ಗುಜರಾತಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಾಙ್ಮಯ-ವಾಂಙ್ಮಯ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಬರೆಹ-ಬರಹ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೨ ನೇ ಸಾಲು:
ವಾಂಙ್ಮಯ ಮತ್ತು ವೈಚಾರಿಕ ಗದ್ಯ ಸಾಹಿತ್ಯದ ದೃಷ್ಟಿಯಿಂದ ಆಧುನಿಕ ಗುಜರಾತಿ ಸಾಹಿತ್ಯ ಸಮೃದ್ಧವಾಗಿವೆ. ಇದರ ಸಾಹಿತ್ಯಿಕ ಪರಂಪರೆಯ ಇತಿಹಾಸ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಉಪದೇಶಾತ್ಮಕ ಗದ್ಯ ಹಾಗೂ ಭಾವಗೀತಾತ್ಮಕ ಮತ್ತು ಪ್ರಶಂಸಾತ್ಮಕ (ಅಥವಾ ಮಾಗಧ) ಪದ್ಯ ರೂಪದ ರಚನೆಗಳು ಈ ಹಂತದಲ್ಲಿ ಕಾಣದೊರೆಯುತ್ತವೆ.
==ಲಿಪಿ==
[[ಗುಜರಾತಿ ಲಿಪಿ]] [[ದೇವನಾಗರಿ ಲಿಪಿ]]ಯ ಸುತ್ತು ಬರೆಹದಬರಹದ ರೂಪದ್ದಾಗಿದ್ದು, ಕಳೆದ ಆರೇಳು ಶತಮಾನಗಳಿಂದಲೂ ಪಶ್ಚಿಮ ಭಾರತದಲ್ಲಿ (ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ) ಬಳಕೆಯಲ್ಲಿತ್ತು. ಇದನ್ನು ಮಹಾಜನಿ ಎಂದು ಕರೆಯುತ್ತಾರೆ. ಇದರ ವರ್ಣಮಾಲೆ ಸಂಸ್ಕತಜನ್ಯವಾಗಿದ್ದು, ಅಕ್ಷರಗಳ ಆಕಾರ ದೇವನಾಗರಿಯನ್ನು ತುಂಬ ನಿಕಟವಾಗಿ ಹೋಲುತ್ತದೆ.
==ಭಾಷಾವರ್ಗ==
ಗುಜರಾತಿನ ಇಂಡೋ-ಯೂರೋಪಿಯನ್ (ಭಾರೋಷೀಯ) ಭಾಷಾ ಪರಿವಾರದ ಇಂಡೋ-ಇರಾನಿಯನ್ (ಭಾರತೀಯ ಇರಾನಿ) ಉಪವರ್ಗದ ಇಂಡೋ-ಆರ್ಯನ್ (ಭಾರತೀಯ-ಆರ್ಯ) ಶಾಖೆಗೆ ಸೇರಿದ. ಇಂಡೋ-ಆರ್ಯನ್ ಶಾಖೆಯ ಎರಡು ಮುಖ್ಯಕವಲುಗಳು (ಉತ್ತರದ ಕವಲು-ಪಹಾಡಿ. [[ಪಂಜಾಬಿ]], ಲಹಂದ, ಸಿಂಧಿ, ಕಚ್ಛಿ; ಪೂರ್ವದ ಕವಲು-ಬಂಗಾಳಿ ಅಸ್ಸಾಮಿ ಮತ್ತು ಒರಿಯ) ಬೇರ್ಪಟ್ಟ ತರುವಾಯ ಪಶ್ಚಿಮ, ದಕ್ಷಿಣ ಮತ್ತು ನಡುವಣ ಶಾಖೆಗಳು ಮತ್ತೆ ಕವಲೊಡೆದವು. ದಕ್ಷಿಣದ ಭಾಷೆಗಳ (ಮರಾಠಿ-ಕೊಂಕಣಿ) ಬೇರ್ಪಡೆಯನ್ನು ಹಿಂಬಾಲಿಸಿ, ಪಶ್ಚಿಮದ ಭಾಷೆಗಳೂ (ಗುಜರಾತಿ, ರಾಜಸ್ಥಾನಿ, ಭೀಲಿ) ನಡುವಣ ವಲಯದ (ಪಶ್ಚಿಮ ಹಿಂದಿ) ಭಾಷೆಗಳಿಂದ ಬೇರ್ಪಟ್ಟವು. ನಡುವಣ ವಲಯದಲ್ಲಿ ನಾಮವಾಚೀ ಏಕವಚನ ಪುಲ್ಲಿಂಗದ ಆ ಕಾರಾಂತ್ಯದ ರೂಪದಲ್ಲೂ ಪಶ್ಚಿಮ ವಲಯದಲ್ಲಿ ಓ ಕಾರಾಂತ್ಯದ ರೂಪದಲ್ಲೂ ಈ ಬೇರ್ಪಡೆ ಎದ್ದು ಕಾಣುತ್ತದೆ. ಹೀಗಾಗಿ ಪಶ್ಚಿಮ ಮಲಯದಲ್ಲಿ ಘೋಡ (ಕುದುರೆ) ರೂಪವೂ ಗುಜರಾತಿಯಲ್ಲಿ ಘೋಡೊ ರೂಪವೂ ಕಾಣದೊರೆಯುತ್ತವೆ. ಪಶ್ಚಿಮ ಮತ್ತು ದಕ್ಷಿಣ ವರ್ಗದ ಭಾಷೆಗಳೂ ನಪುಂಸಕ ಲಿಂಗವನ್ನು ಉಳಿಸಿಕೊಂಡಿವೆ. ಪಶ್ಚಿಮ ವಲಯದ ಭಾಷೆಗಳಲ್ಲಿ ಮೊದಲಿಗೆ ಭೀಲಿಯೂ ಅನಂತರದಲ್ಲಿ ಗುಜರಾತಿ ಹಾಗೂ ರಾಜಸ್ಥಾನದ ಉಪಭಾಷೆಗಳೂ ಬೇರ್ಪಡುತ್ತವೆ.
"https://kn.wikipedia.org/wiki/ಗುಜರಾತಿ_ಭಾಷೆ" ಇಂದ ಪಡೆಯಲ್ಪಟ್ಟಿದೆ