"ವಿಕ್ಟೋರಿಯಾ ಜಲಪಾತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (/ ಇನ್ಫೋಬಾಕ್ಸ್ ಅಳವಡಿಕೆ /)
ಚು
}}
 
'''ವಿಕ್ಟೋರಿಯಾ ಜಲಪಾತ''' ( ಸ್ಥಳೀಯ ಭಾಷೆಯಲ್ಲಿ '''''ಮೋಸಿ-ಓ-ಟುನ್ಯಾ''''' ) [[ಆಫ್ರಿಕಾ]]ದ ದಕ್ಷಿಣ ಭಾಗದಲ್ಲಿ [[ಜಿಂಬಾಬ್ವೆ]] ಮತ್ತು [[ಜಾಂಬಿಯ]] ದೇಶಗಳ ಗಡಿಯಲ್ಲಿ [[ಜಾಂಬೆಜಿ]] ನದಿಯ ಒಂದು ಮಹಾ [[ಜಲಪಾತ]]. ವಿಕ್ಟೋರಿಯಾ ಜಲಪಾತ ಜಗತ್ತಿನ ಅತಿ ಭಾರೀ ಜಲಪಾತವೆನಿಸಿದೆ. ಅಲ್ಲದೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ವಿಶ್ವದ ಬೇರಾವ ಜಲಪಾತ ಪ್ರದೇಶಗಳಲ್ಲಿ ಕಾಣಬರದ ವನ್ಯಜೀವಿ ವೈವಿಧ್ಯವಿದೆ. ವಿಕ್ಟೋರಿಯಾ ಜಲಪಾತ ಸ್ಥಳೀಯವಾಗಿ '''''ಗರ್ಜಿಸುವ ಹೊಗೆ''''' ಎಂದು ಹೆಸರಾಗಿದೆ. ತನ್ನ ವಿಶಾಲ ಗೋಡೆಯಂತೆ ಧುಮುಕುವ ಜಲಧಾರೆಯ ಗಣನೀಯ ಭಾಗವು ನೆಲವನ್ನು ತಲುಪುವಷ್ಟರೊಳಗೆ ತುಂತುರು ತುಂತುರಾಗಿ ತಡಸಲಿನ ಅಡಿಭಾಗದಿಂದ ನೀರಾವಿಯ ಮೋಡಗಳಾಗಿ ಮೇಲೇಳುವುದರಿಂದ ಈ ಹೆಸರು ವಿಕ್ಟೋರಿಯಾ ಜಲಪಾತಕ್ಕೆ ಬಂದಿದೆ. [[ಸ್ಕಾಟ್ಲೆಂಡ್‌]]ನ ಅನ್ವೇಷಕ ಡೇವಿಡ್ ಲಿವಿಂಗ್‌ಸ್ಟನ್ ಈ ಜಲಪಾತಕ್ಕೆ ವಿಕ್ಟೋರಿಯಾ ಜಲಪಾತ ಎಂಬ ಹೆಸರನ್ನಿಟ್ಟನು. ಆದರೆ ಜಿಂಬಾಬ್ವೆ ದೇಶದಲ್ಲಿ ಇದು ಡೇವಿಡ್ ಲಿವಿಂಗ್‌ಸ್ಟನ್ ಜಲಪಾತವೆಂಬ ಹೆಸರಿನಿಂದ ಕರೆಯಲ್ಪಟ್ಟರೆ ಜಾಂಬಿಯಾ ದೇಶದಲ್ಲಿ ಇದರ ಅಧಿಕೃತ ಹೆಸರು ಮೋಸಿ-ಓ-ಟುನ್ಯಾ. [[ವಿಶ್ವ ಪರಂಪರೆಯ ತಾಣಗಳ ಪಟ್ಟಿ]]ಯಲ್ಲಿ ಈ ಎರಡೂ ಹೆಸರುಗಳನ್ನು ಮಾನ್ಯಮಾಡಲಾಗಿದೆ. [[ವೆನೆಜುವೆಲಾ]]ದ [[ಏಂಜೆಲ್ ಜಲಪಾತ]]ದಷ್ಟು ಎತ್ತರ ಮತ್ತು [[ಖೋನ್ ಜಲಪಾತ]]ದಷ್ಟು ಅಗಲವನ್ನು ಹೊಂದದೆ ಇದ್ದರೂ ಸಹ ವಿಕ್ಟೋರಿಯಾ ಜಲಪಾತವು ಜಗತ್ತಿನ ಅತಿ ದೊಡ್ಡ ಜಲಪಾತವೆನಿಸಿದೆ. ಇದಕ್ಕೆ ಕಾರಣ ಸುಮಾರು ೧.೭ ಕಿ,ಮೀ. ಅಗಲವಾಗಿ ಸುಮಾರು ೧೦೮ ಎತ್ತರದಿಂದ ನೀರಿನ ಒಂದೇ ಹಾಳೆಯಾಗಿ ಧುಮುಕುವ ರುದ್ರ ರಮಣೀಯ ನೋಟ. ಇಲ್ಲಿ ಜಿಗಿಯುವ ನೀರಿನ ಪ್ರಮಾಣವು ವಿಶ್ವದ ಇತರ ಮಹಾ ಜಲಪಾತಗಳೊಂದಿಗೆ ಉತ್ತಮ ಹೋಲಿಕೆಯನ್ನು ಹೊಂದಿದೆ. ಇತರ ದೊಡ್ಡ ಜಲಪಾತಪ್ರದೇಶಗಳಲ್ಲಿರುವಂತೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ಪರ್ವತಗಳಾಗಲಿ ಯಾ ಆಳ ಕಣಿವೆಗಳಾಗಲೀ ಇಲ್ಲದಿದ್ದು ಸರಿಸುಮಾರು ಪೂರ್ಣ ಬಯಲು ಪ್ರದೇಶದಲ್ಲಿ ಹರಿದು ಬರುವ ಜಾಂಬೆಜಿ ನದಿ ಇಲ್ಲಿ ಹಠಾತ್ತಾಗಿ ಕೆಳ ಧುಮುಕುವುದು ಇನ್ನೊಂದು ವೈಶಿಷ್ಟ್ಯ.
[[Image:VicFalls.jpg|thumb|rightleft|ಜಾಂಬಿಯಾದ ಕಡೆಯಿಂದ ಜಲಪಾತದ ನೋಟ.]]
 
