ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಭಿನಯವನ್ನು ಸೇರಿಸಲಾಯಿತು
ಚುಟುಕಾದ ಬದಲಾವಣೆ
೨ ನೇ ಸಾಲು:
{{Refimprove}}
{{Merge|[[ಭರತ ನಾಟ್ಯಂ]]}}
:'''ಭರತನಾಟ್ಯ'''ವು [[ದಕ್ಷಿಣ ಭಾರತ]]ದ ಒಂದು ಪಾರಂಪರಿಕ [[ನೃತ್ಯ]] ಕಲೆ. [[ಭರತಮುನಿ]]ಯಿಂದ ರಚಿಸಲ್ಪಟ್ಟ ''[[ನಾಟ್ಯ ಶಾಸ್ತ್ರ]]'' ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು [["ಆಡಿದನೋ ರಂಗ "]] ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.
[[ಚಿತ್ರ:Indian-dancer-nataraja.png|thumb|ಭರತನಾಟ್ಯದ ಭಂಗಿ]]
==ಭರತ ಪದದ ಅರ್ಥ==
:ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.
===ಶ್ಲೋಕ===
:ಭಕಾರೋ ಭಾವಸಂಯುಕ್ತೋ, ರೇಕೋ ರಾಗೇಣ ಸಂಶ್ರೀತಃ, ತಕಾರಸ್ ತಾಳ ಇತ್ಯಾಹುಹು ಭರತಾರ್ಥ ವಿಚಕ್ಶಣೈ ಹಿ
==ಹಿನ್ನೆಲೆ==
 
 
 
*ಪ್ರಾಚೀನ ಕಾಲದಲ್ಲಿ ಭರತ ನಾಟ್ಯಂನ್ನು ದೇವಾಲಯಗಳಲ್ಲಿ (ದೇವಸ್ಥಾನ) ದೇವದಾಸಿಯರ ಮೂಲಕ "ಸಾದಿರ್ ಆಟಂ " (ಆಸ್ಥಾನ ನೃತ್ಯ) ಎಂದು ಮಾಡುತ್ತಿದ್ದರು. ಇ ಕೃಷ್ಣ ಅಯ್ಯರ್ ಮತ್ತು [[ರುಕ್ಮಿಣಿ ದೇವಿ ಅರುಂಡೆಲ್]] ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು <ref>{{cite news|title=Touching tribute|url=http://www.hindu.com/mp/2004/03/06/stories/2004030600190300.htm|accessdate=|newspaper=The Hindu|date=6 March 2004|location=India}}</ref><ref>{{cite news|title=In step with tradition|url=http://www.tribuneindia.com/2006/20060402/spectrum/book6.htm|accessdate=|newspaper=The Sunday Tribune|date=2 April 2006|location=India}}</ref><ref>{{cite news|title=Talibanisation of the performing arts|url=http://www.hindu.com/thehindu/op/2001/12/18/stories/2001121800070100.htm|accessdate=|newspaper=The Hindu|date=18 December 2001|location=India}}</ref> ದೇವಸ್ಥಾನಗಳಲ್ಲಿ ಪ್ರಾಚೀನ ಶಿಲ್ಪಗಳು ಅನೇಕ ಭರತ ನಾಟ್ಯಂನ ಕರಣಗಳು ಅಥವಾ ನೃತ್ಯ ಭಂಗಿಗಳನ್ನು ಆಧರಿಸಿವೆ.
*ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂನ್ನು ಹೇಳಬಹುದು. ಸಂಪ್ರದಾಯದಂತೆ ಗುಡಿಯಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.
Line ೧೭ ⟶ ೧೪:
* ಆದುದರಿಂದ ಭರತನಾಟ್ಯಂ ಮತ್ತು [[ಕರ್ನಾಟಕ ಸಂಗೀತ]]ದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ ಭರತ ನಾಟ್ಯಂನ್ನು ಸಂಗೀತದ ದೃಶ್ಯ ರೂಪಕ,[[ಭಕ್ತಿ]]ಯ ಒಂದು ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಭರತನಾಟ್ಯಂನಲ್ಲಿ ಸಂಗೀತ ಮತ್ತು ನೃತ್ಯ ಬೇರ್ಪದಿಸಲಾಗದ ರಚನೆಗಳು ಮತ್ತು ಕೇವಲ ಸಂಗೀತದ ಅನುಭೂತಿಯಿಂದ ಮಾತ್ರ ನೃತ್ಯವನ್ನು ಆಸ್ವಾದಿಸಲು ಸಾದ್ಯ.
*ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ನೃತ್ತ (ಲಯಬದ್ಧ ಚಲನೆ) ನಾಟ್ಯ (ನಾಟಕೀಯತೆ) ಮತ್ತು ನೃತ್ಯ (ನೃತ್ತ ಮತ್ತು ನಾಟ್ಯದ ಸಂಯೋಜನೆ)[[ತಮಿಳುನಾಡು]] ವಿಶೇಷವಾಗಿ [[ತಂಜಾವೂರು]], ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ. ಭರತನಾಟ್ಯವು ೧೭೯೮-೧೮೨೪ ರಲ್ಲಿ [[ಮರಾಠ]] ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.
*ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರುನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಅಬ್ರಾಹ್ಮಣರಾಗಿದ್ದರುಬ್ರಾಹ್ಮಣರಾಗಿದ್ದರು.
==ಶೈಲಿಗಳು==
:ಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವುಗಳೇಂದರ
Line ೨೭ ⟶ ೨೪:
* ಮೈಸೂರು ಶೈಲಿ<ref>http://www.indianmirror.com/dance/bharatanatyam.html</ref>
==ವೇಶಭೂಷಣ==
 
===ತುಯ್ಯ ಸೀರೆ===
:ದೇವದಾಸಿಯರು ನರ್ತಿಸುತ್ತಿದ್ದಾಗ ಉಪಯೋಗಿಸುತ್ತಿದ್ದ ಉಡುಗೆ-ತೊಡುಗೆಗಳು ಪರಿಷ್ಕಾರವಾಗುತ್ತಲೇ ಬಂದು, ಇಂದು ನಾವು ಹೊಲಿದ ರೀತಿಯ ಉಡುಪನ್ನು ನೋಡಬದುದಾಗಿದೆ. ಸಾಂಪ್ರದಾಯಿಕ ಬಣ್ಣಗಳಾದ ಹಸಿರು, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳ ಉಡುಪುಗಳನ್ನು ಕಾಣಬಹುದು. ಹಿಂದೆ ಒಂಭತ್ತು ಗಜದ ಸೀರೆಯನ್ನು ಉಡುತಿದ್ದರು. ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು. ಮೇಲೆ ಉದ್ದಕ್ಕೆ ಸೊಂಟದವರೆಗೂ ಚೋಲಿಯನ್ನು ಧರಿಸಿ, ಚೋಲಿಯ ತೋಳುಗಳು ಮೊಣಕೈವರೆಗೂ ಬರುವಂತೆ ಇರುತ್ತಿತ್ತು. ಇದಕ್ಕೆ ತುಯ್ಯ ಸೀರೆ ಎಂದು ಕರೆಯುತ್ತಿದ್ದರು. ಇದರೊಂದಿಗೆ ಕಂಠಕ್ಕೆ ಸಣ್ಣ ಹಾರ ಹಾಗೂ ಉದ್ದನೆಯ ಇನ್ನೊಂದು ಹಾರವನ್ನು ಹಾಕುತ್ತಿದ್ದರು. ಸೊಂಟಕ್ಕೆ ಗೆಜ್ಜೆಡಾಬು, ಕೈಗಳಿಗೆ ಕುಸುರಿ ಕೆಲಸ ಮಾಡಿದ ಬಳೆಗಳು, ಕಿವಿಗೆ ಓಲೆ-ಝುಮುಕಿ. ಕೆನ್ನೆ ಸರಪಳಿ, ಮೂಗಿಗೆ ಮೂಗುನತ್ತು ಹಾಗೂ ಬುಲ್ಲಾಕು, ತೊಳ ಬಂದಿಗಳು, ಕಾಲಿಗೆ ಕಾಲಂದುಗೆ, ಕೈಗಳ ಬೇರಳುಗಳಿಗೆ ಉಂಗುರಗಳು, ಕಾಲಲ್ಲಿ ಬೆಳ್ಳಿ ಗೆಜ್ಜೆಗಳು, ಜಡೆ ಬಿಲ್ಲೆ ಹಾಗೂ ಕುಚ್ಚುಗಳನ್ನು ಧರಿಸುತ್ತಿದ್ದರು.
