ಮುಟ್ಟು ನಿಲ್ಲುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
*ಅಂಡಾಶಯಗಳ ಕಾಯಿಲೆಯಿಂದಾಗಲಿ ಇನ್ನಿತರ ನಿರ್ನಾಳಗ್ರಂಥಿಗಳ ಕಾಯಿಲೆಯಿಂದಾಗಲಿ ನಿರ್ದಿಷ್ಟ ಕಾಲಕ್ಕೆ ಮೊದಲೇ ಮುಟ್ಟು ನಿಂತುಹೋಗಬಹುದು. *ಕೆಲವೊಮ್ಮೆ ಅತಿಯಾದ ದೈಹಿಕಕಾಯಿಲೆಗಳಿಂದಲೂ ತೀವ್ರವಾದ ಭಾವಾತ್ಮಕ ಹಾಗೂ ಮಾನಸಿಕ ತೊಂದರೆಯಿಂದಲೂ 40ವರ್ಷಗಳಿಗೂ ಮೊದಲೇ ಮುಟ್ಟು ನಿಂತುಹೋಗಬಹುದು. ಅಂಡಾಶಯಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದು ಅಥವಾ ಎಕ್ಸ್‍ಕಿರಣಗಳಿಂದ ಅವುಗಳ ಕೆಲಸವನ್ನು ನಿಲ್ಲಿಸಿ, ನಿರ್ದಿಷ್ಡ ಕಾಲಕ್ಕೆ ಮೊದಲೇ ಮುಟ್ಟು ನಿಲ್ಲಿಸಬಹುದು. ಆದರೆ ಇಂಥ ವ್ಯಕ್ತಿಗಳಿಗೆ ಮಾನಸಿಕ ಮತ್ತು ನರಸಂಬಂಧಿ ತೊಂದರೆಗಳು ಬಲುಬೇಗನೆ ಬರುತ್ತವೆ.
===ಹೆರುವ ಕಾಲ ಮುಗಿಯುತ್ತ ಬಂದಂತೆ===
ಮುಟ್ಟು ನಿಲ್ಲುವುದನ್ನು ವೈದ್ಯಕೀಯ ದೃಷ್ಟಿಯಂದ ನೋಡಿದರೆ ಮುಖ್ಯವಾಗಿ ಹೆಂಗಸಿನ ಬಾಳಿನಲ್ಲಿ ಮಕ್ಕಳನ್ನು ಹೆರುವ ಕಾಲ ಮುಗಿಯುತ್ತ ಬಂದಂತೆ. ಆಗ ಗರ್ಭಕೋಶದ ಗಡ್ಡೆಗಳು ಮತ್ತು ಅಂಡಾಶಯದ ಗಡ್ಡೆಗಳು ಬರುವ ಸಂಭವ ಹೆಚ್ಚುತ್ತ ಹೋಗುತ್ತದೆ. ಅವ್ಯವಸ್ಥಿತವಾಗಿ ರಕ್ತಸ್ರಾವವಾಗುವುದೇ ಗರ್ಭಕೋಶದ ಏಡಿಗಂತಿ ರೋಗದ ಮೊದಲನೆಯ ಕುರುಹು. ಅತಿಸ್ರಾವವಾಗುವುದು ಗರ್ಭಕೋಶದ ಗಡ್ಡೆಗೆ ಕುರುಹು. ಇವೆರಡೂ ಮುಟ್ಟು ನಿಲ್ಲುವ ಕಾಲಕ್ಕೆ ಬರಬಹುದು. ಆದ್ದರಿಂದ ಹೆಂಗಸು ಇವಕ್ಕೆ ಹೆಚ್ಚು ಗಮನ ಕೊಡದೆ ಇರಬಹುದು ಮತ್ತು ರೋಗಗಳ ಮೊದಲನ್ನು ಅಸಡ್ಡೆ ಮಾಡಬಹುದು. ಹೊಟ್ಟೆ ದಪ್ಪವಾಗಿರುವುದನ್ನು ನಿರ್ಲಕ್ಷಿಸಿ ಅದನ್ನು ಮುಟ್ಟುನಿಂತಮೇಲೆ ಸಾಮಾನ್ಯವಾಗಿ ಬರುವ ಮೈ ಎಂದು ಭಾವಿಸಬಹುದು. ಇಂಥ ಸಂದರ್ಭಗಳಲ್ಲಿ ಯೋಗ್ಯ ವೈದ್ಯಕೀಯಸಲಹೆ ಪಡೆಯುವುದು ಅಪೇಕ್ಷಣೀಯ. (ಜೆ.ವೈ.ಐ.)<ref>https://kn.wikisource.org/s/7od ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಟ್ಟು ನಿಲ್ಲುವಿಕೆ</ref>
ಈ ಸಂದರ್ಭದಲ್ಲಿ ಮೂಳೆಗಳ ಸವೆತ ಆರಂಭವಾಗುತ್ತದೆ. ಬೆನ್ನುಮೂಳೆ ಸೊಂಟದ ಮೂಳೆ ತೊಡೆಯ ಮೂಳೆಗಳು ಅತಿಯಾಗಿ ತೆಳುವಾಗಿ ಬಿಡುತ್ತವೆ (ಆಸ್ಟಿಯೋಪೋರೋಸಿಸ್) ಸಣ್ಣ ಏಟು, ಏಳುವುದು, ಕೂಡುವುದು, ಇಂತಹ ನಿತ್ಯದ ಕೆಲಸಗಳಿಗೇ ಮೂಳೆ ಸುಲಭವಾಗಿ ಮುರಿಯುತ್ತದೆ. ಇದಕ್ಕಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನಿಯಮಿತ ಆಹಾರ, ವ್ಯಾಯಾಮ, ಯೋಗ, ಮಾನಸಿಕ ನೆಮ್ಮದಿಗಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಪ್ರಯೋಜನಕಾರಿ.<ref>https://kn.wikisource.org/s/7od ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಟ್ಟು ನಿಲ್ಲುವಿಕೆ</ref>
 
===ಯೋನಿ ಮತ್ತು ಗರ್ಭಾಶಯ===
ಋತುಸ್ತಬ್ಧದ ಸಮಯದಲ್ಲಿ [[ಋತುಚಕ್ರ|ಋತುಚಕ್ರದ]] ಅವಧಿ ಕಡಿಮೆಯಾಗುತ್ತದೆ (೨-೫ ದಿನಗಳು) ಹಾಗೂ ದೀರ್ಘ ಚಕ್ರಗಳು ಸಾಧ್ಯ. ಕ್ರಮವಲ್ಲದ ರಕ್ತಸ್ರಾವ ಇರಬಹುದು. ಹಾರ್ಮೋನುಗಳ ಬದಲಾವಣೆಗಳಿಂದಾಗಿ ನಿಷ್ಕ್ರಿಯ ಗರ್ಭಾಶಯದ ರಕ್ತಸ್ರಾವ ಕಂಡುಬರುತ್ತದೆ.<ref>https://www.ncbi.nlm.nih.gov/pmc/articles/PMC3443956/</ref>