ಇಸ್ರೇಲಿನ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎-: ಉಲ್ಲೇಖ +++
ಚುNo edit summary
೩ ನೇ ಸಾಲು:
 
==ಪ್ರಾಕ್ತನ ಚರಿತ್ರೆ==
ಹಳೆಯ ಶಿಲಾಯುಗಕ್ಕೆ ಸೇರಿದ ಅಬೆವಿಲಿಯನ್ ಮತ್ತು [[ಅಷೂಲಿಯನ್]] ಹಂತದ ಕೈಗೊಡಲಿಗಳು ಇಲ್ಲಿ ದೊರಕಿರುವ ಅವಶೇಷಗಳಲ್ಲಿ ಅತ್ಯಂತ ಪ್ರಾಚೀನ. ಇವು ಸುಮಾರು 2,50,000 ವರ್ಷಗಳಿಂದಲೂ ಮೊದಲಿನವೆಂಬುದು ಅಭಿಪ್ರಾಯ. ಚಕ್ಕೆ ಕಲ್ಲಿನಾಯುಧಗಳ ತಯೇಷಿಯನ್ ಮತ್ತು ಮುಸ್ಟೀರಿಯನ್ ಸಂಸ್ಕøತಿಗಳ ಅವಶೇಷಗಳನ್ನು ಮೌಂಟ್ ಕಾರ್ಮೆಲ್ ಪರ್ವತದ ಗುಹೆಗಳಲ್ಲಿ ಡರೊಥಿ ಗ್ಯಾರಡ್ ಎಂಬ ವಿದೂಷಿ ಕಂಡುಹಿಡಿದಳು. ಪಶ್ಚಾದುಷೋ ಮಾದರಿಯ (ನಿಯಾಂಡರ್ಥ ಲಾಯಿಡ್) ಮತ್ತು ಆಧುನಿಕ ಮಾನವ ವರ್ಗದ ಮಿಶ್ರಸಂತತಿಯ ಜನ ಈ ಸಂಸ್ಕøತಿಯ ಕರ್ತೃಗಳಾಗಿದ್ದರೆಂಬುದು ಅವರ ಆಸ್ತಿಗಳ ಅವಶೇಷಗಳಿಂದ ಗೊತ್ತಾಗಿದೆ. ಹಳೆಯ ಶಿಲಾಯುಗದ ಅಂತ್ಯ ಶಿಲಾಯುಗಕ್ಕೆ ಸುಮಾರು 50,000 ವರ್ಷಗಳ ಆರಿಗ್ನೇಷಿಯನ್ ಸಂಸ್ಕøತಿಯ ಅವಶೇಷಗಳೂ ಅನಂತರ ಸುಮಾರು 20,000 ವರ್ಷಗಳ ಆಟ್ಲಿಟಿಯನ್ ಸಂಸ್ಕøತಿಯ ಅವಶೇಷಗಳೂ ಇಲ್ಲಿ ದೊರಕಿವೆ.ಮಧ್ಯ ಶಿಲಾಯುಗದ ಅವಶೇಷಗಳು ಮೊದಲು ವಾಡಿಎಲ್ ನಟೂಫ್ ಎಂಬಲ್ಲಿ ದೊರಕಿದುದರಿಂದ ಆ ಸಂಸ್ಕøತಿಗೆ ನಟೂಫಿಯನ್ ಎಂದು ಹೆಸರಾಯಿತು. ಇಸ್ರೇಲಿನ ಅನೇಕ ಪ್ರದೇಶಗಳಲ್ಲಿ ದೊರಕಿರುವ, ಸುಮಾರು ಕ್ರಿ. ಪೂ. 10,000-6,000 ಅವಧಿಗೆ ಸೇರಿರುವ ಈ ಸಂಸ್ಕøತಿಯ ಜನ ಆಹಾರ ಸಂಗ್ರಹಣ ದೆಸೆಯಿಂದ ಮುನ್ನಡೆದು ಆಹಾರೋತ್ಪಾದನೆಯನ್ನು ಮೊತ್ತಮೊದಲಿಗೆ ಪ್ರಾರಂಭಿಸಿದರು. ವ್ಯವಸಾಯ ಮಾಡಿ ಬೆಳೆಸಿದ ಪೈರುಗಳನ್ನು ಚಕಮಕಿಕಲ್ಲಿನ ಹಲ್ಲುಗಳಿದ್ದ ಕುಡುಗೋಲುಗಳಿಂದ ಕುಯ್ಯುತ್ತಿದ್ದುದೂ ದುಷ್ಟಪ್ರಾಣಿಗಳನ್ನು ಪಳಗಿಸಿ ಸಾಕುತ್ತಿದ್ದುದೂ ಈ ಜನರ ವಿಶಿಷ್ಟ ಸಾಧನೆಗಳು.