ಯಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಆಲ್ಲೂಕಿನ- ತಾಲ್ಲೂಕಿನ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೬ ನೇ ಸಾಲು:
ಇಲ್ಲಿ ಅನೇಕ ವಿಧವಾದ ಜನಾಂಗಗಳಿದ್ದು ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಕೂಡ ವಾಸವಾಗಿದ್ದಾರೆ. ಇಲ್ಲಿ ಭತ್ತವನ್ನು ಆಹಾರ ಬೆಳೆಯಾಗಿ ನಂಬಿಕೊಂಡರೆ, ಅಡಿಕೆ, ತೆಂಗು, ಏಲಕ್ಕಿ, ಮೆಣಸು, ಬಾಳೆ ಮುಂತಾದವು ವಾಣಿಜ್ಯ ಬೆಳೆಯಾಗಿದೆ.
 
ದಕ್ಷಿಣಕ್ಕೆ ಶಿರಸಿ, ನೈಋತ್ಯಕ್ಕೆ ಅಂಕೋಲ, ಪಶ್ಚಿಮ ಮತ್ತು ವಾಯುವ್ಯಕ್ಕೆ ಕಾರವಾರ, ಉತ್ತರಕ್ಕೆ ಹಳಿಯಾಳ ತಾಲ್ಲೂಕುಗಳು ಈಶಾನ್ಯದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಸುತ್ತುವರಿದಿವೆ. ಮಂಚಿಕೇರಿ, ಯಲ್ಲಾಪುರ ಹೋಬಳಿಗಳು. 133 ಹಳ್ಳಿಗಳಿವೆ. ವಿಸ್ತೀರ್ಣ 1525 ಚ.ಕಿ.ಮೀ. ಈ ಆಲ್ಲೂಕಿನತಾಲ್ಲೂಕಿನ ಜನಸಂಖ್ಯೆ 73,504 (2001). ಪಟ್ಟಣದ ಜನಸಂಖ್ಯೆ 17,938 (2001). ಈ ತಾಲ್ಲೂಕು ಸುಂದರವಾದ ಪರ್ವತ ಶ್ರೇಣಿ, ಕೊಳ್ಳ, ಅರಣ್ಯ, ಜಲಪಾತ ಮತ್ತು ವನ್ಯಪ್ರಾಣಿಗಳಿಂದ ಶೋಭಿಸುತ್ತಿದೆ. ಇದು ಮಲೆನಾಡು, ಕೊಂಕಣ ಬಯಲು ಸೀಮೆಗಳ ಮಧ್ಯವರ್ತಿ ಸ್ಥಳ. ಇಲ್ಲಿಯ ಹವೆ ತಂಪು. ಸರಾಸರಿ ವಾರ್ಷಿಕ ಮಳೆ 2286 ಮಿಮೀ. 1,18,703 ಚ.ಕಿಮೀ ವಿಸ್ತೀರ್ಣವುಳ್ಳ ಅರಣ್ಯವಿದೆ. ಮುಖ್ಯ ಬೆಳೆ ಬತ್ತ. 5440 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಕಬ್ಬು, ತೆಂಗು, ಅಡಿಕೆ, ಯಾಲಕ್ಕಿ, ಮೆಣಸು, ಬಾಳೆ ಇತರ ಬೆಳೆಗಳು. ಅಲ್ಪ ಪ್ರಮಾಣದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಬೇಡ್ತಿನದಿ (ಗಂಗಾವಳಿ) ಈಶಾನ್ಯ ದಿಕ್ಕಿನಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ಕಾಳೀನದಿ ಉತ್ತರ ಮತ್ತು ವಾಯುವ್ಯದ ಗಡಿಯಾಗಿ ಹರಿಯುತ್ತದೆ. ಸುತ್ತಲೂ ಪಟ್ಟಣಗಳಿಗೆ ಮತ್ತು ಕರಾವಳಿ ಬಂದರುಗಳಿಗೆ ಉತ್ತಮ ಮಾರ್ಗಗಳಿದ್ದು ವ್ಯಾಪಾರ, ವಾಣಿಜ್ಯಕ್ಕೆ ಅನುಕೂಲಕರವಾಗಿವೆ. ಪಶ್ಚಿಮದಲ್ಲಿ ಸುಮಾರು 14 ಕಿ.ಮೀ. ದೂರದಲ್ಲಿ ಗಣೇಶ ಗುಡ್ಡ ಘಾಟ್ ಮಾರ್ಗವಿದೆ. ಅಣಸೆ ಮತ್ತು ಅರೆಬೈಲ ಕಣಿವೆ ಮಾರ್ಗಗಳು ಕಾರವಾರ, ಅಂಕೋಲ, ಕುಮಟ, ಹೊನ್ನಾವರಗಳೊಡನೆ ಸಂಪರ್ಕ ಕಲ್ಪಿಸುತ್ತವೆ. ಇಲ್ಲಿರುವ ಸಿದ್ಧಿ ಜನಾಂಗ ಈ ಜಿಲ್ಲೆಯ ವೈಶಿಷ್ಟ್ಯವೆನಿಸಿದೆ.
 
ವಿದೇಶಗಳಿಗೆ ರಫ್ತುಮಾಡಿ ಹಣ ತರುವಂಥ ಮ್ಯಾಂಗನೀಸು ಕಲ್ಲುಗಳು ಬಿಸಗೋಡ. ತಳಕೆಬೈಲಗಳಲ್ಲಿ ದೊರೆಯುತ್ತವೆ. ಚುನಾಹುಕ್ಕಲಿ ಎಂಬಲ್ಲಿ ಸುಣ್ಣದ ಕಲ್ಲುಗಳು ಲಭ್ಯ. ಗಾಜಿನ ಹರಳುಗಳನ್ನು ತಯಾರಿಸಲು ಅನುಕೂಲವಾದ ಮಣ್ಣು ಸಹ ಹುತ್ಕಂಡದ ಸಮೀಪ ದೊರೆಯುವುದೆಂದು ಭೂವಿಜ್ಞಾನ ಸಂಶೋಧನೆಯಿಂದ ತಿಳಿದುಬಂದಿದೆ. ಹಿಂದೆ ಬ್ರಿಟಿಷರು ಬೇಟೆಯಾಡಲು ಬಂದಾಗ ವಾಸಿಸುತ್ತಿದ್ದ ಬಂಗಲೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಅಡವಿಯಲ್ಲಿ ಬಿದಿರು, ಶ್ರೀಗಂಧ ತೇಗ, ಮತ್ತಿ, ಬೀಟೆ, ಹಾಗೂ ಇತರ ಅಮೂಲ್ಯ ವೃಕ್ಷ ಸಂಪತ್ತಿದೆ. ಕಿರಿವತ್ತಿಯ ಕಟ್ಟಿಗೆಯ ಡಿಪೋ ರಾಜ್ಯದಲ್ಲಿಯೇ ಹೆಸರಾದ್ದು. ಕಾಡುಗಳಲ್ಲಿ ಜೇನುತುಪ್ಪ ವಿಪುಲವಾಗಿ ದೊರೆಯುತ್ತದೆ. ವಿಭಾಗೀಯ ಅರಣ್ಯ ಕಚೇರಿಯೂ ಇಲ್ಲಿದೆ. ಅರಣ್ಯ ರಕ್ಷಕರನ್ನು ತರಬೇತಿ ಮಾಡಲು ಯಲ್ಲಾಪುರದಲ್ಲಿ ತರಬೇತಿ ಶಾಲೆ ಇದೆ.
"https://kn.wikipedia.org/wiki/ಯಲ್ಲಾಪುರ" ಇಂದ ಪಡೆಯಲ್ಪಟ್ಟಿದೆ