ಉಷ್ಣತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಉಷ್ಣತೆ==
[[Image:171879main LimbFlareJan12 lg.jpg|300px|thumb|right|[[ಸೂರ್ಯ]]ನಿಂದ ಸಿಗುವ '''ಉಷ್ಣತೆ''' [[ಭೂಮಿಯ ಜೀವರಾಶಿ]]ಯ ಅಸ್ತಿತ್ವಕ್ಕೆ ಮತ್ತು ಬೆಳವಣಿಗೆಗೆ ಕಾರಣವಾದ ಮೂಲ [[ಶಕ್ತಿ]]. ಉಷ್ಣತೆಯ [[ವಿಙ್ಞಾನ]] ಮತ್ತು ಅದರ ಚಲನೆ/ಪರಿಣಾಮಗಳ ಅಧ್ಯಯನಕ್ಕೆ ಥರ್ಮೋಡೈನಾಮಿಕ್ಸ್ ಎನ್ನುತ್ತಾರೆ.[[ಉಷ್ಣತೆಯ ಪ್ರಸರಣ]]ವನ್ನು ಹಲವು ರೀತಿಯಿಂದ ಮಾಡಬಹುದು.]]
'''ಉಷ್ಣತೆ ನೀವು ಬೆಳಗಿನಿಂದ ಸಂಜೆಯವರೆಗೆ ಹವಾಮಾನದಲ್ಲಿ ಆಗುವ ಬದಲಾವಣೆಗಳ ಅನುಭವವನ್ನು ಪಡೆದಿರುವೀರಾ? ಯಾವಾಗ ತಂಪಿನ ಅನುಭವ ಮತ್ತು ಯಾವಾಗ ಬೆಚ್ಚಗಿನ ಅನುಭವ ವಾಗುವುದು? ಇದು ಏಕೆ ಆಗುತ್ತದೆ? ಉಷ್ಣತೆ''' ಅಥವಾ "ಕಾವು" ಅಥವಾ "ಬಿಸಿ" ಅಥವಾ "ಉಷ್ಣ" ಒಂದು ಶಕ್ತಿರೂಪವಾಗಿದೆ. [[ಭೌತಶಾಸ್ತ್ರ]] [[ಥೆರ್ಮೋಡೈನಾಮಿಕ್ಸ್]] ನಲ್ಲಿ ಇದನ್ನು ಶಕ್ತಿಯನ್ನು ಒಂದು ವಸ್ತು ಅಥವಾ ವ್ಯವಸ್ಥೆಯಿಂದ ಬೇರೆಡೆಗೆ ಪ್ರಸಾರಿಸುವ ಕ್ರಿಯೆಯೆಂದು ಅರ್ಥೈಸಲಾಗುತ್ತದೆ. ಒಂದು ವ್ಯವಸ್ಥೆಯಲ್ಲಿನ ಅಸಂಖ್ಯಾತ ಅಣುಗಳ ಚಲನೆಯ ಸಮಗ್ರ ಪರಿಣಾಮವಾಗಿ ಪ್ರಕಟವಾಗುವ ಶಕ್ತಿಯ ಒಂದು ರೂಪ. ಉಷ್ಣತಾವ್ಯತ್ಯಸವಿರುವ ಎರಡು ವ್ಯವಸ್ಥೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗವಾಗುವ ಶಕ್ತಿಯೇ ಉಷ್ಣ. ಈ ವರ್ಗಾವಣೆ ಅಧಿಕ ಉಷ್ಣತೆಯ ಉಗಮದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ ನಡೆಯುವುದು. ಉಷ್ಣಶಕ್ತಿಯ ಈ ಚಲನೆಗೆ ಉಷ್ಣವಹನವೆಂದು ಹೆಸರು. ಉಷ್ಣತೆಯಿಂದ ಶಕ್ತಿ ಪ್ರಸರಣವು ಔಷ್ಣ ಸಂಪರ್ಕದಿಂದಾಗುತ್ತದೆ. ಔಷ್ಣ ಸಂಪರ್ಕವೆಂದರೆ ವಸ್ತುವಿನ ಮೇಲೆ ಯಾವುದೇ ರೀತಿಯ ಬಲ ಪ್ರಯೋಗಿಸದೇ ಅದರಲ್ಲಿ ಶಕ್ತಿಯನ್ನು ರವಾನಿಸುವುದು ಅಥವಾ ಪ್ರಸರಿಸುವುದು.
