ಕರಿಮೆಣಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು fixing doi from hijacked website, see here
೭೫ ನೇ ಸಾಲು:
ಮಧ್ಯಯುಗದಲ್ಲಿ ಮೆಣಸಿನಕಾಳನ್ನು ಹಳಸುತ್ತಿರುವ ಮಾಂಸದ ರುಚಿಯನ್ನು ಮರೆಮಾಚಲು ಉಪಯೋಗಿಸಲಾಗುತ್ತಿತ್ತು ಎಂಬ ಸಾಮಾನ್ಯ ಪ್ರತೀತಿಯಿದೆ. ಇದಕ್ಕೆ ಪುಷ್ಟಿಕೊಡುವಂತಹ ಯಾವುದೇ ಆಧಾರವಿಲ್ಲ . ಇತಿಹಾಸಕಾರರು ಕೂಡಾ ಇದು ಅಸಂಭವ ಎಂದು ಅಭಿಪ್ರಾಯಪಡುತ್ತಾರೆ. ಮಧ್ಯಯುಗದಲ್ಲಿ ಮೆಣಸು ಬರಿಯ ಶ್ರೀಮಂತರಿಗಷ್ಟೇ ಎಟುಕುವಂತಹ ಐಷಾರಾಮಿ ವಸ್ತುಗಳಲ್ಲಿ ಒಂದಾಗಿತ್ತು. ಅಂಥ ಶ್ರೀಮಂತರಿಗೆ ಹಳಸಲು ಮಾಂಸ ತಿನ್ನುವ ಅಗತ್ಯವೇನಿದ್ದೀತು ! <ref>ಡಾಲ್ಬಿ ಪುಟ. ೧೫೬; ಹಾಗೂ ಟರ್ನರ್ ಪುಟ. ೧೦೮-೧೦೯, ಆದರೆ ಟರ್ನರ್ ಮಸಾಲೆ ಪದಾರ್ಥಗಳ ಬಗ್ಗೆ ಬರೆಯುತ್ತಾ(ಪ್ರತ್ಯೇಕವಾಗಿ ಕರಿಮೆಣಸಿನ ಬಗ್ಗೆ ಬರೆಯದೆ), [[ವೈನ್]] ಮತ್ತು [[ಬೀರ್|ಬೀರ್‌ಗಳ]] ನಿಜಸ್ವರೂಪವನ್ನು ಮರೆಮಾಚಲು ಮಸಾಲೆ ಪದಾರ್ಥಗಳನ್ನು ಬಳಸಲಾಗುತಿತ್ತು ಎಂದಿದ್ದಾನೆ.</ref>
 
ಇದೇ ರೀತಿ ಆಹಾರ ಶೇಖರಿಸಲು ಮೆಣಸನ್ನು ಉಪಯೋಗಿಸುತಿದ್ದರು ಎಂಬ ಸುದ್ದಿ ಪ್ರಶ್ನಾರ್ಥಕವಾಗಿದೆ: ಮೆಣಸಿಗೆ ಖಾರ ಕೊಡುವ ಪೈಪರೈನ್ನಲ್ಲಿ ಅತೀ ಸೂಕ್ಷ್ಮ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿ ಇದೆ ಅನ್ನುವುದು ಸತ್ಯವಾದರೂ, ಅದನ್ನು ಸಾಂಬಾರ ಪದಾರ್ಥಗಳಲ್ಲಿ ಬಳಸುವ ಸಾಂದ್ರತೆಯನ್ನು ಲೆಕ್ಕಕ್ಕಿರಿಸಿಕೊಂಡರೆ ರೋಗಾಣುಗಳ ಮೇಲೆ ಇದರ ಪರಿಣಾಮ ಬಹಳ ಕಮ್ಮಿ.<ref> ಹೆಚ್.ಜೆ.ಡಿ.ಡಾರ್ಮನ್ ಮತ್ತು ಎಸ್.ಜಿ.ಡೀನ್ಸ್ ಬರೆದಿರುವ "Antimicrobial agents from plants: antibacterial activity of plant volatile oils" ಎಂಬ ಗ್ರಂಥ. [http://wwwdoi.blackwell-synergy.com/doi/fullorg/10.1046/j.1365-2672.2000.00969.x?cookieSet=1 ಪೂರ್ಣಪಾಠ]. </ref>
ಮೆಣಸಿಗೆ ಹೋಲಿಸಿದರೆ [[ಉಪ್ಪು]] ಶೇಖರಣೆಯಲ್ಲಿ ಹೆಚ್ಚು ಪರಿಣಾಮಕಾರಿ ,ಉದಾಹರಣೆಗೆ ಚಳಿಗಾಲದಲ್ಲಿ ಮಾಂಸಕ್ಕೆ ಉಪ್ಪನ್ನು ಸವರಿ ಅದು ಕೆಡದಂತೆ ಶೇಖರಿಸುವುದು. ಆದರೂ ಮೆಣಸು ಮತ್ತು ಇತರ ಸಾಂಬಾರ ಪದಾರ್ಥಗಳು ಬಹಳ ದಿನಗಳ ಕಾಲ ಶೇಖರಿಸಿಡುವ ಮಾಂಸದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
 
"https://kn.wikipedia.org/wiki/ಕರಿಮೆಣಸು" ಇಂದ ಪಡೆಯಲ್ಪಟ್ಟಿದೆ