ವಿಕ್ಟೋರಿಯಾ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: en:Victoria Falls
ಚುNo edit summary
೧೨ ನೇ ಸಾಲು:
}}
 
'''ವಿಕ್ಟೋರಿಯಾ ಜಲಪಾತ''' ( ಸ್ಥಳೀಯ ಭಾಷೆಯಲ್ಲಿ '''''ಮೋಸಿ-ಓ-ಟುನ್ಯಾ''''' ) [[ಆಫ್ರಿಕಾ]]ದ ದಕ್ಷಿಣ ಭಾಗದಲ್ಲಿ [[ಜಿಂಬಾಬ್ವೆ]] ಮತ್ತು [[ಜಾಂಬಿಯ]] ದೇಶಗಳ ಗಡಿಯಲ್ಲಿ [[ಜಾಂಬೆಜಿ]] ನದಿಯ ಒಂದು ಮಹಾ [[ಜಲಪಾತ]]. ವಿಕ್ಟೋರಿಯಾ ಜಲಪಾತ ಜಗತ್ತಿನ ಅತಿ ಭಾರೀ ಜಲಪಾತವೆನಿಸಿದೆ. ಅಲ್ಲದೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ವಿಶ್ವದ ಬೇರಾವ ಜಲಪಾತ ಪ್ರದೇಶಗಳಲ್ಲಿ ಕಾಣಬರದ ವನ್ಯಜೀವಿ ವೈವಿಧ್ಯವಿದೆ. ವಿಕ್ಟೋರಿಯಾ ಜಲಪಾತ ಸ್ಥಳೀಯವಾಗಿ '''''ಗರ್ಜಿಸುವ ಹೊಗೆ''''' ಎಂದು ಹೆಸರಾಗಿದೆ. ತನ್ನ ವಿಶಾಲ ಗೋಡೆಯಂತೆ ಧುಮುಕುವ ಜಲಧಾರೆಯ ಗಣನೀಯಕೆಲ ಭಾಗವು ನೆಲವನ್ನು ತಲುಪುವಷ್ಟರೊಳಗೆ ತುಂತುರು ತುಂತುರಾಗಿ ತಡಸಲಿನ ಅಡಿಭಾಗದಿಂದ ನೀರಾವಿಯ ಮೋಡಗಳಾಗಿ ಮೇಲೇಳುವುದರಿಂದ ಈ ಹೆಸರು ವಿಕ್ಟೋರಿಯಾ ಜಲಪಾತಕ್ಕೆ ಬಂದಿದೆ. [[ಸ್ಕಾಟ್ಲೆಂಡ್‌]]ನ ಅನ್ವೇಷಕ ಡೇವಿಡ್ ಲಿವಿಂಗ್‌ಸ್ಟನ್ ಈ ಜಲಪಾತಕ್ಕೆ ವಿಕ್ಟೋರಿಯಾ ಜಲಪಾತ ಎಂಬ ಹೆಸರನ್ನಿಟ್ಟನು. ಆದರೆ ಜಿಂಬಾಬ್ವೆ ದೇಶದಲ್ಲಿ ಇದು ಡೇವಿಡ್ ಲಿವಿಂಗ್‌ಸ್ಟನ್ ಜಲಪಾತವೆಂಬ ಹೆಸರಿನಿಂದ ಕರೆಯಲ್ಪಟ್ಟರೆ ಜಾಂಬಿಯಾ ದೇಶದಲ್ಲಿ ಇದರ ಅಧಿಕೃತ ಹೆಸರು ಮೋಸಿ-ಓ-ಟುನ್ಯಾ. [[ವಿಶ್ವ ಪರಂಪರೆಯ ತಾಣಗಳ ಪಟ್ಟಿ]]ಯಲ್ಲಿ ಈ ಎರಡೂ ಹೆಸರುಗಳನ್ನು ಮಾನ್ಯಮಾಡಲಾಗಿದೆ. [[ವೆನೆಜುವೆಲಾ]]ದ [[ಏಂಜೆಲ್ ಜಲಪಾತ]]ದಷ್ಟು ಎತ್ತರ ಮತ್ತು [[ಖೋನ್ ಜಲಪಾತ]]ದಷ್ಟು ಅಗಲವನ್ನು ಹೊಂದದೆ ಇದ್ದರೂ ಸಹ ವಿಕ್ಟೋರಿಯಾ ಜಲಪಾತವು ಜಗತ್ತಿನ ಅತಿ ದೊಡ್ಡ ಜಲಪಾತವೆನಿಸಿದೆ. ಇದಕ್ಕೆ ಕಾರಣ ಸುಮಾರು ೧.೭ ಕಿ,ಮೀ. ಅಗಲವಾಗಿ ಸುಮಾರು ೧೦೮ ಎತ್ತರದಿಂದ ನೀರಿನ ಒಂದೇ ಹಾಳೆಯಾಗಿ ಧುಮುಕುವ ರುದ್ರ ರಮಣೀಯ ನೋಟ. ಇಲ್ಲಿ ಜಿಗಿಯುವ ನೀರಿನ ಪ್ರಮಾಣವು ವಿಶ್ವದ ಇತರ ಮಹಾ ಜಲಪಾತಗಳೊಂದಿಗೆ ಉತ್ತಮ ಹೋಲಿಕೆಯನ್ನು ಹೊಂದಿದೆ. ಇತರ ದೊಡ್ಡ ಜಲಪಾತಪ್ರದೇಶಗಳಲ್ಲಿರುವಂತೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ಪರ್ವತಗಳಾಗಲಿ ಯಾ ಆಳ ಕಣಿವೆಗಳಾಗಲೀ ಇಲ್ಲದಿದ್ದು ಸರಿಸುಮಾರು ಪೂರ್ಣ ಬಯಲು ಪ್ರದೇಶದಲ್ಲಿ ಹರಿದು ಬರುವ ಜಾಂಬೆಜಿ ನದಿ ಇಲ್ಲಿ ಹಠಾತ್ತಾಗಿ ಕೆಳ ಧುಮುಕುವುದು ಇನ್ನೊಂದು ವೈಶಿಷ್ಟ್ಯ.
[[Image:VicFalls.jpg|thumb|left|ಜಾಂಬಿಯಾದ ಕಡೆಯಿಂದ ಜಲಪಾತದ ನೋಟ.]]
 