===ಪೈಜಾಮದ ಉಡುಪು===
[[ಚಿತ್ರ:A male Bharata Natyam performer DS.jpg|thumb|ಭರತನಾಟ್ಯ]]
:ಇದರಲ್ಲಿ ಹಲವಾರು ವಿಧಗಳಿವೆ.
#ಕಾಲಕ್ರಮೇಣ ಸೀರೆಯನ್ನು ಕಚ್ಚೆಹಾಕಿ ಉಡುವುದು ಕಡಿಮೆಯಾಗಿ ಪೈಜಾಮ ರೀತಿಯಲ್ಲಿ ಹಾಕಿ ಕೊಳ್ಳುವ ಉಡುಪಾಗಿ ಬದಲಾಯಿತು. ಪೈಜಾಮದಂತೆ ಹೊಲಿದ ಉಡುಪಿಗೆ ಮಧ್ಯದಲ್ಲಿ ಅನೇಕ ಮಡಿಕೆಗಳಿರುವ ಬಟ್ಟೆಯಿದ್ದು, ಚೋಲಿಯ ಮೇಲೆ ಸೆರಗಿನಂತಹ ಒಂದು ಬಟ್ಟೆ ಹೊದ್ದಿರುತ್ತಾರೆ. ಬಟ್ಟೆಯ ಮಡಿಕೆಯು ಮಂಡಿಗಿಂತ ಎರಡು ಇಂಚಿನಷ್ಟು ಉದ್ದವಿರುತ್ತದೆ.
#ಇನ್ನೊಂದು ರೀತಿಯ ಉಡುಪು ಸೀರೆಯ ರೀತಿಯದು. ಒಳಗೆ ಪೈಜಾಮವನ್ನು ಮಂಡಿಯವರೆಗೂ ಹಾಕಿ, ಅದರ ಮೇಲೆ ಸೀರೆಯನ್ನು ಮಂಡಿಯಿಂದ ಮುಕ್ಕಾಲು ಇಂಚಿನಷ್ಟು ಕೆಳಗೆ ಬರುವಂತೆ ಸೀರೆಯನ್ನು ಮಡಚಿ ಹೊಲಿದು, ತದನಂತರ ಅನೇಕ ಬಾರಿ ಮಡಚಿ, ನೆರಿಗೆ ಬರುವ ರೀತಿಯಾಗಿಸುವುದು, ನಂತರ ಸೆರಗನ್ನು ಹೊದ್ದು, ಸುತ್ತಿ ತಂದು ಎಡಪಕ್ಕದಲ್ಲಿ ಮಡಚಿದ ನೆರಿಗೆಗಳನ್ನು ಇಳಿಬಿಡುವುದು.
Line ೩೯ ⟶ ೩೫:
#ಪೈಜಾಮದಲ್ಲಿ ಉದ್ದನೆಯ ನೆರಿಗೆ ಇದ್ದು, ಮೇಲುಗಡೆಯಲ್ಲಿ ಚಿಕ್ಕದಾದ ನೆರಿಗೆ ಇರುವುದು, ನೆರಿಗೆಯಲ್ಲಿ ಮಧ್ಯೆ ಒಂದು ಪಟ್ಟಿಯಂತಹ ಜರಿ ಇರುವುದು.
#ಪೈಜಾಮದ ಉಡುಪಿನಲ್ಲಿ ಮೊಣಕಾಲಿನಿಂದ ಕೆಳಗೆ ಉದ್ದದ ನೆರಿಗೆ ಇದ್ದು,ಈ ನೆರಿಗೆಯ ಕೆಳಗೆ ಮೂರು ಇಂಚಿನ ಮತ್ತೊಂದು ನೆರಿಗೆ ಇದ್ದು ಅದಕ್ಕೆ ಕುಚ್ಚನ್ನು ಕಟ್ಟಿರುತ್ತಾರೆ.
 
==ಪಾಠಕ್ರಮ==
:ಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಗಿಯುತ್ತದೆ
* ಅಂಗ ಸಾಧನೆ,
* ಅಡವುಗಳು,
"https://kn.wikipedia.org/wiki/ಭರತನಾಟ್ಯ" ಇಂದ ಪಡೆಯಲ್ಪಟ್ಟಿದೆ