ಭರತನಾಟ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೪ ನೇ ಸಾಲು:
:'''ಭರತನಾಟ್ಯ'''ವು [[ದಕ್ಷಿಣ ಭಾರತ]]ದ ಒಂದು ಪಾರಂಪರಿಕ [[ನೃತ್ಯ]] ಕಲೆ. [[ಭರತಮುನಿ]]ಯಿಂದ ರಚಿಸಲ್ಪಟ್ಟ ''[[ನಾಟ್ಯ ಶಾಸ್ತ್ರ]]'' ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಪುರಂದರ ದಾಸವರೇಣ್ಯರು [["ಆಡಿದನೋ ರಂಗ "]] ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಚಲಿತವಿದೆ.
[[ಚಿತ್ರ:Indian-dancer-nataraja.png|thumb|ಭರತನಾಟ್ಯದ ಭಂಗಿ]]
 
==ಭರತ ಪದದ ಅರ್ಥ==
:ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. "ಭ"ಎಂದರೆ ಭಾವ, "ರ" ಎಂದರೆ ರಾಗ, "ತ" ಎಂದರೆ ತಾಳ ಎಂದು ಅರ್ಥವಿದೆ. ಅಂದರೆ ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯ ಎಂದು ಕರೆಯುವುದು ರೂಢಿ.
===ಶ್ಲೋಕ===
:ಭಕಾರೋ ಭಾವಸಂಯುಕ್ತೋ, ರೇಕೋ ರಾಗೇಣ ಸಂಶ್ರೀತಃ, ತಕಾರಸ್ ತಾಳ ಇತ್ಯಾಹುಹು ಭರತಾರ್ಥ ವಿಚಕ್ಶಣೈ ಹಿ
 
==ಹಿನ್ನೆಲೆ==
*
 
==ಶೈಲಿಗಳು==
:ಭರತನಾಟ್ಯವು ತನ್ನದೆ ಆದ ಶೈಲಿಗಳನ್ನು ಹೊಂದಿದೆ. ಅವುಗಳೇಂದರ
* ತಂಜಾವುರು ಶೈಲಿ,
* ಕಲಾಕ್ಷೇತ್ರ ಶೈಲಿ,
Line ೨೦ ⟶ ೧೭:
* ಪಂದನಲ್ಲೂರ್ ಶೈಲಿ,
* ಕಾಂಚೀಪುರಂ ಶೈಲಿ,
* ಮೈಸೂರು ಶೈಲಿ<ref>http://www.indianmirror.com/dance/bharatanatyam.html</ref>
 
