ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಸ್ಯ ಕಾಂಡ
 
ಪಾರ್ಶ್ವ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
[[ಚಿತ್ರ:Polygonum_amphibium_(4973671699).jpg|thumb]]
 
'''ಕಾಂಡ'''ವು ಸಾಮಾನ್ಯವಾಗಿ ಮೇಲ್ಮುಖವಾಗಿ ಭೂಮಿಯ ಮೇಲೆ ಬೆಳೆಯುವ ಸಸ್ಯಭಾಗ ಅಥವಾ ಅಕ್ಷ (ಸ್ಟೆಮ್; ಅಸೆಂಡಿಂಗ್ ಆಕ್ಸಿಸ್). ಇದು ಬೀಜದ ಒಳಗಿರುವ ಪ್ರಥಮಾಂಕುರದಿಂದ (ಪ್ಲೂಮ್ಯೂಲ್) ಬೆಳೆಯ ತೊಡಗುತ್ತದೆ. ನೀರು ಮತ್ತು ಗುರುತ್ವಗಳಿಗೆ ವಿಮುಖವಾಗಿಯೂ ಬೆಳಕಿಗೆ ಅಭಿಮುಖವಾಗಿಯೂ ಬೆಳೆಯುವ ಗುಣ ಇದಕ್ಕೆ ಉಂಟು. ಕಾಂಡದಲ್ಲಿ ಸಾಮಾನ್ಯವಾಗಿ ಒಂದು ಪ್ರಮುಖ ಕಾಂಡ ಅಥವಾ ಅಕ್ಷ ಎಂಬ ಭಾಗವೂ ಅದರ ಮೇಲೆ ಹಲವಾರು ಪಾಶ್ರ್ವಶಾಖೆ ಪಾರ್ಶ್ವ ಶಾಖೆ ಅಥವಾ ಕೊಂಬೆಗಳೂ ಇವೆ. ಈ ಕೊಂಬೆಗಳ ಮೇಲೆ ಅಲ್ಲಲ್ಲೇ ಅಸಂಖ್ಯ ಎಲೆಗಳು, ಗಾಳಿ ಮತ್ತು ಬೆಳಕನ್ನು ಸಮರ್ಪಕವಾಗಿ ಸ್ವೀಕರಿಸುವಂತೆ ಜೋಡಣೆಯಾಗಿವೆ. ಎಲೆಗಳ ಜೊತೆಗೆ ಹೂ, ಮೊಗ್ಗು, ಕಾಯಿಗಳೂ ಇವೆ. ಎಲೆಗಳು ಪೋಷಕಾಂಗಗಳಾಗಿಯೂ ಹೂಗಳು ಸಂತಾನವೃದ್ಧಿಯ ಅಂಗಗಳಾಗಿಯೂ ಕಾಯಿಗಳು ಪ್ರಸಾರಸಾಧನಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ ಸಾಮಾನ್ಯವಾಗಿ ಎಳೆಯ ಕಾಂಡ ಮತ್ತು ಕೊಂಬೆಗಳು ಹಸಿರಾಗಿಯೂ ವಯಸ್ಸಾದ ಕಾಂಡ ಮತ್ತು ಕೊಂಬೆಗಳು ಕಂದುಬಣ್ಣವುಳ್ಳವೂ ಆಗಿರುತ್ತವೆ. ಮುಖ್ಯಕಾಂಡ, ಅದರ ಶಾಖೋಪಶಾಖೆಗಳು, ಅವುಗಳ ಮೇಲಿರುವ ಎಲೆ, ಹೂ, ಕಾಯಿ, ಬೀಜಗಳೆಲ್ಲ ಕೂಡಿರುವುದಕ್ಕೆ ಪ್ರಕಾಂಡಕ್ರಮ (ಶೂಟ್ ಸಿಸ್ಟಮ್) ಎನ್ನಲಾಗುತ್ತದೆ.
 
