ಥಾರ್ ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಹವಾಮಾನ ಪರಿಸ್ಥಿತಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೨ ನೇ ಸಾಲು:
ಪಶ್ಚಿಮದಲ್ಲಿರುವ ಸಿಂಧೂ ನದಿಯನ್ನೂ ಆಗ್ನೇಯದಲ್ಲಿರುವ ಲೂನಿ ನದಿಯನ್ನೂ ಬಿಟ್ಟರೆ ಮಿಕ್ಕಂತೆ ಇಲ್ಲಿಯ ಜಲೋತ್ಸಾರಣ ಒಳಮುಖವಾದ್ದು. ಮಳೆಗಾಲದಲ್ಲಿ ಇಲ್ಲಿಯ ಎತ್ತರದ ಸ್ಥಳಗಳಲ್ಲಿ ಶ್ರಾಯೀಣವಾಗಿ ಹೊಳೆಗಳು ಹುಟ್ಟಿ ಹರಿಯುತ್ತವೆ. ಆದರೆ ತುಸ ದೂರ ಸಾಗುವುದರಲ್ಲೇ ಮರಳಿನಲ್ಲಿ ಇಂಗಿ ಹೋಗುತ್ತದೆ. ಇಲ್ಲಿಯ ಮಣ್ಣುಗಳಲ್ಲಿ ಏಳು ಬಗೆ: ಮರುಭೂಮಿಯ ಮಣ್ಣು, ಮರಳು ಮಿಶ್ರಿತ ಮಣ್ಣು, ಕಪ್ಪುಕಂದು ಬೂದು ಮಣ್ಣು, ಅಡಿಬೆಟ್ಟಗಳ ಕೆಂಪು ಹಳದಿ ಮಣ್ಣು, ಅವನತ ಪ್ರದೇಶಗಳ ಉಪ್ಪು ಮಣ್ಣು, ಗಾಳಿಮಳೆಗಳಿಗೆ ಪಕ್ಕಾದ ತೆಳು ಮಣ್ಣು ಮತ್ತು ಬೆಟ್ಟಗಳ ಮೇಲಣ ಮೆದು ಮಣ್ಣು, ಇದೆಲ್ಲ ಸುಣ್ಣ ಮಿಶ್ರಿತ ನೆಲ; ಸಾಮಾನ್ಯವಾಗಿ ಫಲವತ್ತಾದ್ದಲ್ಲ. ಇದು ಗಾಳಿಯಿಂದ ಸವೆತಕ್ಕೆ ಒಳಗಾಗಿ ಮರಳಿನಿಂದ ಕೂಡಿದೆ.
==ಹವಾಮಾನ==
ಮರುಭೂಮಿ ಪ್ರದೇಶದಲ್ಲಿ ವಾರ್ಷಿಕ ಮಳೆ, ಸಾಮಾನ್ಯವಾಗಿ ಬಹು ಅಲ್ಪ. ಪಶ್ಚಿಮದಲ್ಲಿ 4" ಇಂದ ಪೂರ್ವದಲ್ಲಿ 20" ವರೆಗೆ ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಬಹಳ ಮಟ್ಟಿಗೆ ಅನಿಶ್ಚಿತ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ-ಮುಂಗಾರಿನಲ್ಲಿ-ಸೇ. 90 ರಷ್ಟು ಮಳೆ. ಉಳಿದ ಕಾಲದಲ್ಲಿ ಈಶಾನ್ಯದ ಕಡೆಯಿಂದ ಗಾಳಿ ಬೀಸುತ್ತದೆ. ಮೇ, ಜೂನ್, ತಿಂಗಳುಗಳಲ್ಲಿ ಉಷ್ಣತೆ ಅತ್ಯಧಿಕ; 500 ಅ. (122 ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಆಗ ಮಾಧ್ಯ ಕನಿಷ್ಠ ಉಷ್ಣತೆ 50 - 100 ಅ. (410 - 500ಈ) ಮೇ - ಜೂನ್ ತಿಂಗಳುಗಳಲ್ಲಿ 140 - 150 ಕಿಮೀ (87 - 93 ಮೈ) ವೇಗದಲ್ಲಿ ದೂಳಿನಿಂದ ತುಂಬಿದ ಗಾಳಿ ಬೀಸುತ್ತದೆ.ವಾರ್ಷಿಕ ಮಳೆ ಪ್ರಮಾಣ 150 ಮಿಲಿ ಮಳೆ ಅಗುತ್ತದೆ.ಇಲ್ಲಿ ಮೊದಲಿಗೆ ಸರಸ್ವತಿ ನದಿ ಹರಿಯುತ್ತಿತ್ತು ಎಂದು ಅಂದಾಜಿಸಲಾಗಿದೆ.
==ಸಸ್ಯಗಳು==
[[File:Blackbuck male female.jpg|thumb|left|Blackbuck male and female]]
"https://kn.wikipedia.org/wiki/ಥಾರ್_ಮರುಭೂಮಿ" ಇಂದ ಪಡೆಯಲ್ಪಟ್ಟಿದೆ