ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ದಸರ": Excessive vandalism ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ) [ಸ್ಥಳಾಂತರ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿಷ್ಟ))
ಸರಾ-ದಸರಾ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫೫ ನೇ ಸಾಲು:
*10 Oct, 2016
*ದಸರಾ ಕುಸ್ತಿ ಚಟುವಟಿಕೆಗೆ ಅನನ್ಯವಾದ ಸಾಂಸ್ಕೃತಿಕ ಮೆರುಗು ಇರುವಂತೆಯೇ, ಚಾರಿತ್ರಿಕ ಹೆಜ್ಜೆಗುರುತುಗಳಿವೆ. ಭಾರತದ ಮಟ್ಟಿಗೆ ಕುಸ್ತಿ ಕ್ರೀಡೆಗೆ ಬೆನ್ನೆಲುಬಾಗಿ ನಿಂತ ಅನೇಕ ಇತಿಹಾಸ ಪುರುಷರ ನಡುವೆ ಕೃಷ್ಣರಾಜೇಂದ್ರ ಒಡೆಯರ್‌ ಹೆಸರು ಎದ್ದು ಕಾಣುತ್ತದೆ. ಬೆಂಗಳೂರಿನಲ್ಲಿ ದಸರಾ ಕುಸ್ತಿಯನ್ನು ಆರಂಭಿಸಿದ ಕುರಿತ ಚರಿತ್ರೆಯ ಮಾಹಿತಿಗಳ ಬಗ್ಗೆ ವೇಮಗಲ್‌ ಸೋಮಶೇಖರ್‌ ಇಲ್ಲಿ ಬರೆದಿದ್ದಾರೆ.
* ಸರಾದಸರಾ ಉತ್ಸವದ ಪ್ರಯುಕ್ತ ಮೈಸೂರಿನಲ್ಲಿ ನಡೆಯುತ್ತಿದ್ದ ಕುಸ್ತಿ ಚಟುವಟಿಕೆ ಬಹಳ ಹಿಂದೆಯೇ ಬೆಂಗಳೂರಿಗೂ ವಿಸ್ತರಣೆಗೊಂಡಿದೆ. ಅದು 1912ರ ವರ್ಷ. ದಸರಾ ಕುಸ್ತಿಯ ಸ್ವರ್ಧಾಕೂಟಗಳನ್ನು ಬೆಂಗಳೂರಿನಲ್ಲಿಯೂ ನಡೆಸಬೇಕೆಂದು ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಘೋಷಿಸಿದರು. ಅದರ ಮರುವರ್ಷವೇ ಬೆಂಗಳೂರಿನಲ್ಲಿ ದಸರಾ ಕುಸ್ತಿ ರಂಗು ಪಡೆದುಕೊಂಡಿತು.
*
* 1913ರಲ್ಲಿ ನವರಾತ್ರಿ ಮುಗಿದ ಒಡನೇ ಲಾಲ್‌ಬಾಗ್‌ನಲ್ಲಿ ಆಗಿನ ಆಲ್ಬರ್ಟ್‌ ವಿಕ್ಟರ್‌ ಸಭಾಂಗಣದಲ್ಲಿ ದಿನ ಬಿಟ್ಟು ದಿನ ಹೊನಲು ಬೆಳಕಿನಲ್ಲಿ ಒಂದು ತಿಂಗಳ ಕಾಲ ಕುಸ್ತಿ ಸ್ವರ್ಧೆಗಳು ನಡೆದವು. ಆಗಿನ್ನೂ ಲಾಲ್‌ಬಾಗ್‌ ಪ್ರದೇಶಕ್ಕೆ ವಿದ್ಯುಚ್ಛಕ್ತಿ ಸಂಪರ್ಕ ಇರಲಿಲ್ಲ. ಈ ಕುಸ್ತಿಗಾಗಿಯೇ ವಿದ್ಯುಚ್ಛಕ್ತಿಯ ವಿಶೇಷ ಸಂಪರ್ಕ ಕಲ್ಪಿಸಲಾಗಿತ್ತು. ಆ ಕುಸ್ತಿ ಕೂಟದಲ್ಲಿ ಮೈಸೂರು ಸಂಸ್ಥಾನದ ಎಲ್ಲಾ ಪ್ರದೇಶಗಳಿಂದಲೂ ಪೈಲ್ವಾನರು ಪಾಲ್ಗೊಂಡಿದ್ದರು. ಮೈಸೂರಿನ ಆಗಿನ ಜನಪ್ರಿಯ ಪೈಲ್ವಾನ್‌ ತಿಮ್ಮಯ್ಯನವರು ಮತ್ತು ಬೆಂಗಳೂರಿನ ಪುಲಾರಿ ಸಾಬ್ಜಾನ್‌ ಎಂಬುವವರ ನಡುವೆ ಸುಮಾರು 20 ನಿಮಿಷಗಳ ಕಾಲ ಜಿದ್ದಾಜಿದ್ದಿನ ಕುಸ್ತಿ ನಡೆಯಿತು. ಈ ಹಣಾಹಣಿಯನ್ನು ಯುವರಾಜ ನರಸಿಂಹರಾಜ ಒಡೆಯರ್‌ ಅವರು ಆಗಿನ ಬ್ರಿಟಿಷ್‌ ರೆಸಿಡೆಂಟರ ಜತೆ ಕುಳಿತು ವೀಕ್ಷಿಸಿದ್ದರು. '''ಮೈಸೂರಿನ ತಿಮ್ಮಯ್ಯ ಗೆದ್ದಿದ್ದರು'''.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