ವಿವಿಧ ಭಾಗಗಳು: ಯಾವುದೇ ಒಂದು ಗಿಡದ (ಉದಾ: ದಾಸವಾಳ, ಸೂರ್ಯಕಾಂತಿ, ಆಲ ಇತ್ಯಾದಿ) ಎಳೆಯಕಾಂಡ ಅಥವಾ ಕೊಂಬೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರ ಮೇಲೆ ಅಲ್ಲಲ್ಲೇ ಎಲೆ, ಮೊಗ್ಗುಗಳಿರುವುದು ಕಂಡುಬರುತ್ತದೆ. ಎಲೆಗಳು ಕಾಂಡದಮೇಲೆ ಹುಟ್ಟುವ ಒಂದೊಂದು ನಿರ್ದಿಷ್ಟ ಜಾಗಕ್ಕೆ ಗಿಣ್ಣು (ನೋಡ್) ಎಂದು ಹೆಸರು. ಎರಡು ಗಿಣ್ಣುಗಳ ನಡುವಿನ ಭಾಗಕ್ಕೆ ಅಂತರಗಿಣ್ಣು (ಇಂಟರ್ ನೋಡ್) ಎಂದು ಹೇಳುವುದುಂಟು. ಸಾಮಾನ್ಯವಾಗಿ ಒಂದೊಂದು ಗಿಣ್ಣಿನಿಂದ ಒಂದು, ಎರಡು ಅಥವಾ ಹಲವಾರು ಎಲೆಗಳು ಹುಟ್ಟಬಹುದು. ಕಾಂಡ ಮತ್ತು ಎಲೆಯ ನಡುವೆ ಉಂಟಾಗುವ ಕೋನಕ್ಕೆ ಪತ್ರಕಕ್ಷ ಅಥವಾ ಎಲೆಯ ಕಂಕುಳು (ಆಕ್ಸಿಲ್) ಎನ್ನಲಾಗುತ್ತದೆ. ಸಾಧಾರಣವಾಗಿ ಪ್ರತಿ ಎಲೆಯ ಕಂಕುಳಲ್ಲಿ ಒಂದು ಮೊಗ್ಗು ಮತ್ತು ಕಾಂಡದ ಅಥವಾ ರೆಂಬೆಯ ತುದಿಯಲ್ಲಿ ಒಂದು ಮೊಗ್ಗು ಇರುತ್ತವೆ. ಎಲೆಯ ಕಂಕುಳಲ್ಲಿನ ಮೊಗ್ಗಿಗೆ ಕಕ್ಷ ಅಥವಾ ಕಂಕುಳು ಮೊಗ್ಗು (ಆಕ್ಸಿಲರಿ ಬಡ್) ಎಂದೂ ಕಾಂಡದ ತುದಿಯಲ್ಲಿನ ಮೊಗ್ಗಿಗೆ ತುದಿಮೊಗ್ಗು (ಟರ್ಮಿನಲ್ ಅಥವಾ ಏಪಿಕಲ್ ಬಡ್) ಎಂದೂ ಹೆಸರು. ಈ ಮೊಗ್ಗುಗಳ ಅಗ್ರಭಾಗದ ಸುತ್ತ ಯಾವ ಬಗೆಯ ರಕ್ಷಣಾಕವಚವೂ ಇಲ್ಲ. ಆದರೆ ಅದರಿಂದಲೇ ಹುಟ್ಟುವ ಸಣ್ಣ ಎಲೆಗಳೇ ಅದನ್ನು ಸುತ್ತುವರಿದು ಮೊಗ್ಗಿಗೆ ರಕ್ಷಣೆಯನ್ನು ನೀಡುತ್ತವೆ.  ಸಾಮಾನ್ಯವಾಗಿ ಕಾಂಡದ ಹೊರಮೈ ಹಲವು ಬಗೆಯ ರೋಮಗಳಿಂದ ಆವೃತವಾಗಿದೆ. ಇವೆಲ್ಲವೂ ಬಹುಕೋಶಮಯ ರೋಮಗಳು. ಕಾಂಡದಿಂದ ಬೆಳೆಯುವ ರೆಂಬೆಗಳು ಕಾಂಡದ ಹೊರಮೈಯಿಂದಲೇ ಉದ್ಭವಿಸುತ್ತವೆ (ಎಕ್ಸೊಜೀನಸ್).
೭ ನೇ ಸಾಲು:
ನಮೂನೆಗಳು: ಕಾಂಡ ಮೃದು ಅಥವಾ ಮಾಂಸಲವಾಗಿಯೋ ದುಂಡು ಅಥವಾ ಚಚ್ಚೌಕಾರವಾಗಿಯೋ ನುಣುಪು ಅಥವಾ ರೋಮಮಯವಾಗಿಯೋ ಇರಬಹುದು. ಭೂಮಿಯೊಳಗಿನ ಪರಿಸ್ಥಿತಿಗಿಂತ ಭೂಮಿಯ ಮೇಲಿನ ಸನ್ನಿವೇಶಗಳು ಹೆಚ್ಚು ವೈಪರೀತ್ಯಗಳಿಗೆ ಒಳಗಾಗುವುದರಿಂದ ಭೂಮಿಯ ಮೇಲೆ ಬೆಳೆಯುವ ಕಾಂಡ ಆಕಾರ, ರಚನೆ, ಗಾತ್ರ ಇತ್ಯಾದಿಗಳ ವಿಷಯದಲ್ಲಿ ಅನೇಕ ಭಿನ್ನತೆ, ಬದಲಾವಣೆಗಳನ್ನು ಹೊಂದುವುದು ಸಹಜ.  ಸ್ವಭಾವ ಅಥವಾ ಬೆಳೆವಣಿಗೆಗೆ ಅನುಗುಣವಾಗಿ ಕಾಂಡವನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು: 1 ನೇರವಾಗಿ ಎತ್ತರ ಬೆಳೆಯುವ ಸಬಲ ಕಾಂಡಗಳು; 2 ನೆಲದಮೇಲೆ ಹಬ್ಬಿಯೊ ಅಥವಾ ಆಶ್ರಯಗಳ ಮೇಲೇರಿಕೊಂಡೊ ಬೆಳೆಯುವ ದುರ್ಬಲಕಾಂಡಗಳು. ಈ ಎರಡು ಬಗೆಯ ಕಾಂಡಗಳಲ್ಲೂ ಮತ್ತೆ ಹಲವಾರು ವಿಧಗಳುಂಟು.
 
