಿರ್ಮಿಸಿದ ಸಿನಿಮಾ
 
ಗುಬ್ಬಚ್ಚಿಗಳು (ನಿ : ಅಭಯಸಿಂಹ)
 
 
 
 
ಬಿ.ಸುರೇಶ ಆವರು ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ [[ವಿಜಯಮ್ಮ]]ನವರ ಪುತ್ರರು.
 
[[Image:Bsuresh.jpg|frame|ಬಿ.ಸುರೇಶ]]
 
 
ಬಿ. ಸುರೇಶ್ ನಿರ್ದೇಶಿಸಿರುವ [[ಅರ್ಥ (ಚಲನಚಿತ್ರ)|ಅರ್ಥ]] ಚಿತ್ರಕ್ಕೆ [[೨೦೦೨]] - [[೨೦೦೩]] ಸಾಲಿನ "ಅತ್ಯುತ್ತಮ ಚಿತ್ರ" ರಾಜ್ಯ ಪ್ರಶಸ್ತಿ ಲಭಿಸಿದೆ.
 
[[Category:ಕಿರುತೆರೆ ನಿರ್ದೇಶಕರು]]
"https://kn.wikipedia.org/wiki/ಬಿ.ಸುರೇಶ" ಇಂದ ಪಡೆಯಲ್ಪಟ್ಟಿದೆ