ಮುಟ್ಟು ನಿಲ್ಲುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
==ಋತುಸ್ತಬ್ಧದ ಲಕ್ಷಣಗಳು==
[[File:Female anatomy with g-spot-en.svg|thumb|420px|ಹೆಣ್ನಿನ ದೇಹದಲ್ಲಿ ಗರ್ಭಕೋಶದ ರಚನೆ ವಿವರ/ Female anatomy with g-spot-en]]
*ಮುಟ್ಟು ನಿಲ್ಲುವಿಕೆ - ಸ್ತ್ರೀಯ ಸಂತಾನಪ್ರಾಪ್ತಿಕಾಲ ಮುಗಿಯಿತೆಂಬುದಕ್ಕೆ ಬಲು ಸ್ಪಷ್ಟ ಕಾರಣವಾಗಿರುವ ಮಾಸಿಕ ರಜಸ್ಸ್ರಾವದ ಸ್ಥಿರನಿಲುಗಡೆ (ಮೆನೋಪಾಸ್ ಆಥವಾ ಕ್ಲೈಮ್ಯಾಕ್ಟೆರಿಕ್). ಜನಜನಿತವಾಗಿ ಇದನ್ನು ದೇಹಕ್ರಿಯೆ ಬದಲಾಗುವ ಪರ್ವಕಾಲ (ಛೇಂಜ್ ಆಫ್ ಲೈಫ್) ಎಂದಿದೆ. ಮುಟ್ಟು ನಿಲ್ಲುವುದು ಮುಖ್ಯವಾಗಿ ಅಂಡಾಶಯಗಳ ಕ್ರಿಯೆ ಮುಗಿಯಿತೆಂಬುದರ ಬಾಹ್ಯಸೂಚನೆ ಅಷ್ಟೆ. ಅಂಡಾಶಯದಲ್ಲಿ ಕ್ಲುಪ್ತವಾಗಿ ಪ್ರತಿ ತಿಂಗಳೂ ಜರಗುವ ವ್ಯಾಪಾರಗಳು ದೇಹದ ರಾಸಾಯನಿಕಸ್ಥಿತಿಯಲ್ಲಿ ತಕ್ಕ ಬದಲಾವಣೆಗಳನ್ನು ಮಾಡುತ್ತವೆ. ಇಂಥ ಬದಲಾವಣೆಗಳಲ್ಲಿ ಇತರ ಅಂತಃಸ್ರಾವ ಗ್ರಂಥಿಗಳಾದ ಥೈರಾಯ್ಡ್ ಮತ್ತು ಪಿಟ್ಯೂಯಿಟರಿಗಳು ಭಾಗವಹಿಸುತ್ತವೆ. ರಜೋ ನಿವೃತ್ತಿಯಲ್ಲಿ ಅಂಡಾಶಯದ ಸ್ರಾವ ಸ್ಥಗಿತಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಧಕ್ಕೆ ಆಗುವುದೂ ಇದೆ.
*ಮುಟ್ಟು ನಿಲ್ಲುವುದಕ್ಕೆ ನಿರ್ದಿಷ್ಟ ಕಾಲವಿಲ್ಲ. ಮುಕ್ಯಾಲುಪಾಲು ಸ್ತ್ರೀಯರಲ್ಲಿ 40-50 ವರ್ಷಗಳಲ್ಲಿ ನಿಲ್ಲುತ್ತದೆ. ಮುಟ್ಟು ನಿಲ್ಲುವ ವಿಧಾನ ಕೂಡ ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಕೆಲವರಲ್ಲಿ ಒಮ್ಮಿಂದೊಮ್ಮೆಗೆ ನಿಂತು ಹೋಗಬಹುದು ಅಥವಾ ಕ್ರಮೇಣ ಕಡಿಮೆಯಾಗಿ ಒಂದೆರಡು ವರ್ಷಗಳಲ್ಲಿ ನಿಂತುಹೋಗಬಹುದು. ಇನ್ನೂ ಕೆಲವರಲ್ಲಿ ಅವ್ಯವಸ್ಥಿತವಾಗಿ ಒಂದೊಂದು ಸಲ ಅತಿಸ್ರಾವವಾಗಬಹುದು.