1 ಸಬಲ ಕಾಂಡಗಳು, (ಎ) ಪರ್ಣಾಕ್ಷ (ಕಾಡೆಕ್ಸ್): ದಪ್ಪ ಕೊಳವೆಯಂತೆ ಎತ್ತರವಾದ ಮತ್ತು ಟಿಸಿಲೋಡೆಯದೆಟಿಸಿಲೊಡೆಯದೆ ಬೆಳೆಯುವ ಕಾಂಡ ಇದು. ಇದರ ಮೇಲೆಲ್ಲ ಉದುರಿಬಿದ್ದ ಎಲೆಗಳ ಕಲೆ ಇರುತ್ತದೆ. ಉದಾಹರಣೆ-ತೆಂಗು, ಅಡಿಕೆ ಇತ್ಯಾದಿ.
 
(ಬಿ) ಗಿಣ್ಣುಕಾಂಡ (ಕಲ್ಮ್): ಕಾಂಡ ಅನೇಕ ಉಂಗುರಗಳಂಥ ಗಿಣ್ಣುಗಳಿಂದ ಜೋಡಿಸಲ್ಪಟ್ಟಂತಿದ್ದು ಗಿಣ್ಣಿನ ಒಳಭಾಗ ಕೋಶಮಯವಾಗಿಯೂ ಅಂತರಗಿಣ್ಣಿನ ಭಾಗ ಪೊಳ್ಳಾಗಿಯೂ ಇವೆ. ಉದಾಹರಣೆ-ಬಿದಿರು.
 
(ಸಿ) ಪುಷ್ಪದಂಡ (ಸ್ಕೇಪ್): ಕೆಲವು ಐಕದಳ ಬೀಜ ಸಸ್ಯಗಳಲ್ಲಿ ಮುಖ್ಯ ಕಾಂಡ ನೆಲದೊಳಗೇ ಹುದುಗಿರುತ್ತದೆ. ಎಲೆಗಳು ನೆಲದಿಂದಲೇ ಹುಟ್ಟುವಂತೆ ಕಾಣುತ್ತವೆ. ಹೂ ಬಿಡುವಾಗ ಒಮ್ಮೊಮ್ಮೆ ಭೂಮಿಯೊಳಗಿನಿಂದ ಒಂದು ದಪ್ಪ ದಂಟು ಹೊರಬಂದು, ಅದರ ತುದಿಯಲ್ಲಿ ಹೂವೋ ಹೂಗೊಂಚಲೋ ಕಾಣಿಸಿಕೊಂಡು, ಕೆಲಕಾಲದ ಅನಂತರ ಬಿದ್ದು ಹೋಗುತ್ತದೆ. ಇಂಥ ಕಾಂಡಕ್ಕೆ ಪುಷ್ಪದಂಡ ಎಂದು ಹೆಸರು. ಉದಾಹರಣೆ-ಈರುಳ್ಳಿ, ಕತ್ತಾಳೆಕಿತ್ತಳೆ ಇತ್ಯಾದಿ.
 
2 ದುರ್ಬಲ ಕಾಂಡಗಳು. (ಎ) ಭೂಶಾಯಿ ಕಾಂಡ (ಪ್ರಾಸ್ಟ್ರೇಟ್): ಕಾಂಡ ನೆಲದ ಮೇಲೆ ಚಪ್ಪಟೆಯಾಗಿ ಹರಡಿಕೊಂಡಿರುತ್ತದೆ. ಉದಾಹರಣೆ-ಒಂದೆಲಗ (ಹೈಡ್ರೋಕಾಟೈಲ್ ಏಷ್ಯಾಟಿಕ), ಪುಲ್ಲಂಪಚ್ಚಿ (ಆಕ್ಸಾಲಿಸ್) ಇತ್ಯಾದಿ.
೨೩ ನೇ ಸಾಲು:
(ಇ) ಸುತ್ತುಬಳ್ಳಿ (ಟ್ವೈನರ್): ಇಡೀ ಕಾಂಡವೇ ಒಂದು ಆಶ್ರಯಕ್ಕೆ ಬಳ್ಳಿಯಂತೆ ಸುತ್ತಿಕೊಂಡು ಬೆಳೆಯುತ್ತದೆ. ಅದರಲ್ಲಿ ಹಿಡಿತ ಅಥವಾ ಆಧಾರಕ್ಕೆ ಯಾವುದೇ ಬಗೆಯ ಉಪಾಂಗಗಳಿಲ್ಲ. ಉದಾಹರಣೆ-ಶಂಖಪುಷ್ಪ (ಕ್ಲೈಟೋರಿಯ), ಗುಲಗಂಜಿ ಅವರೆ ಇತ್ಯಾದಿ.
 
(ಫ್) ಏರು ಬಳ್ಳಿ (ಕ್ಲೈಂಬರ್): ಕಾಂಡ ಕೊಕ್ಕೆ, ನುಲಿಕುಡಿ (ಟೆಂಡ್ರಿಲ್) ಮುಂತಾದ ವಿಶಿಷ್ಟ ಉಪಾಂಗಗಳ ಸಹಾಯದಿಂದ ಸಮೀಪದ ಆಶ್ರಯಗಳ ಮೇಲೇರಿ ಬೆಳೆಯುವುದು. ಉದಾಹರಣೆ-ವೀಳೆಯದೆಲೆಬಳ್ಳಿ, ಮೆಣಸಿನಬಳ್ಳಿ, ಕುಂಬಲಕುಂಬಳ ಬಳ್ಳಿ, ಬೆತ್ತ ಇತ್ಯಾದಿ.
 
ಕವಲೊಡೆಯುವಿಕೆ: ಕಾಂಡದ ಮೇಲೆ ಶಾಖೋಪಶಾಖೆಗಳು ಹರಡಿಕೊಳ್ಳುವ ಬಗೆಗೆ ಕವಲೊಡೆಯುವಿಕೆಯೆಂದು ಹೆಸರು. ಇದರಲ್ಲಿ ಎರಡು ಮುಖ್ಯ ವಿಧಾನಗಳು.
೨೯ ನೇ ಸಾಲು:
1 ಪಾಶ್ರ್ವ ಕವಲುಗಳು (ಲ್ಯಾಟರಲ್ ಬ್ರ್ಯಾಂಚಸ್);   ಎರಡು ಯುಗ್ಮಶಾಖೆಗಳು (ಡೈಕಾಟಮಸ್ ಬ್ರ್ಯಾಂಚಸ್).
 
