ಭೂತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೬ ನೇ ಸಾಲು:
1926ರಿಂದ 1952ರ ತನಕ ಈ ವಂಶದ ಎರಡನೆಯ ರಾಜ ಜಿಗ್ಮೆ ವಾಂಗ್‍ಚುಕ್ ಆಳಿದ. ಇವನು ಧಾರ್ಮಿಕ ಪ್ರವೃತ್ತಿಯವನಾಗಿದ್ದು ಧಾರ್ಮಿಕ ಸಂಪ್ರದಾಯಗಳ ಸಂಹಿತೆಯನ್ನು ರೂಪಿಸಿದ. 1949ರಲ್ಲಿ ಸ್ವತಂತ್ರ ಭಾರತ ಸರ್ಕಾರದೊಡನೆ ಈ ರಾಜ ಮಾಡಿಕೊಂಡ ಒಪ್ಪಂದದಂತೆ ಭೂತಾನಿಗೆ ವಾರ್ಷಿಕ ಧನಸಹಾಯವನ್ನು ರೂ. 5 ಲಕ್ಷಕ್ಕೆ ಏರಿಸಲಾಯಿತು. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರಕ್ಕೂ ಭೂತಾನಿಗೆ ಭಾರತದ ಮೂಲಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಯಿತು. ವಿದೇಶಾಂಗ ವ್ಯವಹಾರಗಳಲ್ಲಿ ಭಾರತದ ಸಲಹೆಗೆ ಬದ್ಧವಾಗಿರಲು ಭೂತಾನ ಒಪ್ಪಿಕೊಂಡಿತು.
 
1952ರಿಂದ 1972ರ ತನಕ ಆಳಿದ ಮೂರನೆಯ ರಾಜ ಜಿಗ್ಮೆ ದೋರ್ಜಿ ವಾಂಗ್ ಚುಕ್ ಕಾಲದಲ್ಲಿ ಭೂತಾನ ಒಂದು ಆಧುನಿಕ ರಾಜ್ಯವಾಯಿತು. 1961ರಲ್ಲಿ ಚೀನಾ ಕೊಡಬಯಸಿದ ಆರ್ಥಿಕ ಸಹಾಯವನ್ನು ನಿರಾಕರಿಸಿ ಭಾರತ ಸರ್ಕಾರದ ಸಹಾಯದೊಂದಿಗೆ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಇವನ ಕಾಲದಲ್ಲಿ ಭೂ ಸುಧಾರಣೆಯನ್ನು ಜಾರಿಗೆ ತಂದು ಜೀತಪದ್ಧತಿಯನ್ನು ನಿಷೇಧಿಸಲಾಯಿತು. ನ್ಯಾಯ ಇಲಾಖೆಯನ್ನು ಆಡಳಿತ ಇಲಾಖೆಯಿಂದ ಪ್ರತ್ಯೇಕಿಸಿ ಆಧುನಿಕ ನ್ಯಾಯ ಪದ್ಧತಿಯನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿ ದೇಶದಲ್ಲಿ ಶಾಸನಬದ್ಧ ರಾಜತ್ವಕ್ಕೆ ತಳಹದಿ ಹಾಕಲಾಯಿತು. ಭೂತಾನಿನ ಈಗಿರುವ ದೊರೆ ನಾಲ್ಕನೆಯ ಜಿಗ್ಮೆ ಸಿಂಗ್ಯ ವಾಂಗ್‍ಚುಕ್. ಈತ 1972ರಲ್ಲಿ ಆಧಿಕಾರಕ್ಕೆ ಬಂದ. ಈತನೂ ಭೂತಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ.<ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭೂತಾನ</ref>
 
== ಇದನ್ನೂ ನೋಡಿ ==
* [[ಭೂತಾನದ ಇತಿಹಾಸ]]
"https://kn.wikipedia.org/wiki/ಭೂತಾನ್" ಇಂದ ಪಡೆಯಲ್ಪಟ್ಟಿದೆ