<ref>https://santoshthammaiah.wordpress.com/2014/07/18/%E0%B2%87%E0%B2%B8%E0%B3%8D%E0%B2%B2%E0%B2%BE%E0%B2%AE%E0%B3%80%E0%B2%95%E0%B2%B0%E0%B2%A3%E0%B2%95%E0%B3%8D%E0%B2%95%E0%B3%86-%E0%B2%87%E0%B2%B8%E0%B3%8D%E0%B2%B0%E0%B3%87%E0%B2%B2%E0%B3%80%E0%B2%95/</ref>
 
==ನೂತನ ಶಿಲಾಯುಗ==
ನೂತನ ಶಿಲಾಯುಗದ ಅತ್ಯಂತ ಪ್ರಾಚೀನವಾದ ಮತ್ತು ವಿಶದವಾಗಿ ಸಂಶೋಧಿಸಲ್ಪಟ್ಟಿರುವ ನೆಲೆಗಳಲ್ಲಿ ಮುಖ್ಯವಾದ ಜೆರಿಕೊ ಈ ದೇಶದಲ್ಲಿವೆ. ಮೊತ್ತ ಮೊದಲಿಗೆ ಅಂಚುಗಳನ್ನು ನಯವಾಗಿಸಿದ ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದ ಈ ಜನ ಕ್ರಿ. ಪೂ 6-5ನೆಯ ಸಹಸ್ರಮಾನಗಳಲ್ಲಿ ಬೃಹತ್ತಾದ ವರ್ತುಳಾಕಾರದ ಶಿಲಾ ಸಮಾಧಿಗಳಲ್ಲಿ ಸತ್ತವರನ್ನು ಹಿಡಿಯುತ್ತಿದ್ದರು. ಕ್ರಿ.ಪೂ. 5000ದ ಸುಮಾರಿನಲ್ಲಿ ಮಡಕೆಗಳ ಉಪಯೋಗವೂ ಕಲ್ಲಿನ ಗೋಡೆ ಕಂದಕಗಳಿಂದ ರಕ್ಷಿತವಾದ ಗ್ರಾಮೀಣ ಜೀವನವೂ ರೂಢಿಗೆ ಬಂದುವು. ಆಹಾರೋತ್ಪಾದನೆ, ಕೈಗಾರಿಕೆ, ವಾಣಿಜ್ಯ ಇವರ ಮುಖ್ಯ ಸಾಧನೆಗಳು.<ref>http://dbs.org/libraries/kannada/Bible/StudyBible/content/texts/kan_2010/K215.html</ref>
 
==ತಾಮ್ರ ಶಿಲಾಯುಗ==
ತಾಮ್ರ ಶಿಲಾಯುಗದ ಸಂಸ್ಕøತಿಯ ಅವಶೇಷಗಳು ಫಸ್ಸೂಲ್ ಎಂಬಲ್ಲಿ ಮೊದಲಿಗೆ ದೊರಕಿದರು ಅನಂತÀರ ಇತರ ಅನೇಕ ನೆಲೆಗಳಲ್ಲೂ ದೊರಕಿವೆ. ವಿವಿಧ ಹಂತಗಳಲ್ಲಿ ಬೆಳೆದು ಬಂದ ಈ ಸಂಸ್ಕøತಿ ಈಜಿಪ್ಟಿನಲ್ಲೂ ಕಂಡುಬಂದಿದೆ. ಇದು ಕ್ರಿ. ಪೂ. 3100ರ ಹೊತ್ತಿಗೆ ಕೊನೆಗೊಂಡಿತೆಂದು ಹೇಳಬಹುದು. ತಾಮ್ರದ ಉಪಯೋಗ ರೂಢಿಗೆ ಬಂದದ್ದರ ಗುರುತಾಗಿ ಈ ಲೋಹದ ಎರಡು ಕೊಡಲಿಗಳೂ ಮತ್ತೆ ಕೆಲವು ಅವಶೇಷಗಳೂ ದೊರಕಿವೆ. ಮಡಕೆಗಳ ಮೇಲೆ ವರ್ಣಚಿತ್ರ ಬಿಡಿಸುವ ರೂಢಿ ಈ ಕಾಲದಲ್ಲೇ ಆರಂಭವಾಯಿತು.
