ಗಂಗೋತ್ರಿ ಹಿಮನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಗೋಮುಖ /
 
ಚುNo edit summary
೧ ನೇ ಸಾಲು:
[[Image:gaumukh.jpg|thumb|300px|right|ಗಂಗೋತ್ರಿ ಹಿಮನದಿಯ ಕೆಳಕೊನೆಯಲ್ಲಿರುವ ಗೋಮುಖ. ಹಿನ್ನೆಲೆಯಲ್ಲಿ ಭಾಗೀರಥಿ ಶಿಖರಗಳು.]]
 
'''ಗಂಗೋತ್ರಿ ಹಿಮನದಿ''' [[ಭಾರತ]]ದ [[ಉತರಾಖಂಡಉತ್ತರಾಖಂಡ]] ರಾಜ್ಯದ ಉನ್ನತ [[ಹಿಮಾಲಯ]] ಪ್ರಾಂತ್ಯದಲ್ಲಿರುವ ಒಂದು [[ಹಿಮನದಿ]]. [[ಗಂಗಾ ನದಿಯ]] ಮೂಲವಾದ ಗಂಗೋತ್ರಿ ಹಿಮನದಿಯು ಹಿಮಾಲಯದ ಅತಿ ದೊಡ್ಡ ಹಿಮನದಿಗಳಲ್ಲಿ ಒಂದು. ಇದರಲ್ಲಿರುವ ಹಿಮ ೨೭ ಘನ ಕಿಲೋಮೀಟರ್‌ಗಳಷ್ಟೆಂದು ಅಂದಾಜು ಮಾಡಲಾಗಿದೆ.
 
ಗಂಗೋತ್ರಿ ಹಿಮನದಿಯು ಸುಮಾರು ೩೦ ಕಿ.ಮೀ. ಉದ್ದವಾಗಿದ್ದು ೨ ರಿಂದ ೪ ಕಿ.ಮೀ.ಗಳಷ್ಟು ಅಗಲವಾಗಿದೆ. ಈ ಹಿಮನದಿಯ ಸುತ್ತಲೂ ಗಂಗೋತ್ರಿ ಶ್ರೇಣಿಯ ಹಿಮಾಲಯ ಶಿಖರಗಳಿವೆ. ಇವುಗಳಲ್ಲಿ ಶಿವಲಿಂಗ, ಥಲಯ್ ಸಾಗರ್, ಮೇರು ಮತ್ತು ಭಾಗೀರಥಿ-೩ ಶಿಖರಗಳು ಮುಖ್ಯವಾದವು. ಈ ಸರಣಿಯ ಅತಿ ಎತ್ತರದ ಶಿಖರವಾದ [[ಚೌಖಂಬಾ]]ದ ತಳದಲ್ಲಿ ಉಗಮಿಸುವ ಈ ಹಿಮನದಿಯು ವಾಯವ್ಯ ದಿಕ್ಕಿನಲ್ಲಿ ಸರಿಯುತ್ತದೆ (ಹರಿಯುತ್ತದೆ). ಗಂಗೋತ್ರಿ ಹಿಮನದಿಯ ಕೊನೆಯು ಹಸುವಿನ ಮುಖದ ಆಕಾರದಲ್ಲಿದ್ದು ಅದನ್ನು ಗೋಮುಖ ಎಂದು ಕರೆಯಲಾಗುತ್ತದೆ. ಗೋಮುಖದಲ್ಲಿ ಹಿಮನದಿಯು ನೀರಾಗಿ ಹರಿಯಲಾರಂಭಿಸುವುದರಿಂದ ಈ ಸ್ಥಾನವನ್ನು ಗಂಗಾ ಮೂಲವೆಂದು ತಿಳಿಯಲಾಗುತ್ತದೆ. ಗೋಮುಖ ಹಿಂದೂ ಶ್ರದ್ಧಾಳುಗಳಿಗೆ ಒಂದು ಅತಿ ಪಾವನ ಕ್ಷೇತ್ರವಾಗಿದೆ. ಗೋಮುಖವಿ ಶಿವಲಿಂಗ ಪರ್ವತದ ಬುಡದಲ್ಲಿದೆ. [[ಗಂಗೋತ್ರಿ]]ಯಿಂದ ೧೮ ಕಿ.ಮೀ. ದೂರದಲ್ಲಿರುವ ಗೋಮುಖವನ್ನು ಕಾಲ್ನಡಿಗೆಯಲ್ಲಿ ಕಠಿಣಹಾದಿಯನ್ನು ಕ್ರಮಿಸಿ ತಲುಪಬಹುದಾಗಿದೆ.
"https://kn.wikipedia.org/wiki/ಗಂಗೋತ್ರಿ_ಹಿಮನದಿ" ಇಂದ ಪಡೆಯಲ್ಪಟ್ಟಿದೆ