ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೮ ನೇ ಸಾಲು:
==ನಿರ್ವಹಣೆಯ ಲಕ್ಷಣಗಳು (features of management)==
:ನಿರ್ವಹಣೆಯು ಈ ಕೆಳಕಂಡ ಗುಣಲಕ್ಷಣಗಳನ್ನು ಹೊಂದಿದೆ.
'''1)''''ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ (Management is goal oriented)''':'''ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ. ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.
 
'''2)''''ನಿರ್ವಹಣೆಯು ಸಾರ್ವತ್ರಿಕವಾಗಿದೆ (Management is all pervasive)''':'''ನಿರ್ವಹಣೆಯ ಚಟುವಟಿಕೆಗಳು ಕೇವಲ ವ್ಯವಹಾರ್ವ್ಯವಹಾರ ಸಂಸ್ಥೆಗಳಿಗೆ ಮಾತ್ರವಲ್ಲದೆ ಸಾರ್ವತ್ರಿಕವಾಗಿ ಎಲ್ಲಾ ರೀತಿಯ ಸಂಘಟನೆಗಳಿಗೂ ಅನ್ವಯಿಸುತ್ತವೆ. ಈ ಸಂಘಟನೆಗಳು ಆರ್ಥಿಕ, ಸಾಮಾಜಿಕ, ದತ್ತಿ, ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳಾಗಿರಬಹುದು. ಆದುದರಿಂದ ನಿರ್ವಹಣೆಯ ಅನ್ವಯಿಸುವಿಕೆಯನ್ನು ಎಲ್ಲಾ ಸಂಘಟನೆಗಳಲ್ಲಿ ಕಾಣಬಹುದು.
 
'''3)''''ನಿರ್ವಹಣೆಯು ವಿವಿಧ ಆಯಾಮಗಳನ್ನು ಹೊಂದಿದೆ (Management is multi dimensional)''':'''ನಿರ್ವಹಣೆಯ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಕೆಳಕಂಡ ಮೂರು ಆಯಾಮಗಳನ್ನು ಹೊಂದಿದೆ. a) ಕೆಲಸದ ನಿರ್ವಹಣೆ,b) ವ್ಯಕ್ತಿಗಳ ನಿರ್ವಹಣೆ c) ಕಾರ್ಯಚಟುವಟಿಕೆಗಳ ನಿರ್ವಹಣೆ.
 
*'''ಕೆಲಸದ ನಿರ್ವಹಣೆ''' :ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸಲು ಸ್ಥಾಪಿಸಲಾಗಿರುತ್ತದೆ. ನಿರ್ವಹಣೆಯು ಈ ಕೆಲಸಗಳನ್ನು ಉದ್ದೇಶಗಳಾಗಿ ಪರಿವರ್ತಿಸಿ, ಅವುಗಳನ್ನು ಸಾಧಿಸಲು ಅವಕಾಶ ಕಲ್ಪಿಸುತ್ತದೆ. ನಿರ್ವಹಣೆಯು ಈ ಉದ್ದೇಶಗಳನ್ನು ಸಾಧಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ತೀರ್ಮಾನವನ್ನು ಕೈಗೊಳ್ಳುವ, ಯೊಜನೆಗಳನ್ನು ತಯಾರಿಸುವ, ಅಂದಾಜು ಪತ್ರವನ್ನು ಸಿದ್ಧಪಡಿಸುವ, ಜವಾಬ್ದಾರಿಗಳನ್ನು ವಹಿಸುವ ಹಾಗೂ ಅಧಿಕಾರವನ್ನು ಪ್ರತ್ಯಾಯೋಜಿಸುವ ಕಾರ್ಯಗಳನ್ನು ಒಳಗೊಂಡಿದೆ.
*'''ವ್ಯಕ್ತಿಗಳ ನಿರ್ವಹಣೆ''' :ನಿರ್ವಹಣೆಯು ವ್ಯಕ್ತಿಗಳಿಂದ ಮತ್ತು ವ್ಯಕ್ತಿಗಳ ಮೂಲಕ ನಿರ್ದಿಷ್ಟ ಕಾರ್ಯವನ್ನು ಸಾಧಿಸಿಕೊಳ್ಳುವುದಾಗಿದೆ. ಸಂಘಟನೆಯು ವಿವಿಧ ವ್ಯಕ್ತಿತ್ವ, ಅವಶ್ಯಕತೆ, ಕೆಲಸದ ವಿಧಾನ ಮತ್ತು ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳನ್ನು ಹೊಂದಿರುತ್ತದೆ.ಅವರೊಂದಿಗೆ ವ್ಯವಹರಿಸಿ ಮತ್ತು ಕಾರ್ಯವನ್ನು ನಿಯಂತ್ರಿಸುವುದು ವ್ಯವಸ್ಥಾಪಕನ ಮುಖ್ಯಕಾರ್ಯವಾಗಿರುತ್ತದೆ. ಆದುದರಿಂದ ಯವಸ್ಥಾಪಕನುವ್ಯವಸ್ಥಾಪಕನು ಅವರೆಲ್ಲರು ಒಟ್ಟಾಗಿ ಕೆಲಸಗಳನ್ನು ಸಂಘಟನೆಯ ದೃಷ್ಟಿಯಿಂದ ನಿರ್ವಹಿಸುವಂತೆ ಮಾಡುವುದಾಗಿದೆ. *'''ಕಾರ್ಯಚಟುವಟಿಕೆಗಳ ನಿರ್ವಹಣೆ''': ಪ್ರತಿಯೊಂದು ಸಂಘಟನೆಯು ಸರಕು ಸೇವೆಗಳನ್ನು ಒದಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ.ನಿರ್ವಹಣೆಯು ಕಾರ್ಯಸಾಧಕ ಸಂಪನ್ಮೂಲಗಳನ್ನು (ವಸ್ತು ಮತ್ತು ತಂತ್ರಜ್ಞಾನ) ಪರಿವರ್ತಿಸಿ ಬಳಕೆದಾರರಿಗೆ ಸಿದ್ಧಪಡಿಸಿದ ಉತ್ಪನ್ನಗಳನ್ನು(ಸರಕು ಮತ್ತು ಸೇವೆ) ಒದಗಿಸುವುದು.
*'''ಕಾರ್ಯಚಟುವಟಿಕೆಗಳ ನಿರ್ವಹಣೆ''': ಪ್ರತಿಯೊಂದು ಸಂಘಟನೆಯು ಸರಕು ಸೇವೆಗಳನ್ನು ಒದಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ.ನಿರ್ವಹಣೆಯು ಕಾರ್ಯಸಾಧಕ ಸಂಪನ್ಮೂಲಗಳನ್ನು(ವಸ್ತು ಮತ್ತು ತಂತ್ರಜ್ಞಾನ) ಪರಿವರ್ತಿಸಿ ಬಳಕೆದಾರರಿಗೆ ಸಿದ್ಧಪಡಿಸಿದ ಉತ್ಪನ್ನಗಳನ್ನು(ಸರಕು ಮತ್ತು ಸೇವೆ) ಒದಗಿಸುವುದು.
 