1 ಮುಖ್ಯಕಾಂಡದ ಮಗ್ಗುಲಿನಿಂದ ಹೊರಡುವ ಶಾಖೆಗಳಿಗೆ ಪಾಶ್ರ್ವಕವಲುಗಳೆಂದುಪಾರ್ಶ್ವ ಕವಲುಗಳೆಂದು ಹೆಸರು. ಈ ಪಾಶ್ರ್ವಕವಲುಪಾರ್ಶ್ವ ಕವಲು ಅನಿರ್ಬಂಧಿತ ಬೆಳೆವಣಿಗೆ ಹೊಂದಿ ಕೇಂದ್ರಾಭಿಗಾಮಿಯಾಗಿ (ಸೆಂಟ್ರಿಪೀಟಲ್) ಇರಬಹುದು. ಅಂದರೆ ಮುಖ್ಯಕಾಂಡದ ತುದಿ ನಿರಂತರವಾಗಿ ಎತ್ತರ ಬೆಳೆಯುತ್ತಿದ್ದಂತೆ ವಿವಿಧ ಹಂತಗಳಲ್ಲಿ ಕೆಳಗಿನ ಪಾಶ್ರ್ವಶಾಖೆಗಳೂಪಾರ್ಶ್ವಶಾಖೆಗಳೂ ಅಡ್ಡಡ್ಡಲಾಗಿ ಬೆಳೆಯುತ್ತ ಹೋಗುತ್ತವೆ. ಅತ್ಯಂತ ಕೆಳಗಿನ ಶಾಖೆಗಳು ಹಳೆಯವೂ ಉದ್ದವೂ ಆಗಿದ್ದು ಮೇಲಿನ ಶಾಖೆಗಳು ಹೊಸವೂ ಕಿರಿಯವೂ ಆಗಿರುತ್ತವೆ. ಉದಾಹರಣೆ-ಸರ್ವೆಗಿಡ, ಅಶೋಕ ಅಥವಾ ಕಂಬದಮರ ಇತ್ಯಾದಿ. ಇದರಿಂದ ಮರದ ಮೇಲ್ಭಾಗ ತ್ರಿಕೋನ ಇಲ್ಲವೆ ಪಿರಮಿಡ್ಡಿನ ಆಕೃತಿ ತಾಳುತ್ತದೆ. ಅಥವಾ ನಿರ್ಬಂಧಿತ ಬೆಳೆವಣಿಗೆ ಹೊಂದಿ ಕೇಂದ್ರಾಪಗಾಮಿಯಾಗಿ (ಸೆಂಟ್ರಿಫ್ಯೂಗಲ್) ಇರಬಹುದು; ಅಂದರೆ ಮುಖ್ಯ ಕಾಂಡ ಕೆಲಕಾಲ ತುದಿಮೊಗ್ಗಿನ ಸಹಾಯದಿಂದ ಬೆಳೆದ ಮೇಲೆ ಅದರ ಬೆಳೆವಣಿಗೆ ನಿಂತುಹೋಗುತ್ತದೆ. ಆಗ ಕಾಂಡದ ಕೆಳಭಾಗದಿಂದ ಹಲವಾರು ದಪ್ಪಶಾಖೆಗಳು ಹೊರಚಾಚಿ ಬೆಳೆಯುತ್ತ ಸಾಗುವುದುಂಟು. ಇದರಿಂದ ಮರದ ಮೇಲ್ಭಾಗ ಅರ್ಧಗೋಳಾಕೃತಿ ತಾಳುತ್ತದೆ. ಉದಾಹರಣೆ-ಮಾವು, ಬೇವು, ಹುಣಸೆ ಇತ್ಯಾದಿ. ಅದರಲ್ಲಿ ಮತ್ತೆ ತುದಿಮೊಗ್ಗು ಬೆಳೆಯುವ ಕ್ರಮಕ್ಕೆ ಅನುಗುಣವಾಗಿ ಏಕಶಾಖೀ (ಯೂನಿಪೇರಡ್) ದ್ವಿಶಾಖೀ (ಬೈಪೇರಸ್) ಎಂದೂ ಏಕಶಾಖಿಯಲ್ಲಿ ಸರ್ಪಿಲ (ಹೆಲಿಕಾಯಿಡ್) ವೃಶ್ಚಿಲ (ಸ್ಕಾರ್ಪಿಯಾಯಿಡ್) ಶಾಖೆಗಳೆಂದೂ ಹಲವಾರು ಬಗೆಯ ಮಾರ್ಪಾಡುಗಳು ಉಂಟು.
 
2 ಯುಗ್ಮಶಾಖೆ: ಇಲ್ಲಿ ತುದಿಮೊಗ್ಗು ಇಬ್ಭಾಗವಾಗಿ ಎರಡೂ ಕಡೆ ಏಕಪ್ರಕಾರವಾಗಿ ಬೆಳೆಯುತ್ತದೆ. ಕ್ರಮೇಣ ಆ ಶಾಖೆಗಳ ತುದಿಮೊಗ್ಗು ಇದೇ ಕ್ರಮವನ್ನು ಅನುಸರಿಸುತ್ತದೆ. ಇದಕ್ಕೆ ಯುಗ್ಮಶಾಖೆ ಎಂದು ಹೆಸರು. ಇದು ಕೇದಿಗೆ (ಪಾಂಡಾನಸ್) ಮತ್ತು ತೆಂಗಿನ ಗಿಡದಂತಿರುವ ಹೈಫಿನೇ ಎಂಬ ಜಾತಿಗಳಲ್ಲಿ ಅಪೂರ್ವವಾಗಿ ಕಂಡು ಬರುತ್ತದೆ.
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