[[ಸ್ಕಾಟ್ಲೆಂಡ್‌]]ನ ಅನ್ವೇಷಕ ಡೇವಿಡ್ ಲಿವಿಂಗ್‌ಸ್ಟನ್ ಈ ಜಲಪಾತಕ್ಕೆ ವಿಕ್ಟೋರಿಯಾ ಜಲಪಾತ ಎಂಬ ಹೆಸರನ್ನಿಟ್ಟನು. ಆದರೆ ಜಿಂಬಾಬ್ವೆ ದೇಶದಲ್ಲಿ ಇದು ಡೇವಿಡ್ ಲಿವಿಂಗ್‌ಸ್ಟನ್ ಜಲಪಾತವೆಂಬ ಹೆಸರಿನಿಂದ ಕರೆಯಲ್ಪಟ್ಟರೆ ಜಾಂಬಿಯಾ ದೇಶದಲ್ಲಿ ಇದರ ಅಧಿಕೃತ ಹೆಸರು ಮೋಸಿ-ಓ-ಟುನ್ಯಾ. [[ವಿಶ್ವ ಪರಂಪರೆಯ ತಾಣಗಳ ಪಟ್ಟಿ]]ಯಲ್ಲಿ ಈ ಎರಡೂ ಹೆಸರುಗಳನ್ನು ಮಾನ್ಯಮಾಡಲಾಗಿದೆ. [[ವೆನೆಜುವೆಲಾ]]ದ [[ಏಂಜೆಲ್ ಜಲಪಾತ]]ದಷ್ಟು ಎತ್ತರ ಮತ್ತು [[ಖೋನ್ ಜಲಪಾತ]]ದಷ್ಟು ಅಗಲವನ್ನು ಹೊಂದದೆ ಇದ್ದರೂ ಸಹ ವಿಕ್ಟೋರಿಯಾ ಜಲಪಾತವು ಜಗತ್ತಿನ ಅತಿ ದೊಡ್ಡ ಜಲಪಾತವೆನಿಸಿದೆ. ಇದಕ್ಕೆ ಕಾರಣ ಸುಮಾರು ೧.೭ ಕಿ,ಮೀ. ಅಗಲವಾಗಿ ಸುಮಾರು ೧೦೮ ಎತ್ತರದಿಂದ ನೀರಿನ ಒಂದೇ ಹಾಳೆಯಾಗಿ ಧುಮುಕುವ ರುದ್ರ ರಮಣೀಯ ನೋಟ. ಇಲ್ಲಿ ಜಿಗಿಯುವ ನೀರಿನ ಪ್ರಮಾಣವು ವಿಶ್ವದ ಇತರ ಮಹಾ ಜಲಪಾತಗಳೊಂದಿಗೆ ಉತ್ತಮ ಹೋಲಿಕೆಯನ್ನು ಹೊಂದಿದೆ. ಇತರ ದೊಡ್ಡ ಜಲಪಾತಪ್ರದೇಶಗಳಲ್ಲಿರುವಂತೆ ವಿಕ್ಟೋರಿಯಾ ಜಲಪಾತದ ಆಸುಪಾಸಿನಲ್ಲಿ ಪರ್ವತಗಳಾಗಲಿ ಯಾ ಆಳ ಕಣಿವೆಗಳಾಗಲೀ ಇಲ್ಲದಿದ್ದು ಸರಿಸುಮಾರು ಪೂರ್ಣ ಬಯಲು ಪ್ರದೇಶದಲ್ಲಿ ಹರಿದು ಬರುವ ಜಾಂಬೆಜಿ ನದಿ ಇಲ್ಲಿ ಹಠಾತ್ತಾಗಿ ಕೆಳ ಧುಮುಕುವುದು ಇನ್ನೊಂದು ವೈಶಿಷ್ಟ್ಯ.
 
