ಮೂಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
No edit summary
೧೮ ನೇ ಸಾಲು:
ಮೂಗಿನ ಲೋಳೆಪೊರೆ ಕುಹರ ಭಿತ್ತಿಗಳ ಮೇಲೆ ಹರಡಿ, ಮೂಳೆಮೃದ್ವಸ್ಥಿ ಪರಿವೇಷ್ಟನಗಳಿಗೆ ಅಂಟಿದೆ. ಹೊರ ಹೊಳ್ಳೆಗಳ ಮೂಲಕ ಅದು ಮುಖದ ಚರ್ಮದೊಡನೆಯೂ ಒಳಹೊಳ್ಳೆಗಳ ಮೂಲಕ ಗಂಟಲಿನ ಲೋಳೆಪೊರೆಯೊಡನೆಯೂ ನಾಸಿಕಾಶ್ರುನಾಳದ ಮೂಲಕ ಕಣ್ಣು ಲೋಳೆಪೊರೆಯೊಡನೆಯೂ ನಿರಂತರವಾಗಿದೆ. ನಾಸಿಕ ಮಾರ್ಗಗಳಲ್ಲಿರುವ ರಂಧ್ರಗಳ ಮೂಲಕ ಹಣೆ, ಜಾಲರ, ಜತೂಕ ಮತ್ತು ಮೇಲ್ದವಡೆ ಮೂಳೆಗಳ ಗಾಳಿಗೂಡುಗಳ ಲೋಳೆಪೊರೆಯೊಡನೆ ಅವಿರತವಾಗಿದೆ. ಮೂಗುಗಂಟಲಿನ ಲೋಳೆಪೊರೆ ಮೂಲಕ ನಡುಗಿವಿಯ ಲೋಳೆಪೊರೆಯೊಡನೆ ನಿರಂತರತೆ ಇದೆ. ಮಧ್ಯತಡಿಕೆ ಮೇಲೆ ಲೋಳೆಪೊರೆ ದಪ್ಪವಾಗಿದೆ. ನಾಸಿಕ ಮಾರ್ಗಗಳಲ್ಲಿ ಮತ್ತು ಗಾಳಿಗೂಡುಗಳ ಲೋಳೆಪೊರೆ ತೆಳುವಾಗಿದೆ. ಮೂಗಿನ ಲೋಳೆಪೊರೆಯ ಹೆಚ್ಚು ಭಾಗ ದಪ್ಪವಾಗಿರುವುದರಿಂದ ಅಸ್ಥಿಪಂಜರದಲ್ಲಿರುವುದಕ್ಕಿಂತ ನಾಸಿಕ ಕುಹರಗಳು ಇಕ್ಕಟ್ಟಾಗಿವೆ ಮತ್ತು ಗಾಳಿಗೂಡುಗಳ ರಂಧ್ರಗಳು ಚಿಕ್ಕವಾಗಿವೆ.
 
ಮೂಗಿನ ರಕ್ತಪೂರೈಕೆ ಕಣ್ಗೂಡು ಧಮನಿಯ ಶಾಖೆಗಳಿಂದಾಗುತ್ತದೆ. ಮಲಿನರಕ್ತ ಮುಖದ ಮತ್ತು ಕಣ್ಗೂಡಿನ ಅಭಿಧಮನಿಗಳಿಗೆ ಹೋಗುತ್ತದೆ. 1ನೆಯ ತಲೆನರಗಳು ಮೂಗಿನ ಇಕ್ಕಟ್ಟು ಚಾವಣಿ ಮತ್ತು ಪಕ್ಕಗಳು ವಾಸನೆ ಲೋಳೆಪೊರೆಯಿಂದ ವಾಸನೆ ಮಿದುಳಿಗೆ ಹೋಗುತ್ತವೆ. ಸಾಮಾನ್ಯ ಸಂವೇದನಾ ನರಗಳು 5ನೆಯ ತಲೆನರಗಳ ಶಾಖೆಗಳು. ಇವುಗಳಿಂದ ಮೂಗಿನಲ್ಲಿ ಉರಿ ನೋವುಗಳೇ ಅಲ್ಲದೆ ಪರವಸ್ತುವಿರುವುದು ಕೂಡ ತಿಳಿಯುತ್ತದೆ ಮತ್ತು ಸೀನಿನ ಪ್ರತಿಕ್ರಿಯೆಗೆ ಚೋದನೆಯಾಗುತ್ತದೆ.<ref>[https://kn.wikisource.org/s/1e0p ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೂಗು]</ref>
 
==ಉಲ್ಲೇಖ==
[[ವರ್ಗ:ಶ್ವಾಸೋಚ್ಛ್ವಾಸ ವ್ಯವಸ್ಥೆ]]
"https://kn.wikipedia.org/wiki/ಮೂಗು" ಇಂದ ಪಡೆಯಲ್ಪಟ್ಟಿದೆ