Line ೨೭ ⟶ ೨೫:
==ಎರಡನೆಯ ಮಹಾಯುದ್ಧ==
ಆದರೆ ಈ ಮಧ್ಯೆ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಅರಬ್-ಯೆಹೂದ್ಯರ ಪ್ರಶ್ನೆ ಮುಂದಕ್ಕೆ ಹೋಯಿತು. 1940ರ ಮುಂದಿನ ವರ್ಷಗಳಲ್ಲಿ ಹಿಟ್ಲರನ ಉನ್ಮಾದಕ್ಕೆ ಅರವತ್ತು ಲಕ್ಷ ಯೆಹೂದ್ಯರು ಬಲಿಯಾದರು. ಆಧುನಿಕ ಮಾನವನ ಸಂಸ್ಕøತಿಗೆ ಬೆಲೆಯೇನಾದರೂ ಇದೆಯೆ? ಎಂದು ವಿಶ್ವಾದ್ಯಂತ ಜನ ಶಂಕಿಸುವಂತಾಯಿತು. ಯೆಹೂದ್ಯರನ್ನು ನಾಶಗೊಳಿಸಿ ಅವರ ಪ್ರಶ್ನೆಯನ್ನು ಬಗೆಹರಿಸುವುದು ಹಿಟ್ಲರನ ರೀತಿ.(ನೋಡಿ- ಹಿಟ್ಲರ್,-ಅಡಾಲ್ಫ್)ಪ್ಯಾಲಿಸ್ಟೈನಿನಲ್ಲಿ ತಮ್ಮ ರಾಷ್ಟ್ರೀಯ ನೆಲೆಯನ್ನೂರಿಸಬೇಕೆಂದು ಬಹುಕಾಲದಿಂದ ಆಸೆ ಹೊಂದಿದ್ದು, ಯುರೋಪಿನಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಬಂದು ತುಂಬಿದ್ದ ಯೆಹೂದ್ಯರಿಗೂ ಅರಬ್ಬರಿಗೂ 1947ರಲ್ಲಿ ಯುದ್ಧವಾಯಿತು. ವಿಶ್ವಸಂಸ್ಥೆಯ ನಿರ್ಣಯಕ್ಕಾನುಸಾರವಾಗಿ ಅಲ್ಲಿ 1948ರ ಮೇ 14ರಂದು ಬ್ರಿಟಿಷರ ರಕ್ಷಣೆ ಕೊನೆಗೊಂಡು, ಮೇ 15ರಂದು ಪ್ಯಾಲಿಸ್ಟೈನಿನ ಉದಯವಾಯಿತು. ಅದು ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1949ರ ಜನವರಿಯ ವರೆಗೂ ಯುದ್ಧ ಮುಂದುವರೆಯಿತು. ಅರಬ್ ರಾಷ್ಟ್ರಗಳಿಗೂ ಇಸ್ರೇಲಿಗೂ ನಡುವೆ ಶಾಂತಿ ಕೌಲಿನ ಸಹಿಯಾಗಿಲ್ಲ; ರಾಜತಾಂತ್ರಿಕ ಸಂಬಂಧವಿಲ್ಲ. ವಿಶ್ವಸಂಸ್ಥೆ ನೇಮಿಸಿರುವ ಯುದ್ಧ ವಿರಾಮ ಮೇಲ್ವಿಚಾರಣಾ ವ್ಯವಸ್ಥೆ ಮುಂದುವರಿಯುತ್ತಿದೆ. 1967ರಲ್ಲಿ ಇಸ್ರೇಲಿಗೂ ನೆರೆಯ ಅರಬ್ ರಾಜ್ಯಗಳಿಗೂ ನಡುವೆ ನಡೆದ ಆರು ದಿನಗಳ ಯುದ್ಧದ ಫಲವಾಗಿ ಇಡೀ ಜೆರೂಸಲೆಂ, ಜಾರ್ಡನೆ ನದಿಯ ಪಶ್ಚಿಮ ದಂಡೆಯ ಪ್ರದೇಶ. ಸಿನಾಯ್ ಪರ್ಯಾಯದ್ವೀಪ ಮತ್ತು ಗೋಲನ್ ದಿಬ್ಬಗಳು ಇಸ್ರೇಲಿನ ವಶವಾದುವು. ಜೆರೂಸಲೆಂ ಅನ್ನು ಇಸ್ರೇಲ್ ರಾಜ್ಯದಲ್ಲಿ ತಕ್ಷಣವೇ ವಿಲೀನಗೊಳಿಸಲಾಯಿತು. ಉಳಿದ ಪ್ರದೇಶಗಳು ಇನ್ನೂ ಆಕ್ರಮಿತ ಪ್ರದೇಶಗಳಾಗಿ ಮುಂದುವರಿಯುತ್ತಿವೆ.(ಆರ್.ಟಿ.ಎಸ್.; ಕೆ.ಜಿ.)<ref> [https://kn.wikisource.org/s/4e7 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಸ್ರೇಲಿನ ಇತಿಹಾಸ]</ref><ref>[https://www.history.com/topics/middle-east/history-of-israel Israel;HISTORY.COM EDITORS; MAY 14, 2019ORIGINAL-JUN 30, 2017]</ref>
==ನೋಡಿ==
 
*[[ಇಸ್ರೇಲ್]]
==ಹೆಚ್ಚಿನ ಓದಿಗೆ==
[https://santoshthammaiah.wordpress.com/2014/07/18/%E0%B2%87%E0%B2%B8%E0%B3%8D%E0%B2%B2%E0%B2%BE%E0%B2%AE%E0%B3%80%E0%B2%95%E0%B2%B0%E0%B2%A3%E0%B2%95%E0%B3%8D%E0%B2%95%E0%B3%86-%E0%B2%87%E0%B2%B8%E0%B3%8D%E0%B2%B0%E0%B3%87%E0%B2%B2%E0%B3%80%E0%B2%95/ ಇಸ್ರೇಲಿ ಹೋರಾಟ -ಬ್ಲಾಗ್]
==ಉಲ್ಲೇಖಗಳು==
{{ಉಲ್ಲೇಖ}}
{{reflist}}
"https://kn.wikipedia.org/wiki/ಇಸ್ರೇಲಿನ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