==ವೇಶಭೂಷಣ==
 
===ತುಯ್ಯ ಸೀರೆ===
:ದೇವದಾಸಿಯರು ನರ್ತಿಸುತ್ತಿದ್ದಾಗ ಉಪಯೋಗಿಸುತ್ತಿದ್ದ ಉಡುಗೆ-ತೊಡುಗೆಗಳು ಪರಿಷ್ಕಾರವಾಗುತ್ತಲೇ ಬಂದು, ಇಂದು ನಾವು ಹೊಲಿದ ರೀತಿಯ ಉಡುಪನ್ನು ನೋಡಬದುದಾಗಿದೆ. ಸಾಂಪ್ರದಾಯಿಕ ಬಣ್ಣಗಳಾದ ಹಸಿರು, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣಗಳ ಉಡುಪುಗಳನ್ನು ಕಾಣಬಹುದು. ಹಿಂದೆ ಒಂಭತ್ತು ಗಜದ ಸೀರೆಯನ್ನು ಉಡುತಿದ್ದರು. ಪೈಜಾಮದ ಮೇಲೆ ಈ ಸೀರೆಯನ್ನು ಕಚ್ಚೆ ಕಟ್ಟುತ್ತಿದ್ದು, ಸೀರೆಯ ಸೆರಗನ್ನು ಉದ್ದವಾಗಿ ಬಿಟ್ಟು ಒಂದು ಬಾರಿ ಸೊಂಟಕ್ಕೆ ಅದನ್ನು ಸುತ್ತಿ ತದನಂತರ ಅದನ್ನು ಅನೇಕ ನೆರಿಗೆಗಳು ಬರುವಂತೆ ಸೊಂಟಕ್ಕೆ ಮಧ್ಯದಿಂದ ಬೀಸಣಿಗೆಯಂತೆ ಅಗಲಿಸುತ್ತಿದ್ದರು. ಮೇಲೆ ಉದ್ದಕ್ಕೆ ಸೊಂಟದವರೆಗೂ ಚೋಲಿಯನ್ನು ಧರಿಸಿ, ಚೋಲಿಯ ತೋಳುಗಳು ಮೊಣಕೈವರೆಗೂ ಬರುವಂತೆ ಇರುತ್ತಿತ್ತು. ಇದಕ್ಕೆ ತುಯ್ಯ ಸೀರೆ ಎಂದು ಕರೆಯುತ್ತಿದ್ದರು. ಇದರೊಂದಿಗೆ ಕಂಠಕ್ಕೆ ಸಣ್ಣ ಹಾರ ಹಾಗೂ ಉದ್ದನೆಯ ಇನ್ನೊಂದು ಹಾರವನ್ನು ಹಾಕುತ್ತಿದ್ದರು. ಸೊಂಟಕ್ಕೆ ಗೆಜ್ಜೆಡಾಬು, ಕೈಗಳಿಗೆ ಕುಸುರಿ ಕೆಲಸ ಮಾಡಿದ ಬಳೆಗಳು, ಕಿವಿಗೆ ಓಲೆ-ಝುಮುಕಿ. ಕೆನ್ನೆ ಸರಪಳಿ, ಮೂಗಿಗೆ ಮೂಗುನತ್ತು ಹಾಗೂ ಬುಲ್ಲಾಕು, ತೊಳ ಬಂದಿಗಳು, ಕಾಲಿಗೆ ಕಾಲಂದುಗೆ, ಕೈಗಳ ಬೇರಳುಗಳಿಗೆ ಉಂಗುರಗಳು, ಕಾಲಲ್ಲಿ ಬೆಳ್ಳಿ ಗೆಜ್ಜೆಗಳು, ಜಡೆ ಬಿಲ್ಲೆ ಹಾಗೂ ಕುಚ್ಚುಗಳನ್ನು ಧರಿಸುತ್ತಿದ್ದರು.
===ಪೈಜಾಮದ ಉಡುಪು===
[[ಚಿತ್ರ:A male Bharata Natyam performer DS.jpg|thumb|ಭರತನಾಟ್ಯ]]
:ಇದರಲ್ಲಿ ಹಲವಾರು ವಿಧಗಳಿವೆ.
#ಕಾಲಕ್ರಮೇಣ ಸೀರೆಯನ್ನು ಕಚ್ಚೆಹಾಕಿ ಉಡುವುದು ಕಡಿಮೆಯಾಗಿ ಪೈಜಾಮ ರೀತಿಯಲ್ಲಿ ಹಾಕಿ ಕೊಳ್ಳುವ ಉಡುಪಾಗಿ ಬದಲಾಯಿತು. ಪೈಜಾಮದಂತೆ ಹೊಲಿದ ಉಡುಪಿಗೆ ಮಧ್ಯದಲ್ಲಿ ಅನೇಕ ಮಡಿಕೆಗಳಿರುವ ಬಟ್ಟೆಯಿದ್ದು, ಚೋಲಿಯ ಮೇಲೆ ಸೆರಗಿನಂತಹ ಒಂದು ಬಟ್ಟೆ ಹೊದ್ದಿರುತ್ತಾರೆ. ಬಟ್ಟೆಯ ಮಡಿಕೆಯು ಮಂಡಿಗಿಂತ ಎರಡು ಇಂಚಿನಷ್ಟು ಉದ್ದವಿರುತ್ತದೆ.
#ಇನ್ನೊಂದು ರೀತಿಯ ಉಡುಪು ಸೀರೆಯ ರೀತಿಯದು. ಒಳಗೆ ಪೈಜಾಮವನ್ನು ಮಂಡಿಯವರೆಗೂ ಹಾಕಿ, ಅದರ ಮೇಲೆ ಸೀರೆಯನ್ನು ಮಂಡಿಯಿಂದ ಮುಕ್ಕಾಲು ಇಂಚಿನಷ್ಟು ಕೆಳಗೆ ಬರುವಂತೆ ಸೀರೆಯನ್ನು ಮಡಚಿ ಹೊಲಿದು, ತದನಂತರ ಅನೇಕ ಬಾರಿ ಮಡಚಿ, ನೆರಿಗೆ ಬರುವ ರೀತಿಯಾಗಿಸುವುದು, ನಂತರ ಸೆರಗನ್ನು ಹೊದ್ದು, ಸುತ್ತಿ ತಂದು ಎಡಪಕ್ಕದಲ್ಲಿ ಮಡಚಿದ ನೆರಿಗೆಗಳನ್ನು ಇಳಿಬಿಡುವುದು.
#ನೆರಿಗೆಯು ಮೂರು ಮೆಟ್ಟಿಲುಗಳಾಗಿ ಇರುವುದು ಇನ್ನೊಂದು ವಿಧ.
#ಪೈಜಾಮ ಉಡುಪಿನ ನೆರಿಗೆಯು ಸೊಂಟದ ಎಡಪಕ್ಕದಿಂದ ಬಲಕಾಲಿನವರೆಗೂ ಕರ್ಣ ರೇಖೆಯಲ್ಲಿ ನೆರಿಗೆಯಾಗಿ ಧರಿಸುವುದು.
 
==ಪಾಠಕ್ರಮ==
:ಅಂಗ ಸಾಧನೆಯಿಂದ ಆರಂಭವಾಗಿ ತಿಲ್ಲಾನದೊಂದಿಗೆ ಮುಗಿಯುತ್ತದೆ
* ಅಂಗ ಸಾಧನೆ,
* ಅಡವುಗಳು,
Line ೪೪ ⟶ ೪೧:
* ಜಾವಳಿ,
* ಶ್ಲೋಕ,
* ತಿಲ್ಲಾನ''<ref>http://www.cyberkerala.com/bharatanatyam/</ref>
 
==ಛಾಯಾಚಿತ್ರ==
[[ಚಿತ್ರ:A male Bharata Natyam performer DS.jpg|thumb|ಭರತನಾಟ್ಯ]]
==ಆಧಾರ==
*https://en.wikiquote.org/wiki/Bharatanatyam
http://www.indianmirror.com/dance/bharatanatyam.html
==ನೋಡಿ==
 
*[[ಭರತನಾಟ್ಯಂ]]
https://en.wikiquote.org/wiki/Bharatanatyam
==ಉಲ್ಲೇಖ==
 
http://www.cyberkerala.com/bharatanatyam/
 
[[ವರ್ಗ:ನೃತ್ಯ]]
"https://kn.wikipedia.org/wiki/ಭರತನಾಟ್ಯ" ಇಂದ ಪಡೆಯಲ್ಪಟ್ಟಿದೆ