ಬಜೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
}}
 
ಅಕೊರಸ್ ಕೆಲಾಮಸ್ (''Acorus calamus L'') ಎಂದು ಕರೆಯುವ ಬಜೆ 'ಏರೇಸಿ' ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದರ ಮೂಲಸ್ಥಾನ [[ಹಿಮಾಲಯ]]. ಇದನ್ನು ಪರ್ಶಿಯ ಮೂಲದಿಂದ ಭಾರತಕ್ಕೆ ತರಲಾಗಿದೆ. ಪರ್ಶಿಯಾದಲ್ಲಿ ಬಜೆಯನ್ನು ಖುರಸಾನಿ ವಚಾ ಅಥವಾ ಬಲ-ವಜ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ. ಇದು [[ಉತ್ತರ ಅಮೇರಿಕಾ]], [[ಯೂರೋಪ್]] ಮತ್ತು ರಷ್ಯಾದ ನದಿ ತೀರಗಳು ಮತ್ತು ಕೊಳಗಳಿರುವ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುತ್ತದೆ. ಈ ಬೆಳೆಯು [[ವಾಣಿಜ್ಯ(ವ್ಯಾಪಾರ)|ವಾಣಿಜ್ಯವಾಗಿ]] [[ರಷ್ಯಾ]], ಮಧ್ಯ ಯೂರೋಪ್, ರುಮೇನಿಯ, [[ಭಾರತ]] ಮತ್ತು ಜಪಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಬಜೆ, [[ಕರ್ನಾಟಕ]], ಮಣಿಪುರ, ಅರುಣಚಲಪ್ರದೇಶ, ಮೇಘಾಲಯ ಮತ್ತು ಹಿಮಾಲಯ ತಪ್ಪಲಲ್ಲಿ ೧೮೦೦ಮೀ. ಎತ್ತರದಲ್ಲಿ ಬೆಳೆಯಲಾಗುತ್ತದೆ. [[ಕರ್ನಾಟಕ]]ದ [[ತುಮಕೂರು]], ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ. ಇದು ಅಮೇರಿಕಾ ಮತ್ತು ಉತ್ತರ ನಾರ್ವೆಯ ಡೊಂಗುದಿ ಪ್ರದೇಶಗಳಲ್ಲೂ ಸಮೃದ್ಧವಾಗಿ ಬೆಳೆಯುತ್ತದೆ. ಇದು ದೇಹಕ್ಕೆ ತುಂಬಾ ತಂಪು.ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ಹಾಸನ, ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬಜೆಯನ್ನು ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಉದ್ದವಾಗಿದ್ದು ಚಿಕ್ಕ ಕಬ್ಬಿಣ ಪತ್ರಗಳನ್ನು ಹೋಲುತ್ತವೆ, ಬಢರುಗಳು ಗಂಟು ಗಂಟಾಗಿ ಉದ್ದವಾಗಿರುವುವು. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುವುವು, ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. '''ಹೂಗಳು''' ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ. ಇದರಲ್ಲಿ ‘ಅಕೊರಿನ್’ ತೈಲ ಇರುತ್ತದೆ.
 
==ಇತರ ಭಾಷೆಗಳಲ್ಲಿರುವ ಹೆಸರುಗಳು==
"https://kn.wikipedia.org/wiki/ಬಜೆ" ಇಂದ ಪಡೆಯಲ್ಪಟ್ಟಿದೆ