==ಜೀವ ವೈವಿಧ್ಯ==
ವಿಕ್ಟೋರಿಯಾ ಜಲಪಾತದ ಪರಿಸರದಲ್ಲಿ ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳು [[ರಾಷ್ಟ್ರೀಯ ಉದ್ಯಾನ]]ಗಳನ್ನು ರಚಿಸಿದ್ದು ಇವು ದೊಡ್ಡ ಪ್ರಮಾಣದ ಜೀವ ವೈವಿಧ್ಯದ ನೆಲೆಗಳಾಗಿವೆ. ಇಲ್ಲಿನ ಸಸ್ಯರಾಜಿಯು ಸಾಮಾನ್ಯವಾಗಿ ಆಫ್ರಿಕಾದ [[ಸವಾನ್ನಾ]] ಹುಲ್ಲುಗಾವಲಿನ ಸಸ್ಯಗಳು. ಜೊತೆಗೆ ನದಿಯಂಚಿನಲ್ಲಿ ಕಾಣಬರುವ [[ತೆಂಗು|ತೆಂಗಿನ]] ಜಾತಿಯ ಮರಗಳ ಕಾಡುಗಳಿವೆ. [[ತೇಗ]]ದ ಮರಗಳ ತೋಪುಗಳು ಸಹ ಸಾಕಷ್ಟಿವೆ.
 
[[Image:White rhino Livingstone.jpg|thumb|rightleft|ಮೋಸಿ-ಓ-ಟುನ್ಯಾ ರಾಷ್ಟ್ರೀಯ ಉದ್ಯಾನದಲ್ಲಿ ಎರಡು ಬಿಳಿ ಘೇಂಡಾ ಮೃಗಗಳು.]]
 
ಆಫ್ರಿಕಾದ [[ಆನೆ]]ಗಳ ಬೃಹತ್ ಗುಂಪುಗಳು ಇಲ್ಲಿ ವಾಸವಾಗಿವೆ. ಜೊತೆಗೆ [[ಕಾಡುಕೋಣ]], [[ಜಿರಾಫೆ]], [[ಜೀಬ್ರಾ]] ಮತ್ತು [[ಜಿಂಕೆ]]ಗಳ ಹಲವು ತಳಿಗಳನ್ನು ಇಲ್ಲಿ ಕಾಣಬಹುದು. ಕೆಲವೊಮ್ಮೆ [[ಸಿಂಹ]] ಮತ್ತು [[ಚಿರತೆ]]ಗಳು ಸಹ ಕಾಣಬರುವುದಿದೆ. [[ಬಬೂನ್]] ಮತ್ತು ವೆರ್ವೆಟ್ [[ಕೋತಿ]]ಗಳು ಇಲ್ಲಿ ಸಾಮಾನ್ಯ. ಜಲಪಾತದ ಮೇಲ್ಭಾಗದ ನದಿಯಲ್ಲಿ [[ಹಿಪ್ಪೊಪೊಟಮಸ್‌]]ಗಳ ದೊಡ್ಡ ಹಿಂಡುಗಳು ನೆಲೆಸಿವೆ. [[ಮೊಸಳೆ]]ಗಳು ಈ ಪ್ರದೇಶದಲ್ಲಿ ಸಾಕಷ್ಟಿವೆ. ಆಟ್ಟರ್, ಕಪ್ಪು [[ಗರುಡ]] ಮತ್ತು ಹಲವು ಜಾತಿಗಳ [[ಹದ್ದು]]ಗಳು ಸಹ ವಿಕ್ಟೋರಿಯಾ ಜಲಪಾತದ ಪರಿಸರದಲ್ಲಿ ನೆಲೆಸಿವೆ. ಜಾಂಬೆಜಿ ನದಿಯಲ್ಲಿ ಜಲಪಾತದ ಮೇಲ್ಭಾಗದಲ್ಲಿ ೮೯ ತಳಿಗಳ [[ಮೀನು]]ಗಳಿಗೆ ನೆಲೆಯಾಗಿದ್ದರೆ ಜಲಪಾತದ ಕೆಳಗಣ ಭಾಗದಲ್ಲಿ ೩೯ ತಳಿಗಳ ಮೀನುಗಳು ಜೀವಿಸಿವೆ.
೧,೨೯೩

edits

"https://kn.wikipedia.org/wiki/ವಿಶೇಷ:MobileDiff/94931" ಇಂದ ಪಡೆಯಲ್ಪಟ್ಟಿದೆ