ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಚ್ಚು ಕಟ್ಟಾಗಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೧೭ ನೇ ಸಾಲು:
ವೇದಾಂತದ ಸಂದೇಶಗಳು ಅರ್ಥವಾಗಲು , ಅನುಭವಕ್ಕೆ ಬರಲು ೪ ಯೋಗ್ಯತೆಗಳು ಬೇಕೇ ಬೇಕು- ೧. ನಿತ್ಯಾನಿತ್ಯ ವಸ್ತುವಿವೇಕ, ೨. ಇಲ್ಲಿನ ಮತ್ತು ಪರಲೋಕದ ಫಲ, ಭೋಗಗಳಲ್ಲಿ ವಿರಾಗ, ೩. ಶಮಾದಿ ಸಾಧನ ಸಂಪತ್ತು, ಮತ್ತು ೪. ಮುಮುಕ್ಷುತ್ವ( ನನ್ನ ನಿಜ ಸ್ವರೂಪವನ್ನು ಹೇಗಾದರೂ ತಿಳಿಯಲೇಬೇಕು ಎಂಬ ತವಕ).
== ಮಿಥ್ಯಾವಾದ ==
ಹಾಗಾಗಿ ಬ್ರಹ್ಮ ವಸ್ತುವೊಂದೇ ಸತ್ಯವಾದುದು. ಉಳಿದುದೆಲ್ಲವೂ ಮಿಥ್ಯೆ ಎಂಬುದು ಇದರ ಸಾರ. ವಾಸ್ತವದಲ್ಲಿ ಇಂದ್ರಿಯಗಳಿಗೆ ಗೋಚರವಾಗುವ ಈ ಜಗತ್ತೇ ಮಿಥ್ಯೆ. ಮಾಯೆಯ ಆಟದಿಂದಾಗಿ ವಿಧ ವಿಧವಾಗಿ ಗೋಚರಿಸುವ ಜಗತ್ತಿನ ವಸ್ತುಗಳಿಗೆ ವಾಸ್ತವದಲ್ಲಿ ಪ್ರತ್ಯೇಕ ಅಸ್ತಿತ್ವವೇ ಇಲ್ಲ. ಮಾಯೆಯಿಂದ ಉಂಟಾದ ಈ ಭ್ರಮೆಯ ಮೇಲೆ ಮಾನವನ ಸಂಸಾರ ನಿಂತಿದೆ. ಹುಟ್ಟು, ಸಾವು, ಸಂಬಂಧಗಳು, ಸಂಸರ್ಗಗಳು ,ವಿಯೋಗಗಳು, ಸುಖ, ದು:ಖ, ನೋವು, ನಲಿವು - ಇವೆಲ್ಲವೂ ಈ ಭ್ರಮೆಯಿಂದುಟಾಗುವಭ್ರಮೆಯಿಂದುಂಟಾಗುವ ಮನೋ ವಿಕಾರಗಳು. ಮಾಯೆಯಿಂದುಂಟಾದ ಈ ಮಿಥ್ಯ ಜಗತ್ತಿನಲ್ಲಿ ನಾವು ನಿತ್ಯ ಅನುಭವಿಸುವ ನೋವು, ನಲಿವುಗಳೆಲ್ಲವೂ ನಿಜವಾದುವೆಂಬ ಭ್ರಮೆಯಲ್ಲಿರುವ ಮಾನವನು ಈ ಮಿಥ್ಯ ಜಗತ್ತಿನಲ್ಲಿ ಸುಖ ಕಂಡುಕೊಳ್ಳುವುದೇ ಪರಮ ಪುರುಷಾರ್ಥ ಎಂದು ತಿಳಿದಿರುತ್ತಾನೆ.([[ಆದಿ ಶಂಕರರು ಮತ್ತು ಅದ್ವೈತ]])
== ಅಧ್ಯಾಸ - ಸತ್ತಾ ತ್ರೈವಿಧ್ಯ ==
ಮಾಯೆಯು ನಿಜವೂ ಹೌದು, ನಿಜವಲ್ಲದ್ದೂ ಹೌದು. ವ್ಯಾವಹಾರಿಕ ಜಗತ್ತಿನಲ್ಲಿ ಮಾಯೆಯು ಇರುವ ಕಾರಣ, ಮಾಯೆಯನ್ನು ಪೂರ್ಣತಃ ಸುಳ್ಳೆನ್ನಲಾಗುವುದಿಲ್ಲ. ಆದರೆ ಅದ್ವೈತದ ಜ್ಞಾನವುಂಟಾದ ಮೇಲೆ, ಈ ಮಾಯೆಯು ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ, ಮಾಯೆಯು ಪರಮ ಸತ್ಯವಾಗಲಾರದು. ಹಾಗಾಗಿ ಶಂಕರರು ಮಾಯೆಯ ಸ್ವರೂಪವನ್ನು ವಿವರಿಸುವಾಗ 'ಅಧ್ಯಾಸ'ವನ್ನು ವಿವರಿಸುತ್ತಾರೆ. ಅಧ್ಯಾಸವೆಂದರೆ ಒಂದು ಇನ್ನೊಂದರ ಮೇಲೆ ಆರೋಪಗೊಳ್ಳುವುದು (Superimposition). ಮಾಯೆಯಿಂದುಟಾದ ಈ ಅಧ್ಯಾಸದಿಂದಾಗಿ ಜಗತ್ತಿನಲ್ಲಿ ಪರಬ್ರಹ್ಮ ವಸ್ತುವು ನಾನಾ ರೂಪಗಳಲ್ಲಿಯೂ ನಾನಾ ವಿಧಗಳಲ್ಲಿಯೂ ಕಂಡುಬರುತ್ತದೆ. ಈ ಅಧ್ಯಾಸದಿಂದಾಗಿ ನಿಜ ಪರಬ್ರಹ್ಮ ವಸ್ತುವಿನ ಬಗ್ಗೆ ತಿಳಿದುಕೊಳ್ಳಲು ತೊಡಕಾಗಿರುತ್ತದೆ. ಹಾಗಾಗಿ ಜಗತ್ತಿನಲ್ಲಿ ಕಾಣುವ ವಸ್ತು ಬಾಹುಳ್ಯವೇ ಸತ್ಯವಾದುದೆಂದು ಗೋಚರವಾಗುತ್ತದೆ.
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