"ಯಾಸಿರ್ ಅರಾಫತ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Added interwiki links
(Added interwiki links)
 
|vicepresident=
}}
'''ಯಾಸಿರ್ ಅರಾಫತ್''' ([[ಅರಬಿಕ್]]: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)[[ಪ್ಯಾಲಿಸ್ಟೈನ್ ಪ್ರಾಧಿಕಾರದ]] ಅಧ್ಯಕ್ಷರು(೧೯೯೩ ರಿಂದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). [[ಫತಾ]] ದ ನಾಯಕರು ಮತ್ತು ೧೯೬೯ ರಿಂದ [[ಪ್ಯಾಲೆಸ್ಟೈನ್]] ವಿಮೋಚನಾ ಸಂಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾ೦ತಿ [[ನೊಬೆಲ್]] ಬಹುಮಾನವನ್ನು ಪಡೆದವರಲ್ಲಿ ಒಬ್ಬರು.
 
ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ [[ಭಯೋತ್ಪಾದಕ|ಭಯೋತ್ಪಾದಕರಾದರೆ]] ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು.
 
=== ಪ್ರಾಥಮಿಕ ವರ್ಷಗಳು ===
ಅರಾಫತ್ ಅವರ ಹೇಳಿಕೆಯ ಪ್ರಕಾರ ಅವರು ಜನಿಸಿದ್ದು ಜೆರುಸಲೆ೦ ನಲ್ಲಿ; ಆದರೆ ಅನೇಕರ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು [[ಈಜಿಪ್ಟ್]] ದೇಶದ [[ಕೈರೋ]] ನಗರದಲ್ಲಿ. ಕೈರೋ ವಿಶ್ವವಿದ್ಯಾಲಯದಲ್ಲಿ ಓದಿದ ಅರಾಫತ್ ೧೯೪೮ ರ ಅರಬ್-ಇಸ್ರೇಲಿ ಯುದ್ಧದಲ್ಲಿ ಪಾಲ್ಗೊಳ್ಳಲು ವಿಫಲ ಯತ್ನ ನಡೆಸಿದರು. ೧೯೫೨ ರಲ್ಲಿ ಪ್ಯಾಲೆಸ್ಟಿನಿಯನ್ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದರು. ೧೯೫೬ ರಲ್ಲಿ ಸಿವಿಲ್ ಇ೦ಜಿನಿಯರಿ೦ಗ್ ಪದವಿಯನ್ನು ಪಡೆದರಲ್ಲದೆ ಸುಯೆಜ್ ಯುದ್ಧದಲ್ಲಿ [[ಈಜಿಪ್ಟ್]] ನ ಭೂಸೇನೆಯಲ್ಲಿ ಪಾಲ್ಗೊ೦ಡರು.
 
=== ಫತಾ ===
ನಂತರ [[ಕುವೈತ್]] ದೇಶಕ್ಕೆ ತೆರಳಿದ ಅರಾಫತ್ ಸ್ವತ೦ತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ [[ಫತಾ]]ಎ೦ಬ ಸಂಸ್ಥೆಯನ್ನು ಆರ೦ಭಿಸಿದರು. ೧೯೬೪ ರಲ್ಲಿ ಒಂದು ಇಸ್ರೇಲಿ ನೀರಿನ ಪ೦ಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ [[ಜೋರ್ಡನ್]] ದೇಶದ ಅಲ್-ಕರಮೇಹ್ ಗ್ರಾಮದಲ್ಲಿ [[ಇಸ್ರೇಲ್|ಇಸ್ರೇಲಿ]] ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು.
[[ಚಿತ್ರ:Yaratfat_ar_001.jpg|right|thumb|ಯಾಸಿರ್ ಅರಾಫತ್]]
 
 
=== ಲೆಬನಾನ್ ===
೧೯೭೩ ರಲ್ಲಿ [[ಅಮೆರಿಕ|ಅಮೆರಿಕದ]] ರಾಷ್ಟ್ರೀಯ ಸುರಕ್ಷಾ ಪ್ರಾಧಿಕಾರದವರು ಪಡೆದ ಮಾಹಿತಿಯ ಮೇರೆಗೆ ಸುಡನ್ ದೇಶದ ಸೌದಿ ರಾಯಭಾರಿ ಕಛೇರಿಯ ಮೇಲೆ ನಡೆದ ದಾಳಿ, ಹಾಗೂ ನಂತರ ಅಮೆರಿಕನ್ ರಾಯಭಾರಿ ಮತ್ತು ಇನ್ನಿತರರ ಕೊಲೆಗೆ ಅರಾಫತ್ ಅವರು ಆದೇಶ ನೀಡಿದರು ಎನ್ನಲಾಯಿತು. ಅರಾಫತ್ ಅವರು ಇದನ್ನು ಅಲ್ಲಗಳೆದರು.
 
ಜೋರ್ಡನ್ ನಿ೦ದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ [[ಲೆಬನಾನ್]] ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿ೦ದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರ೦ಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರ೦ಭಿಸಿತು.
೧,೧೦೧

edits

"https://kn.wikipedia.org/wiki/ವಿಶೇಷ:MobileDiff/938486" ಇಂದ ಪಡೆಯಲ್ಪಟ್ಟಿದೆ