"ಆಂಡೆಸ್ ಪರ್ವತಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(/ ಮಹಾ ಪರ್ವತಶ್ರೇಣಿ /)
 
ಚು
'''ಆಂಡೆಸ್ ಪರ್ವತಗಳು''' ಭೂಮಿಯ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ.[[ಭೂಮಿ]]ಯ ಅತಿ ಉದ್ದನೆಯ ಪರ್ವತಶ್ರೇಣಿಗಳು ಸಾಗರದಾಳದಲ್ಲಿವೆ. ಆಂಡೆಸ್ ಪರ್ವತಗಳು [[ದಕ್ಷಿಣ ಅಮೇರಿಕಾ ಖಂಡ]]ದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ. ಈ ಶ್ರೇಣಿಯ ಅಗಲ ೨೦೦ ರಿಂದ ೭೦೦ ಕಿ.ಮೀ. ಮತ್ತು ಸರಾಸರಿ ಎತ್ತರ ೪೦೦೦ ಮೀ. (೧೩೦೦೦ ಅಡಿ).
 
ಆಂಡೆಸ್ ಪರ್ವತಶ್ರೇಣಿಯು ಮುಖ್ಯವಾಗಿ ಎರಡೂ ಮಹಾ ಪರ್ವತಶ್ರೇಣಿಗಳನ್ನೊಳಗೊಂಡಿದೆ. ಕಾರ್ಡಿಲ್ಲೇರಾ ಓರಿಯೆಂಟಲ್ ಮತ್ತು ಕಾರ್ಡಿಲ್ಲೇರಾ ಆಸ್ಸಿದೆಂಟಲ್ ಎಂದು ಈ ಎರಡು ಶ್ರೇಣಿಗಳ ಹೆಸರು. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾದ ಏಳು ರಾಷ್ಟ್ರಗಳನ್ನು ಹಾದು ಹೋಗಿವೆ. [[ಅರ್ಜೆಂಟೀನಾ]], [[ಚಿಲಿ]], [[ಪೆರು]], [[ಬೊಲಿವಿಯ]], [[ಕೊಲೊಂಬಿಯ]], [[ಇಕ್ವೆಡಾರ್ಇಕ್ವೆಡೋರ್]] ಮತ್ತು [[ಟ್ರಿನಿಡಾಡ್ ಮತ್ತು ಟೊಬೆಗೊ|ಟ್ರಿನಿಡಾಡ್]] ಈ ಏಳು ದೇಶಗಳು.
 
ಆಂಡೆಸ್ ಪರ್ವತಗಳು [[ಏಷ್ಯಾ]]ದ ಹೊರಗೆ ಜಗತ್ತಿನ ಅತಿ ಎತ್ತರದ ಪರ್ವತಗಳಾಗಿವೆ. ಈ ಶ್ರೇಣಿಯ ಅತ್ಯುನ್ನತ ಶಿಖರವಾದ [[ಅಕೊನ್‌ಕಾಗುವಾ]] ೬೯೬೨ ಮೀ. ( ೨೨,೮೪೧ ಅಡಿ) ಎತ್ತರವಾಗಿದೆ. ಎಕ್ವೆಡಾರ್‌ನ ಚಿಂಬೊರಾಜೋ [[ಜ್ವಾಲಾಮುಖಿ]]ಯ ಶಿಖರವು ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ನೆಲದ ಮೇಲಿನ ಸ್ಥಾನವಾಗಿದೆ.
 
==ವಾತಾವರಣ==
ಆಂಡೆಸ್ ಪರ್ವತಗಳಲ್ಲಿನ ವಾತಾವರಣವು ಸ್ಥಾನ, ಎತ್ತರ ಮತ್ತು ಸಾಗರದಿಂದ ಇರುವ ದೂರದ ಮೇಲೆ ಅವಲಂಬಿತವಾಗಿವೆ. ದಕ್ಷಿಣ ಆಂಡೆಸ್ ಪ್ರಾಂತ್ಯದಲ್ಲಿ ತಂಪಾದ ಹವಾಮಾನವಿದ್ದು [[ಮಳೆ]] ಸಾಕಷ್ಟಿದ್ದರೆ ಮಧ್ಯ ಪ್ರಾಂತ್ಯವು ಸಾಮಾನ್ಯವಾಗಿ ಒಣ ಪ್ರದೇಶವಾಗಿದೆ. ಉತ್ತರ ಭಾಗದಲ್ಲಿ ಬಿಸಿ ಹೆಚ್ಚಾಗಿದ್ದು ಮಳೆ ಸಹ ಬಲು ಅಧಿಕವಾಗಿರುತ್ತದೆ. ಈ ಶ್ರೇಣಿಯಲ್ಲಿ ಅತಿ ಕಡಿಮೆ ಅಂತರದಲ್ಲಿಯೇ ಪರಿಸರ ಮತ್ತು ಹವಾಮಾನದಲ್ಲಿ ಭಾರೀ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆ ಹಿಮಾವೃತ ಕೊಟೊಪಾಕ್ಸಿ ಶಿಖರದ ಕೆಲ ಮೈಲಿಗಳ ಅಂತರದಲ್ಲಿಯೇ [[ಮಳೆಕಾಡು]]ಗಳಿವೆ. ಆಂಡೆಸ್ ಪರ್ವತಗಳ ದಕ್ಷಿಣ ಭಾಗದಲ್ಲಿ ದೊಡ್ಡ ಸಂಖ್ಯೆಯ [[ಹಿಮನದಿ]]ಗಳಿವೆ. ಜೊತೆಗೆ ಈ ಪರ್ವತಪ್ರಾಂತ್ಯದಲ್ಲಿ [[ಆಟಕಾಮಾಅಟಕಾಮಾ ಮರುಭೂಮಿ]] ಸಹ ಹುದುಗಿದೆ.
 
==ಸಸ್ಯ ವೈವಿಧ್ಯ==
೧,೨೯೩

edits

"https://kn.wikipedia.org/wiki/ವಿಶೇಷ:MobileDiff/95105" ಇಂದ ಪಡೆಯಲ್ಪಟ್ಟಿದೆ