ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೦ ನೇ ಸಾಲು:
==ಭಾಗವತ==
ಭಾಗವತದಲ್ಲಿ ಶ್ರೀಕೃಷ್ಣನ ಕತೆಗಳಿವೆ.
* ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀವೃಷ್ಣನಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು "ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ" ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ವೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.
* ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.
* ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಕೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
"https://kn.wikipedia.org/wiki/ಕೃಷ್ಣ" ಇಂದ ಪಡೆಯಲ್ಪಟ್ಟಿದೆ