ಧ್ಯಾನ್ ಚಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Commons category corrected
೨೨ ನೇ ಸಾಲು:
ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ೧೪ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ ನನ್ನು ಸುಬೇದಾರ್-ಮೇಜರ್ ಭೋಲೆ ತಿವಾರಿಯವರು ಗಮನಿಸಿದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಇವರು ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. ಹೀಗೆ ಅವರು ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ ಮುಂದೆ ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ರೂಪುಗೊಂಡರು.
 
==ಅಂತರರಾಷ್ಟ್ರೀಯ ಮಟ್ಟದಲ್ಲಿ.==
೧೯೨೮ರಲ್ಲಿ ಭಾರತೀಯ ಹಾಕೀ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, [[ನೆದರ್ ಲ್ಯಾಂಡ್]] ನ [[ಆಮ್ ಸ್ಟೆರ್ ಡ್ಯಾಮ್]] ನಲ್ಲಿ ಆಯೋಜಿಸಲಾದ ೧೯೨೮ರ ಬೇಸಗೆಯ [[ಒಲಂಪಿಕ್]] ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ೩-೦ ಗೋಲ್ ಗಳಲ್ಲಿ ೨ ನ್ನು ಗಳಿಸುವ ಮೊಲಕ ಭಾರತೀಯ ತಂಡಕ್ಕೆ ನೆದರ್ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ ಚಂದರ ಆಟಕ್ಕೇ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ [[ಸ್ವರ್ಣ]] ಪದಕವು ದೊರೆತಿತು. ಧ್ಯಾನ್ ಹಂದ್ ೧೯೩೨ ಹಾಗು ೧೯೩೬ ರಲ್ಲಿ ನೆಡದ ಒಲಂಪಿಕ್ಸ್ ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದರು. ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ ೩೩.
 
"https://kn.wikipedia.org/wiki/ಧ್ಯಾನ್_ಚಂದ್" ಇಂದ ಪಡೆಯಲ್ಪಟ್ಟಿದೆ