ಪಟ್ಟದಕಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೨೧ ನೇ ಸಾಲು:
 
ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ.
[[ಚಿತ್ರ:ಪಟ್ಟದಕಲ್ಲು-ಮಲ್ಲಿಕಾರ್ಜುನ.JPG|ಮಲ್ಲಿಕಾರ್ಜುನ ದೇವಾಲಯ|right]]
 
ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.
Line ೩೦ ⟶ ೩೧:
ಇಲ್ಲಿರುವ ಸ್ಮಾರಕಗಳ ಗುoಪನ್ನು ಯುನೆಸ್ಕೋ ೧೯೮೭ ರಲ್ಲಿ '''[[ವಿಶ್ವ ಪರಂಪರೆಯ ತಾಣ]]''' ಎಂದು ಘೋಷಿಸಿದೆ.
 
== ವಿರೂಪಾಕ್ಷ ದೇವಾಲಯ ==
[[ಚಿತ್ರ:ಪಟ್ಟದಕಲ್ಲು-ವಿರೂಪಾಕ್ಷ.JPG]]
 
== ಮಲ್ಲಿಕಾರ್ಜುನ ದೇವಾಲಯ ==
[[ಚಿತ್ರ:ಪಟ್ಟದಕಲ್ಲು-ಮಲ್ಲಿಕಾರ್ಜುನ.JPG]]
{{ಭಾರತದ ವಿಶ್ವ ಪರಂಪರೆಯ ತಾಣಗಳು}}
 
"https://kn.wikipedia.org/wiki/ಪಟ್ಟದಕಲ್ಲು" ಇಂದ ಪಡೆಯಲ್ಪಟ್ಟಿದೆ