ದ್ರೌಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೦ ನೇ ಸಾಲು:
* ಆಗ ದ್ರೌಪದಿ ಇಡೀ ಸಭೆಯ ಉದ್ದೇಶವನ್ನು ಪ್ರಶ್ನಿಸುತ್ತಾಳೆ. ಅವಳು ಕೇಳುವ ಪ್ರಶ್ನೆ ಮಾರ್ಮಿಕವಾದುದು. ಮೊದಲು ಪಾಂಡವರೆಲ್ಲ ಸೋತು, ನಂತರ ನನ್ನನ್ನು ಪಣವಾಗಿಟ್ಟರೋ? ಇಲ್ಲವೆ ಮೊದಲೆ ನನ್ನನ್ನು ಪಣವಾಗಿಟ್ಟು ಸೋತರೋ? ಅವರಿಂದ ಉತ್ತರವನ್ನು ಕೇಳಿಕೊಂಡು ಬಾ ಎಂದು ವಾಪಾಸು ಕಳುಹಿಸುತ್ತಾಳೆ. ಅವಳ ಪ್ರಶ್ನೆಗೆ ಉತ್ತರ ಹೇಳುವ ವ್ಯವಧಾನ, ಸಹನೆ ಅಲ್ಲಿರುವ ಯಾರಿಗೂ ಇರದೇ ಹೋದುದರಿಂದ, ದುಶ್ಯಾಸನ ದ್ರೌಪದಿಯನ್ನು ಕರೆತರಲು ಬರುತ್ತಾನೆ.
*ಆಗ ದ್ರೌಪದಿ ತಾನು ಋತುಮತಿಯಾಗಿರುವುದರಿಂದ ರಾಜಸಭೆಗೆ ಬರುವುದು ತರವಲ್ಲ ಎಂದು ಮೈದುನನಾದ ದುಶ್ಯಾಸನನಿಗೆ ಹೇಳಿದಾಗ, ಅವನು ಕೌರವನ ಆಸ್ಥಾನದಲ್ಲಿ ಫಲವತಿಯಾಗು ನಡೆ ಎಂದು ಬಲವಂತವಾಗಿ ಅವಳನ್ನು ಎಳೆತರುತ್ತಾನೆ. ಇದರಿಂದ ಆಕ್ರೋಶಗೊಂಡ ದ್ರೌಪದಿ ಗಂಡಂದಿರಿಗೆ ರಾಜಸಭೆಯಲ್ಲೇ ಛೀಮಾರಿ ಹಾಕುತ್ತಾಳೆ.
*ಗಂಡರೈವರು ಒಬ್ಬಳನಾಳಲಾರಿರಿ? ನೀವು ಗಂಡರೋ ಇಲ್ಲ ಭಂಡರೋ? ಎಂದು ಹಂಗಿಸಿ ಪ್ರತಿಭಟಿಸುತ್ತಾಳೆ. ತನ್ನ ವಾಕ್ ಪ್ರಹಾರದಿಂದ ಭೀಷ್ಮ, ದ್ರೋಣಾದಿಗಳನ್ನು ತರಾಟೆಗೆ ತೆಗೆದು ಕೊಳ್ಳತ್ತಾಳೆ. ರಾಜಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ರಳೆಯಎಳೆಯ ತೊಡಗಿದಾಗ ಪಾಂಡವರು, ಭೀಷ್ಮ, ದ್ರೋಣಾದಿಗಳು ಅಸಹಾಕರಾಗಿ ತಲೆ ತಗ್ಗಿಸುತ್ತಾರೆ. ಕಡೆಗೆ ಶ್ರೀಕೃಷ್ಣ ದ್ರೌಪದಿಯ ಪ್ರಾರ್ಥನೆಯನ್ನು ದಿವ್ಯಜ್ಞಾನದಿಂದ ಅರಿತು ಅವಳ ಮಾನವನ್ನು ಕಾಪಾಡುತ್ತಾನೆ. ಈ ಘಟನೆಯ ನಂತರ ಪಾಂಡವರೊಂದಿಗೆ ದ್ರೌಪದಿ ವನವಾಸಕ್ಕೆ ಹೋಗಬೇಕಾಗಿ ಬರುತ್ತದೆ.
:ಕೃಷ್ಣನಿಗೆ ದ್ರೌಪದಿಯ ಮೊರೆ
;ಸುಲಿವರೂರೊಳಗುಟ್ಟ ಸೀರೆಯ
;ನೆಲೆ ಮುರಾಂತಕ ರಕ್ಷಿಸೈ ಶಶಿ
;ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು||
;ಸೆಳೆವರಸುವನು ಖಳರು ಸೀರೆಯ
;ಸುಲಿದರುಳಿಯೆನು ಕೃಷ್ಣ ಕರುಣಾ
;ಜಲಧಿಯೇ ಕೈಗಾಯಬೆಕೆಂದೊರಲಿದಳು ತರಳೆ||೨-೧೪-೧೧೦||
 
==ಕುಮಾರವ್ಯಾಸ ಭಾರತದಲ್ಲಿ ದ್ರೌಪದಿಯ ಬಣ್ಣನೆ==
"https://kn.wikipedia.org/wiki/ದ್ರೌಪದಿ" ಇಂದ ಪಡೆಯಲ್ಪಟ್ಟಿದೆ