೩೪ ನೇ ಸಾಲು:
*[http://www.zambiatourism.com/travel/places/victoria.htm ಜಾಂಬಿಯಾದ ಸರಕಾರಿ ಪ್ರವಾಸಿ ಇಲಾಖೆಯ ಮಾಹಿತಿತಾಣದಲ್ಲಿ ವಿಕ್ಟೋರಿಯಾ ಜಲಪಾತದ ವಿಷಯಗಳು]
*[http://www.zimbabwetourism.co.zw/destzim/index.html ಜಿಂಬಾಬ್ವೆಯ ಸರಕಾರಿ ಪ್ರವಾಸಿ ಇಲಾಖೆಯ ಮಾಹಿತಿತಾಣದಲ್ಲಿ ವಿಕ್ಟೋರಿಯಾ ಜಲಪಾತದ ವಿಷಯಗಳು]
*[http://whc.unesco.org/pg.cfm?cid=31&id_site=509 ಯುನೆಸ್ಕೋ ವಿಶ್ವ ಪ್ರಂಪರೆಯಪರಂಪರೆಯ ತಾಣಗಳ ಪಟ್ಟಿ]
*[http://www.hoole.easynet.co.uk/ ೧೮೯೧ ರಲ್ಲಿ ತೆಗೆಯಲಾದ ವಿಕ್ಟೋರಿಯಾ ಜಲಪಾತದ ಮೊಟ್ಟಮೊದಲ ಛಾಯಾಚಿತ್ರಗಳು]
 
"https://kn.wikipedia.org/wiki/ವಿಕ್ಟೋರಿಯಾ_ಜಲಪಾತ" ಇಂದ ಪಡೆಯಲ್ಪಟ್ಟಿದೆ