'''4)''''ನಿರ್ವಹಣೆಯು ನಿರಂತರ ಪ್ರಕ್ರಿಯೆಯಾಗಿದೆ (Management is a continuous process)''':''' ನಿರ್ವಹಣೆಯು ಒಂದು ನಿರಂತರ ಪ್ರಕ್ರಿಯೆಯಾಗಿ ಯೋಜನೆಗಳನ್ನು ತಯಾರಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ ಹಾಗೂ ನಿಯಂತ್ರಣ ಮಾಡುವ ಕಾರ್ಯಗಳನ್ನು ಒಳಗೊಂಡಿದೆ.ಎಲ್ಲಾ ವ್ಯವಸ್ಥಾಪಕರು ಈ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಬೇಕಾಗುತ್ತದೆ. ಈ ನಿರ್ವಹಣಾ ಕಾರ್ಯಗಳು ಸಂಸ್ಥೆಯು ಅಸ್ತಿತ್ವದಲ್ಲಿರುವವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
 
'''5)''''ನಿರ್ವಹಣೆಯು ಗುಂಪು ಚಟುವಟಿಕೆಯಾಗಿದೆ''':'''ಪ್ರತಿಯೊಂದು ಸಂಘಟನೆಯು ವಿವಿಧ ಅಗತ್ಯಗಳನ್ನು ಹೊಂದಿದ ಹಲವಾರು ವ್ಯಕ್ತಿಗಳ ಗುಂಪಾಗಿದೆ.ಈ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿವಿಧ ಉದ್ದೇಶಗಳಿಂದ ಸಂಘಟನೆಯನ್ನು ಪ್ರವೇಶಿಸುತ್ತಾನೆ. ಸಂಘಟನೆಯ ವ್ಯಕ್ತಿಯೂ ಇತರರೊಂದಿಗೆ ಸಂವಹನ ಮತ್ತು ಸಮನ್ವಯದಿಂದ ಸಂಘಟನೆಯ ಸಾಮಾನ್ಯ ಉದ್ದೇಶಗಳ ಸಾಧನೆಗೆ ಕೈಜೋಡಿಸುವುದಾಗಿದೆ. ಆದುದರಿಂದ ನಿರ್ವಹಣೆಯು ಒಂದು ಗುಂಪು ಚಟುವಟಿಕೆಯಾಗಿದೆ.
 
'''6)''''ನಿರ್ವಹಣೆಯು ಚಲನಶೀಲ ಕಾರ್ಯವಾಗಿದೆ''':'''ಪ್ರತಿಯೊಂದು ಸಂಘಟನೆಯು ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪರಿಸರ ಯಾವಾಗಲೂ ಬದಲಾಗುತ್ತಿರುವುದರಿಂದ ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಆದುದರಿಂದ ನಿರ್ವಹಣೆಯು ಒಂದು ಚಲನಶೀಲ ಕಾರ್ಯವಾಗಿದೆ.
 
'''7)''''ನಿರ್ವಹಣೆಯು ಅಗೋಚರ ಶಕ್ತಿಯಾಗಿದೆ''':''' ನಿರ್ವಹಣೆಯು ಅದೃಶ್ಯವಾಗಿದ್ದು, ಅದರ ಇರುವಿಕೆಯನ್ನು ಸಂಘಟನೆಯ ಕಾರ್ಯದಲ್ಲಿ ಗಮನಿಸಬಹುದಾಗಿದೆ. ನಿರ್ವಹಣೆಯ ಪರಿಣಾಮಗಳನ್ನು ಉತ್ಪಾದನೆಯ ಗುರಿ ಸಾಧನೆ, ನೌಕರರ ಸಂತೃಪ್ತಿ ಮುಂತಾದವುಗಳಲ್ಲಿ ಕಾಣಬಹುದಾಗಿದೆ. ಆದುದರಿಂದ ನಿರ್ವಹಣೆಯು ಅಗೋಚರವಾಗಿದ್ದು ವ್ಯಕ್ತಿಗಳ ಒಟ್ಟು ಕಾರ್ಯದ ಮೇಲೆ ತನ್ನ ಪರಿಣಾಮವನ್ನು ಪ್ರತಿಫಲಿಸುತ್ತವೆ.
 
==ನಿರ್ವಹಣೆಯ ಉದ್ದೇಶಗಳು==
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