ಅತ್ಯಂತ ಸಣ್ಣ ಪ್ರಮಾಣದ ಉಷ್ಣತೆ δQ ಯನ್ನು ತನ್ನ ಕನಿಷ್ಟ [[ತಾಪಮಾನ]] T (ಅಬ್ಸೊಲ್ಯೂಟ್ ಟೆಂಪೆರೇಚರ್), ಮತ್ತು [[ಔಷ್ಣೀಯ ಸ್ತಿತಿಸ್ಥಾಪಕತ್ವ]] (ಥರ್ಮಲ್ ಇಕ್ವಿಲಿಬ್ರಿಯಮ್) ದಲ್ಲಿರುವ ವಸ್ತುವಿಗೆ ರವಾನಿಸಿದರೆ, ಅ ಉಷ್ಣತೆಯ ಪ್ರಮಾಣವು TdS ಎಂದು ಪರಿಗಣಿಸಲ್ಪಡುತ್ತದೆ . ಇಲ್ಲಿ S ವಸ್ತುವಿನ "[[ಎಂಟ್ರೋಪಿ]]".
===ಉಷ್ಣ ಕಿರಣ ===
ಉಷ್ಣ ಕಿರಣಗಳು ಮತ್ತು ಬೆಳಕಿನ ಕಿರಣಗಳು ಎರಡು ಒಂದೇ ಬಗೆ.
ಬಿಸಿನೀರಿನ ಬುಗ್ಗೆ ಬೆಳಕನ್ನು ಉತ್ಪತ್ತಿ ಮಾಡಲಾರದು . ಮಿನುಗುವ ರಂಜಕ ಮುಟ್ಟಲು ತಂಪು . ರಸ್ತೆಯ ಮೇಲಿರುವ ಕಾದ ಕಲ್ಲು ಬೆಳಕನ್ನು ನೀಡಲಾರದು . ಪೂರ್ಣಿಮೆಯ [[ಚಂದ್ರ]] ಪ್ರಜ್ವಲಿಸುವಾಗಲೂ ಸೆಖೆಯಾಗುವುದಿಲ್ಲ . ಬೆಳಕು ಮತ್ತು ಶಾಖ ಎರಡೂ ಸಹಜವಾಗಿಯೇ ವಿಭಿನ್ನ ರೂಪದ ಕಿರಣಗಳೆಂದು ಇವೆಲ್ಲವೂ ಸೂಚಿಸುತ್ತವೆ . ಆದಾಗ್ಯೂ ಬೆಳಕನ್ನು ಕೊಡುವ ಸೂರ್ಯನೇ ಶಾಖವನ್ನೂ ಕೊಡುತ್ತಾನೆ. ಶಾಖ ಕೊಡುವ ಬೆಂಕಿ ಕೊಠಡಿನ್ನೂ ಬೆಳಗುತ್ತದೆ . ಮೋಂಬತ್ತಿಯ ಜ್ವಾಲೆ ಬೆಳಕು ಮತ್ತು ಶಾಖ ಎರಡನ್ನೂ ಉತ್ಪತ್ತಿ ಮಾಡುತ್ತದೆ . ಇವೆಲ್ಲದರ ಆಧಾರದ ಮೇಲೆ ಉಷ್ಣ ಮತ್ತು ಬೆಳಕು ಇವುಗಳ ನಡುವೆ ನಿಕಟ ಸಂಬಂಧವಿದೆ ಎಂದು ತೀರ್ಮಾನಿಸಬಹುದು . ಆದರೆ, ಉಷ್ಣ-ಬೆಳಕುಗಳ ನಡುವಿನ ಸಂಬಂಧ ಚಾಣಾಕ್ಷ ವೀಕ್ಷಕರ ಅರಿವಿಗೂ ಬಹಳ ಕಾಲದವರೆಗೆ ಬಂದೇ ಇರಲಿಲ್ಲ . ಸಂಗೀತಗಾರ -ಖಗೋಳತಜ್ಞ wilhelm Hershel ಎಂಬಾತ ೧೮೦೦ ರಲ್ಲಿ ಸೂರ್ಯನ ಬೆಳಕನ್ನು ಸೋಸಕಗಳ (filter)ಮೂಲಕ ವಿಶ್ಲೇಷಿಸುತ್ತಿದ್ದಾಗ ಸೋಸಕಗಳು ಬಿಸಿಯಾಗುತ್ತಿದ್ದುದನ್ನು ಗಮನಿಸಿ ಸೂರ್ಯನ ಬೆಳಕಿನಲ್ಲಿ ಶಾಖ ಉತ್ಪತ್ತಿ ಮಾಡುವ ಕಿರಣಗಳೂ ಇರಬೇಕೆಂದು ತೀರ್ಮಾನಿಸಿದನು.
"https://kn.wikipedia.org/wiki/ಉಷ್ಣತೆ" ಇಂದ ಪಡೆಯಲ್ಪಟ್ಟಿದೆ